Advertisement

ಮಲಬಾರ್‌ ಗೋಲ್ಡ್ ನಲ್ಲಿ ಲಕ್ಕಿ ಕೂಪನ್‌ ಡ್ರಾ

02:46 PM Mar 19, 2017 | |

ಕಲಬುರಗಿ: ವಿಶ್ವವಿಖ್ಯಾತ ಚಿನ್ನಾಭರಣ ಸಂಸ್ಥೆಯಾದ ಮಲಬಾರ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಹಮ್ಮಿಕೊಂಡಿರುವ ಮಲಬಾರ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಫೆಸ್ಟಿವಲ್‌ 7ನೇ ವಾರದ ಲಕ್ಕಿ ಕೂಪನ್‌ ಡ್ರಾ ನಗರದ ಸ್ಟೇಷನ್‌ ರಸ್ತೆಯಲ್ಲಿರುವ ಮಳಿಗೆಯಲ್ಲಿ ನಡೆಯಿತು. 

Advertisement

ಜಿ.ಪಂ.ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಲಕ್ಕಿ ಡ್ರಾ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮಲಬಾರ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ತನ್ನ ಪ್ರಾಮಾಣಿಕ ಸೇವೆ ಪರಿಶುದ್ದ ಚಿನ್ನಾಭರಣ ಗ್ರಾಹಕರ ಸ್ನೇಹಿ  ಸಂಸ್ಥೆಯಾಗಿದ್ದು ಒಂಭತ್ತು ರಾಷ್ಟ್ರಗಳಲ್ಲಿ 172 ಶಾಖೆಗಳನ್ನು ಹೊಂದಿದ ಅತ್ಯುನ್ನತ ಸಂಸ್ಥೆಯಾಗಿದೆ.

ವಿಶೇಷ ಆನ್‌ಲಾಯಿನ್‌ ಮೂಲಕ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಮಾಡುವ  ಮೂಲಕ ತನ್ನ ಪಾರದರ್ಶಕ ಸೇವೆಯನ್ನು ತೊರಿಸುತ್ತಿದ್ದು, ಇದನ್ನೇ ಮುಂದುವರಿಸಿ ಇನ್ನಷ್ಟು ಎತ್ತರಕ್ಕೆ ಸಂಸ್ಥೆ ಬೆಳೆಯಲಿ ಎಂದು ಶುಭಕೋರಿದರು. 7ನೇ ವಾರದ ಲಕ್ಕಿ ಡ್ರಾ ವಿಜೇತರಾಗಿ ಹುಬ್ಬಳ್ಳಿಯ ಗ್ರಾಹಕರಾದ ಡಾ.ಪೂಜಾ ಬಿ. ಕೆಲಗಾರ ಆಗಿದ್ದಾರೆ.

ಇವರಿಗೆ ನೂರು ಗ್ರಾಂ ಚಿನ್ನದ ಬಿಸ್ಕೇಟ್‌ ನೀಡಲಾಗುವುದು (ಕೂಪನ್‌ ಸಂಖ್ಯೆ:215234) ಮಲಬಾರ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ವತಿಯಿಂದ ಮಾತನಾಡಿದ ವಿಬಿನ್‌ ಬಿ ನಡುಮಲಾ, ಈ ಉತ್ಸವವು ಜ.13 ರಿಂದ ಆರಂಭವಾಗಿದ್ದು ಮಾ.10 ರವರೆಗೆ ಗ್ರಾಹಕರಿಗಾಗಿ ತೆರೆದಿತ್ತು.

ಉತ್ಸವದಲ್ಲಿ ಪ್ರತಿ ಖರೀದಿ ಜೊತೆಗೆ  ಕಡಿಮೆ ದರದಲ್ಲಿ ಗ್ರಾಹಕರಿಗೆ ಚಿನ್ನಾಭರಣ ದೊರಕುವುದಲ್ಲದೆ ಪ್ರತಿ ಖರೀದಿಯ ಜೊತೆ ಖಚಿತ  ಉಡುಗೊರೆಗಳು ಗ್ರಾಹಕರಿಗೆ ಸಿಕ್ಕಿದೆ. ಹಾಗೆಯೇ ಪ್ರತಿ 20 ಸಾವಿರ ರೂ. ಖರೀದಿ ಜೊತೆಗ್ರಾಹಕರಿಗೆ ಲಕ್ಕಿ ಡ್ರಾ ಕೂಪನ್‌ ನೀಡಲಾಯಿತು.

Advertisement

ಗ್ರಾಹಕರು ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು. ಪ್ರತಿ ವಾರ ಒಬ್ಬ ಲಕ್ಕಿ ಗ್ರಾಹಕರನ್ನು ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ವಿಜೇತ ಗ್ರಾಹಕರಿಗೆ 100 ಗ್ರಾಂ ಚಿನ್ನದ ಬಿಸ್ಕೇಟ್‌ ನೀಡಲಾಗುವುದು ಎಂದು ಶಾಖೆಯ ಮುಖ್ಯಸ್ಥರಾದ ವಿಬಿನ್‌ ನಡುಮಲಾ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next