Advertisement
ಈಗಾಗಲೇ ಕುಪ್ಪಳ್ಳಿಯ ಕವಿಮನೆ, ಕವಿಶೈಲ, ಜೋಗ್‌ಫಾಲ್ಸ್, ಮೈಸೂರಿನ ವೈಭವಗಳು ಲಾಲ್‌ಬಾಗ್‌ನಲ್ಲಿ ಮರುಸೃಷ್ಟಿಯಾಗಿದೆ. ಅಂಥದ್ದೇ ಮತ್ತೂಂದು ಪ್ರದರ್ಶನಕ್ಕೆ ಭಾರೀ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಬರುತ್ತಿರುವವನು “ಬಾಹುಬಲಿ’… ಫೆಬ್ರವರಿಯಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕಕ್ಕೆ ಶ್ರವಣ ಬೆಳಗೊಳದಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ.
ಬಾಹುಬಲಿ ಮೇಕಿಂಗ್ ಹೇಗಿದೆ? * ಹೂವು, ಮರ- ಗಿಡ, ಬಂಡೆ, ಫೈಬರ್ ಬಳಸಿಕೊಂಡು ಶ್ರವಣಬೆಳಗೊಳದ ಗೊಮ್ಮಟಗಿರಿಯನ್ನು ಲಾಲ್‌ಬಾಗ್‌ನಲ್ಲಿ ಸೃಷ್ಟಿಸಲಾಗುತ್ತಿದೆ. ಅದರ ಮೇಲ್ಭಾಗದಲ್ಲಿ ಅರ್ಧ ಭಾಗ ಕಾಣುವಂತೆ ಗೊಮ್ಮಟನ ಪ್ರತಿಕೃತಿಯನ್ನು ನಿರ್ಮಿಸಲಾಗುವುದು.
Related Articles
Advertisement
* ಹಿಂಭಾಗದ ವಿಭಾಗದಲ್ಲಿ ಭರತ- ಬಾಹುಬಲಿಯರ ನಡುವೆ ನಡೆದ ಯುದ್ಧದ ಸನ್ನಿವೇಶಗಳನ್ನು ಕಟ್ಟಿ ಕೊಡಲಾಗುತ್ತಿದೆ. ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧ, ಚಕ್ರಪ್ರಯೋಗ, ನಂತರ ವಿರಾಗಿಯಾಗಿ ನಿಲ್ಲುವ ಬಾಹುಬಲಿಯ ಕಲಾಕೃತಿಗಳನ್ನು ಫೈಬರ್‌ನಿಂದ ನಿರ್ಮಿಸಲಾಗುವುದು. ಅದಕ್ಕೆ ಹೂವಿನ ಅಲಂಕಾರವನ್ನೂ ಮಾಡಲಾಗುತ್ತದೆ.
* ಗಾಜಿನ ಮನೆಯ ಬಲಭಾಗದಲ್ಲಿ 18-20 ಅಡಿ ಎತ್ತರದ ಬಾಹುಬಲಿ ಮೂರ್ತಿಯನ್ನು ನಿರ್ಮಿಸಿ, ಅದರ ಮೇಲೆ ಬಣ್ಣದ ನೀರು ಬೀಳುವಂತೆ ಮಾಡಿ ಮಸ್ತಕಾಭಿಷೇಕದ ವೈಭವವನ್ನು ಕಣ್ಮುಂದೆ ತರುವ ಪ್ರಯತ್ನ ನಡೆದಿದೆ.
ಜನಮನ್ನಣೆ: ಪ್ರತಿ ವರ್ಷ ಸ್ವಾತಂತ್ರೊéàತ್ಸವ ಮತ್ತು ಗಣರಾಜ್ಯೋತ್ಸವದ ನಿಮಿತ್ತ ತೋಟಗಾರಿಕಾ ಇಲಾಖೆ ವತಿಯಿಂದ ಲಾಲ್‌ಬಾಗ್ ಬೊಟಾನಿಕ್ ಗಾರ್ಡನ್‌ನಲ್ಲಿ ಪುಷ್ಪ ಪ್ರದರ್ಶನ ನಡೆಯುತ್ತದೆ. ಇಲ್ಲಿಯವರೆಗೆ ಗುಸ್ಟವ್ ಹರ್ಮನ್ ಕ್ರುಂಬಿಗಲ್ (ಲಾಲ್‌ಬಾಗ್ ಗಾರ್ಡನ್‌ನ ಡಿಸೈನರ್ ), ತೋಟಗಾರಿಕಾ ಪಿತಾಮಹ ಡಾ. ಎಂ.ಎಚ್. ಮರಿಗೌಡರು, ಮೈಸೂರು ಮಹಾರಾಜರು ಹಾಗೂ ದಸರಾ ವೈಭವ, ರಾಷ್ಟ್ರಕವಿ ಕುವೆಂಪು ಹಾಗೂ ಕವಿಮನೆ ಪರಿಕಲ್ಪನೆಯಲ್ಲಿ ನಡೆದ ಪ್ರದರ್ಶನಗಳು ಜನಮನ್ನಣೆ ಗಳಿಸಿವೆ.
ಎಲ್ಲಿ?: ಲಾಲ್‌ಬಾಗ್ ಯಾವಾಗ?: ಜನವರಿ 19-28