Advertisement

ಹಸಿ ಕಸದಿಂದ ಗೊಬ್ಬರ ತಯಾರಿಕೆ: ಗೆಹ್ಲೋಟ್‌

03:13 PM Feb 12, 2021 | Team Udayavani |

ಬಳ್ಳಾರಿ: ನಗರವನ್ನು ಸ್ವತ್ಛವಾಗಿಡುವ ನಿಟ್ಟಿನಲ್ಲಿ ಎಲ್ಲ ಸಾರ್ವಜನಿಕರು ಕಸವನ್ನು ಒಣ ಮತ್ತು ಹಸಿಕಸ ಎಂದು ವಿಂಗಡಿಸಿ ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡುವುದರ ಮೂಲಕ ಪೌರಕಾರ್ಮಿಕರಿಗೆ ಮತ್ತು ಮಹಾನಗರ ಪಾಲಿಕೆಗೆ ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್‌ ಹೇಳಿದರು.

Advertisement

ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವತ್ಛ ಬಳ್ಳಾರಿ ಅಭಿಯಾನದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ ಸಾರ್ವಜನಿಕರು ಹಸಿಕಸ ಮತ್ತು ಒಣಕಸವನ್ನು ವಿಂಗಡಗಿಸಿ ನೀಡುವುದರಿಂದ ಕಸವನ್ನು ಪುನರ್‌ ಬಳಕೆ ಮಾಡಲು ಅನುಕುಲವಾಗುತ್ತದೆ. ಕಸ ವಿಲೇವಾರಿ ಮಾಡುವುದರಿಂದ ತುಂಬಾ ಅನುಕೂಲವಾಗುತ್ತದೆ.

ಹಸಿಕಸವನ್ನು ಕಾಂಪೋಸ್ಟ್‌ ಪಿಟ್‌ನಲ್ಲಿ ಹಾಕಿ ಅದರಿಂದ ಗೊಬ್ಬರವನ್ನು ತಯಾರಿಸಿ ಅವರ ಕಾಲೋನಿಯಲ್ಲಿನ ಪಾಕ್‌ ìಗಳಲ್ಲಿ ಆ ಗೊಬ್ಬರವನ್ನು ಉಪಯೋಗಿಸಲಾಗುತ್ತದೆ. ಈ ಕಸ ವಿಲೇವಾರಿ ಮಾಡಲು ಜನರಿಗೆ ಮಾಹಿತಿಗಾಗಿ, ತರಬೇತಿಗೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ನೋಪಾಸನಾ ಸಂಸ್ಥೆಗೆ ವಹಿಸಲಾಗಿದೆ ಎಂದರು. ಯೋಜನೆಗೆ ಬೇಕಾಗಿರುವ ಜೆಸಿಬಿ ಹಾಗೂ ಇನ್ನಿತರೆ ಪರಿಕರಗಳನ್ನು ಮಹಾನಗರ ಪಾಲಿಕೆ ವತಿಯಿಂದನೀಡಲಾಗುತ್ತದೆ. ಯೋಜನೆ ಕಾರ್ಯರೂಪಕ್ಕೆ ಬಂದ 6 ತಿಂಗಳ ನಂತರ ಯಾವ ಕಾಲೋನಿಯ ಜನರು ಹಸಿಕಸದಿಂದ ಗೊಬ್ಬರ  ತಯಾರಿಸಿಕೊಂಡು ಅವರ ಕಾಲೋನಿಯನ್ನು ಸ್ವತ್ಛವಾಗ ಇಟ್ಟುಕೊಳ್ಳುತ್ತಾರೋ ಅವರಿಗೆ ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು ಎಂದು ವಿವರಿಸಿದರು.

ಇದನ್ನೂ ಓದಿ:ಸಕಾಲ ಅರ್ಜಿ ತ್ವರಿತವಾಗಿ ವಿಲೇವಾರಿಯಾಗಲಿ

ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ| ಹನುಮಂತಪ್ಪ ಮಾತನಾಡಿ, ಮಹಾನಗರ ಪಾಲಿಕೆಯ ವತಿಯಿಂದ ಕಸವಿಲೇವಾರಿ ವಾಹನ ಬಂದಾಗ ಹಸಿಕಸ ಮತ್ತು ಒಣಕಸ ಬೇರೆ ಬೇರೆ ಮಾಡಿ ಕೊಡಬೇಕು. ಇದರಿಂದಮಹಾನಗರಪಾಲಿಕೆಗೆ ಘನ ತ್ಯಾಜ್ಯ ವಿಲೆವಾರಿ ಮಾಡಲು ಮತ್ತು  ಬಳ್ಳಾರಿ ನಗರವನ್ನು ಸ್ವತ್ಛ ಮಾಡಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

Advertisement

ಸಭೆಯಲ್ಲಿ ನೋಪಸನಾ ಸಂಸ್ಥೆಯ ನಿರ್ದೇಶಕ ಎಂ.ಎ. ಶಕೀಬ್‌ ಅವರು ಸ್ವತ್ಛ ಬಳ್ಳಾರಿ ಅಭಿಯಾನಕ್ಕೆ ಸಂಬಂಧಿ ಸಿದಂತೆ ತಾಂತ್ರಿಕ ಸಲಹೆ ನೀಡಿದರು. ನಗರದ ಡಿಎಆರ್‌ ಪೊಲೀಸ್‌ ಕಾಲೋನಿ, ಬಿಎಸ್‌ಎನ್‌ಎಲ್‌, ಎಲ್‌ಐಸಿ, ಎನ್‌ ಇಕೆಎಸ್‌ಆರ್‌ಟಿಸಿ, ಅರಣ್ಯ ಇಲಾಖೆ, ನೀರಾವರಿ ಇಲಾಖೆ, ಅಂಚೆ ಇಲಾಖೆ, ಲೋಕೋಪಯೋಗಿ ಇಲಾಖೆ, ತುಂಗಭದ್ರಾ ಬೋರ್ಡ್‌, ವಿಮ್ಸ್‌ ಕಾಲೋನಿ, ಮಣ್ಣಿನ ಸಂರಕ್ಷಣೆ ಇಲಾಖೆ, ಹಾಗೂ ಸರ್ಕಾರಿ ವಸತಿ ಕಾಲೋನಿಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next