Advertisement
ರಾಮಗಾಂಪಾ ತೇಜಾ ಹೈದರಾಬಾದ್ ಮೂಲದ ಐಟಿ ಉದ್ಯೋಗಿಯೊಬ್ಬ ಕೋವಿಡ್ 19 ಮಹಾವೈರಸ್ ನಿಂದ ಗುಣಮುಖ ಹೊಂದಿದ ವಿಷಯವನ್ನು ಮನ್ ಕೀ ಬಾತ್ ನಲ್ಲಿ ಹಂಚಿಕೊಂಡಿದ್ದರು. ತೇಜಾ ಮೊದಲು ಪರೀಕ್ಷೆಗೊಳಗಾದಾಗ ಕೋವಿಡ್ 19 ಸೋಂಕು ಪಾಸಿಟಿವ್ವರದಿ ಬಂದಿತ್ತು. ಆದರೆ ಆತ ಅದನ್ನು ನಂಬಿರಲಿಲ್ಲವಾಗಿತ್ತು. ಕೂಡಲೇ ಆತ ಆಸ್ಪತ್ರೆಗೆ ದಾಖಲಾಗಿದ್ದ. ಈತ ಕಚೇರಿ ಕೆಲಸದ ಮೇಲೆ ದುಬೈಗೆ ಭೇಟಿ ನೀಡಿ ವಾಪಸ್ ಬಂದಾಗ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿತ್ತು.
Related Articles
Advertisement
ನೀವೊಬ್ಬ ಐಟಿ ಉದ್ಯೋಗಿ. ನಿಮ್ಮ ಸ್ಟೋರಿಯನ್ನು ಆಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ವೈರಲ್ ಮಾಡಿ. ಇದರಿಂದಾಗಿ ಜನರು ಭಯಭೀತರಾಗುವುದಿಲ್ಲ. ಅಲ್ಲದೇ ಕೋವಿಡ್ ವೈರಸ್ ಅನ್ನು ಹೇಗೆ ಎದುರಿಸಬಹುದು ಎಂಬ ಬಗ್ಗೆ ಮನವರಿಕೆಯಾಗಲಿದೆ ಎಂದು ಮೋದಿ ತೇಜಾ ಅವರಿಗೆ ಸಲಹೆ ನೀಡಿದ್ದರು.
ಮೋದಿ ಹೇಳಿದ ಎರಡನೇ ಪ್ರಸಂಗ:ಕೋವಿಡ್ 19 ಮಹಾಮಾರಿ ಸೋಂಕಿನಿಂದ ಗುಣಮುಖರಾದ ಆಗ್ರಾದ ಅಶೋಕ್ ಕಪೂರ್ ಎಂಬ ವ್ಯಕ್ತಿಗೂ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ್ದರು. ಕಪೂರ್ ಹಾಗೂ ಆತನ ಇಡೀ ಕುಟುಂಬಕ್ಕೆ ಕೋವಿಡ್ 19 ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ವರದಿ ಬಂದಿತ್ತು. ಕಪೂರ್ ಹಾಗೂ ಆತನ ಇಬ್ಬರು ಮಕ್ಕಳು, ಅಳಿಯ ಶೂ ಮೇಳಕ್ಕಾಗಿ ಇಟಲಿಗೆ ತೆರಳಿದ್ದರು. ಅಲ್ಲಿಂದ ವಾಪಸ್ ಆಗ್ರಾಕ್ಕೆ ಬಂದ ಮೇಲೆ ಅಳಿಯ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ಹೋಗಿದ್ದ. ಆತ ನನ್ನ ಇಬ್ಬರು ಮಕ್ಕಳಿಗೂ ಪರೀಕ್ಷಿಸಿಕೊಳ್ಳುವಂತೆ ಸೂಚಿಸಿದ್ದ. ನಂತರ ಆಗ್ರಾ ಆಸ್ಪತ್ರೆಗೆ ಹೋದಾಗ ವೈದ್ಯರು ಹೇಳಿದರು, ಇಡೀ ಕುಟುಂಬ ಸದಸ್ಯರು ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಿದ್ದರು. ಅದರಂತೆ ಕಪೂರ್ 73ವರ್ಷ, ಪತ್ನಿ, ಆತನ ಇಬ್ಬರು ಮಕ್ಕಳು, ಸೊಸೆ, ಮೊಮ್ಮಕ್ಕಳನ್ನು ಪರೀಕ್ಷಿಸಿದಾಗ ಇಡೀ ಕುಟುಂಬದ ವರದಿ ಪಾಸಿಟಿವ್ ಎಂದು ಬಂದಿತ್ತು! ನಂತರ ಎರಡು ಆ್ಯಂಬುಲೆನ್ಸ್ ನಲ್ಲಿ ಇಡೀ ಕುಟುಂಬ ಸದಸ್ಯರು ದೆಹಲಿಯ ಸಪ್ಧರ್ ಜಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ನಾನು ಆರೋಗ್ಯವಾಗಿದ್ದೇನೆ. ಈ ವೇಳೆ ಮೊಣಕಾಲು ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿರುವುದಾಗಿ ಕಪೂರ್ ಪ್ರಧಾನಿಗೆ ತಿಳಿಸಿದ್ದರು. ಕೋವಿಡ್ 19 ಮಹಾಮಾರಿ ಹರಡುವುದನ್ನು ತಡೆಗಟ್ಟಲು ಪ್ರಧಾನಿ ಮೋದಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದು, ಐದು ದಿನದ ಬಳಿಕ ಭಾನುವಾರ ದೇಶದ ಜನತೆಯನ್ನು ಉದ್ದೇಶಿಸಿ ಮನ್ ಕೀ ಬಾತ್ ನಲ್ಲಿ ಮಾತನಾಡುತ್ತಿ ಈ ಎರಡು ಸ್ಪೂರ್ತಿದಾಯಕ ಪ್ರಸಂಗಗಳನ್ನು ಹೇಳಿದ್ದರು.