Advertisement

Mala Karkala: ಸುನಿಲ್‌ ಪರ ಸಂಸದ ಗೋಪಾಲ ಶೆಟ್ಟಿ ಮತಯಾಚನೆ

12:23 PM Apr 28, 2023 | Team Udayavani |

ಕಾರ್ಕಳ;ಕಾರ್ಕಳ ಕ್ಷೇತ್ರದಲ್ಲಿ ಕಳೆದ 5 ವರುಷದ ಅವಧಿಯಲ್ಲಿ ಅಭಿವೃದ್ದಿಯ ನವ ಶಕೆಯೇ ನಡೆದಿದೆ. ಬೈಲೂರಿನ ಪರಶುರಾಮ ಥೀಂ ಪಾರ್ಕ್‌ಗೆ ಭೇಟಿ ನೀಡಿದೆ. ನಿಜಕ್ಕೂ ಅದನ್ನು ಕಂಡು ದಿಗ್ಭ್ರಮೆಗೊಂಡೆ.ನೂರಕ್ಕೆ ನೂರು ದೂರದೃಷ್ಟಿಯ ದೃಷ್ಟಿಕೋನದ ಯೋಜನೆಯಿದು. ಸಂಸ್ಕೃತಿ,-ಪರಂಪರೆ ಎರಡೂ ಉಳಿಸುವ ಕಾರ್ಯವಿಲ್ಲಿ ನಡೆದಿದೆ. ಇಂತಹ ದೂರದೃಷ್ಟಿಯ ಅಪರೂಪದ ಶಾಸಕ ಸುನಿಲರನ್ನು ಕ್ಷೇತ್ರದ ಜನ ಕಳೆದುಕೊಂಡು ತಪ್ಪು ಮಾಡಬಾರದು. ಹಾಗಾದಲ್ಲಿ ಅದು ಇಡೀ ಕಾರ್ಕಳ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದು ಮುಂಬಯಿನ ಬೊರಿವಲಿಯ ಕ್ಷೇತ್ರದ ಸಂಸದ ಗೋಪಾಲ ಶೆಟ್ಟಿ ಅಭಿಪ್ರಾಯ ಪಟ್ಟರು.

Advertisement

ಮಾಳ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದ ಅವರು ಪಾರ್ಕ್‌ ಉದ್ಘಾಟನೆ ದಿನ ಕ್ಷೇತ್ರಕ್ಕೆ ಮೋದಿಯವರ ಭೇಟಿ ನಿಮಿತ್ತ ಅಂದು ಬರಲು ಸಾಧ್ಯವಾಗಿರಲಿಲ್ಲ. ಥೀಂ ಪಾರ್ಕ್‌ ಇಲ್ಲಿನ ಡೆವಲೆಪ್‌ ಮೆಂಟ್‌ ಬಗ್ಗೆ ಮುಂಬಯಿನ ಪ್ರತಿಯೊಬ್ಬರಿಗೂ ತಿಳಿದಿದೆ. ನನ್ನ ಜೀವನದಲ್ಲಿ 25ಕ್ಕೂ ಅಧಿಕ ಮಹಾಪುರುಷರ ಪ್ರತಿಮೆ ಸ್ಥಾಪಿಸಿದ್ದು ಕಂಡಿದ್ದೇನೆ ಅದು ಎಲ್ಲ ಸೇರಿದರೂ ಪರಶುರಾಮ ಥೀಂ ಪಾರ್ಕ್‌ಗೆ ಸಮವಾಗದು. ಪಾರ್ಕ್‌ ಜನ ನೋಡುವ ವಿಷ್ಯವಲ್ಲ. ಮುಂದಿನ ಜನಾಂಗಕ್ಕೆ ಸನಾತನ ಧರ್ಮದ ಉಳಿವಿನ ಕಾರ್ಯ ಇಲ್ಲಿ ನಡೆದಿದೆ.ಇಂತಹ ಶ್ರಮಜೀವಿ. ಹೊಸತನ ಕಾಣುವ ಮತ್ತೊಬ್ಬ ಕನಸುಗಾರ ಶಾಸಕ ಸಿಗುವುದು ಕಷ್ಟ. ಕ್ಷೇತ್ರದ ಜನ ಮತ್ತೊಮ್ಮೆ  ಸುನಿಲರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕ್ಷೇತ್ರದ ಮತ್ತಷ್ಟೂ ಅಭಿವೃದ್ದಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಕಟ್ಟ ಕಡೆ ವ್ಯಕ್ತಿಗೂ ನ್ಯಾಯ;ಸುನಿಲ್‌
ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಈದು- ಮಾಳದಂತಹ ಗ್ರಾಮೀಣ ಭಾಗದ ರಸ್ತೆಗಳಿಗೆ ಕಾಯಕಲ್ಪ, ಸೇತುವೆ ನಿರ್ಮಾಣ, ಕಿಂಡಿಅಣೆಕಟ್ಟು, ವಿದ್ಯುತ್‌ ಸಮಸ್ಯೆಗೆ ಪರಿವರ್ತಕ, ಸಬ್‌ ಸ್ಟೇಶನ್, ಬಡವರಿಗೆ ಹಕ್ಕುಪತ್ರ ವಿತರಣೆ ಮೊದಲಾದ ಮೂಲಭೂತ ಸೌಕರ್ಯ ಕಲ್ಲಿಸಿ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸಿದ್ದೇನೆ. ಮತ್ತೊಮ್ಮೆ ಆಶಿರ್ವದಿಸಿದರೆ ಗ್ರಾಮಗಳ ಕಲ್ಯಾಣಕ್ಕೆ ಭರಪೂರ ಕೊಡುಗೆ ನೀಡುವುದಾಗಿ ಹೇಳಿದರು. ವೇದಿಕೆಯಲ್ಲಿ ಪ್ರಮುಖರಾದ ರೋಹಿತ್‌ ಹೆಗಡೆ ಎರ್ಮಲ್ ಹರೀಶ್‌ ಶೆಟ್ಟಿ ಎರ್ಮಲ್ , ಸ್ಥಳಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಂಗ್ರೆಸ್ಸಿಗರನ್ನೆ ಮರು ಸೇರ್ಪಡೆ!
ಕಾರ್ಕಳ: ಕಾಂಗ್ರೆಸ್ಸಿಗೆ ಕಾರ್ಯಕರ್ತರ ಅಭಾವವಿದ್ದು, ಮುಜುಗರದಿಂದ ಪಾರಾಗಲು ಕಾಂಗ್ರೆಸ್‌ ಅವರದೇ ಪಕ್ಷದ ಕಾರ್ಯಕರ್ತರನ್ನೆ ಮರಳಿ ಕರೆತಂದು ಪಕ್ಷದ ಧ್ವಜ ನೀಡಿ ಪಕ್ಷ ಸೇರ್ಪಡೆಗೊಳಿಸುತ್ತಿದೆ. ಪ್ರಚಾರಕ್ಕಾಗಿ ಇದನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಹೇಳಿದ್ದಾರೆ. ಕಳೆದ ನಾಲ್ಕು ವರುಷ ಕಾರ್ಕಳದಲ್ಲಿ ಅಸ್ತಿತ್ವವನ್ನೆ ಕಳೆದುಕೊಂಡಿದ್ದ ಕಾಂಗ್ರೆಸ್‌ ದಿವಾಳಿತನಕ್ಕೆ ತಳ್ಳಲ್ಪಟ್ಟಿತ್ತು. ಕಾಂಗ್ರಸ್‌ ಅನ್ನು ಹುಡುಕುವ ಪರಿಸ್ಥಿತಿ ಇದೆ. ಪಕ್ಷದಲ್ಲಿ ಅಳಿದುಳಿದವರನ್ನು, ತಟಸ್ಥರಾಗಿದ್ದವರನ್ನು ಹುಡುಕಿ ಹೋಗಿ ಕರೆ ತಂದು ವೇದಿಕೆ ಹತ್ತಿಸಿ, ಪಕ್ಷದ ಧ್ವಜ ನೀಡಿ ಸೇರ್ಪಡೆ ಮಾಡುತ್ತಿದೆ. ಹಣ, ಅಮಿಷ ಒಡ್ಡುವ ಮೂಲಕವು ಪಕ್ಷ ಸೇರ್ಪಡೆ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರು ಸಿದ್ಧಂತ ಬೆಳೆಸಿಕೊಂಡವರು ಯಾರೂ ಪಕ್ಷ ಬಿಟ್ಟು ಹೋಗಿಲ್ಲ. ಕಾಂಗ್ರೆಸನ್ನೆ ನಂಬದ ಜನ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸೇರುತ್ತಿದ್ದಾರೆ ಎಂಬುದನ್ನು ನಂಬಲು ಸಾಧ್ಯವಿಲ್ಲ . ಅಪಪ್ರಚಾರ, ಸುಳ್ಳು, ನಾಟಕಗಳಿಂದ ಗೆಲ್ಲಬಹುದು ಎನ್ನುವುದು ಕಾಂಗ್ರೆಸ್‌ ಭ್ರಮೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next