Advertisement

ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

05:40 PM Dec 01, 2020 | Suhan S |

‌ಕನಕಪುರ: ಗ್ರಾಮೀಣ ಜನರ ಪಾಲಿಗೆ ವರದಾನವಾಗಿರುವ ನರೇಗಾ ಯೋಜನೆಯನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಚಿಕ್ಕಮುದುವಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಮಯ್ಯ ಸಲಹೆ ನೀಡಿದರು.

Advertisement

ತಾಲೂಕಿನ ಕಸಬಾ ಹೋಬಳಿಯ ಚಿಕ್ಕಮುದುವಾಡಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು,ಗ್ರಾಮೀಣ ಭಾಗದ ಉದ್ಯೋಗ ರಹಿತರಿಗೆ ನರೇಗಾ ಯೋಜನೆಯಲ್ಲಿ 100 ಮಾನವ ದಿನಗಳನ್ನು ಸೃಜಿಸಲುಅವಕಾಶವಿದ್ದು, ಪುರುಷ ಮಹಿಳೆ ಎಂಬ ಭೇದಭಾವವಿಲ್ಲದೆ ದಿನವೊಂದಕ್ಕೆ 275ರೂ. ಸಮಾನ ವೇತನ ನಿಗದಿಯಾಗಿದೆ. ಒಂದು ಜಾಬ್‌ ಕಾರ್ಡ್‌ ನೋಂದಣಿ ಮಾಡಿಕೊಂಡರೆ ವಾರ್ಷಿಕ 40 ಸಾವಿರ ರೂ.ನರೇಗಾ ಸೌಲಭ್ಯಪ್ರತಿಯೊಬ್ಬರಿಗೂ ಸಿಗಲಿದೆ ಎಂದು ಹೇಳಿದರು.

ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ನಮ್ಮ ಗ್ರಾಮ ಪಂಚಾಯಿತಿಯಲ್ಲಿ 1900 ಜಾಬ್‌ ಕಾರ್ಡ್‌ ಮಾಡಿಕೊಳ್ಳಲು ಅವಕಾಶವಿದೆ. ಈಗಾಗಲೇ 1424 ಜಾಬ್‌ ಕಾರ್ಡುಗಳು ನೋಂದಣಿಯಾಗಿವೆ. ಉಳಿದಂತೆಇದರಿಂದವಂಚಿತವಾಗಿರುವ400 ರಿಂದ 500 ಫ‌ಲಾನುಭವಿಗಳು, ಜತೆಗೆ ಲಾಕ್‌ಡೌನ್‌ನಿಂದ ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ವಲಸೆ ಮರಳಿರುವ ಉದ್ಯೋಗ ರಹಿತರು ಜಾಬ್‌ ಕಾರ್ಡ್‌ಗಳಿಗೆ ನೋಂದಣಿ ಮಾಡಿಕೊಂಡು ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿವರಿಸಿದರು.

ಗ್ರಾಮಸಭೆಗಳ ಮಹತ್ವ ತಿಳಿಯಿರಿ: ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತುರಾಜ್‌ ಮಾತನಾಡಿ,ನರೇಗಾ ಯೋಜನೆ ಜಾರಿಯಾಗಿ ಅನೇಕ ವರ್ಷಗಳೇ ಕಳೆದಿವೆ. ಯೋಜನೆಯಲ್ಲಿ ಬಹುತೇಕ ಗ್ರಾಮೀಣ ಭಾಗದ ಜನರು ಉಪಯೋಗವನ್ನು ಪಡೆದುಕೊಂಡಿದ್ದಾರೆ. ಆದರೂ, ಈವರೆಗೆ ಗ್ರಾಮ ಸಭೆಗಳ ಮಹತ್ವ ತಿಳಿದಿರುವುದು ಮಾತ್ರ ವಿಪರ್ಯಾಸ ಎಂದು ಹೇಳಿದರು.

ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳಿ: ಗ್ರಾಮಸಭೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಜನಪ್ರತಿನಿಧಿಗಳು ಸಭೆಗೆ ಹಾಜರಾಗದೆ ಇರುವುದು ಮತ್ತೂಂದು ವೈಫ‌ಲ್ಯ. ಗ್ರಾಮೀಣ ಭಾಗದ ಅಭಿವೃದ್ಧಿ ಬಹುತೇಕ ಗ್ರಾಮ ಪಂಚಾಯಿತಿಯಗ್ರಾಮಸಭೆಗಳಿಂದಲೇ ಆರಂಭಗೊಳ್ಳುತ್ತವೆ. ಹಾಗಾಗಿಪ್ರತಿಯೊಬ್ಬರೂ ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ವಿವರಿಸಿದರು.

Advertisement

ನರೇಗಾ ಯೋಜನೆ ಜಾರಿಯಾಗುವ ಮುನ್ನ ಯಾವುದೇ ಒಂದು ಸರ್ಕಾರದಸೌಲಭ್ಯಗಳನ್ನು ಪಡೆಯಬೇಕಾದರೆ ವರ್ಷಗಟ್ಟಲೆ ಕಾಯಬೇಕಿತ್ತು. ಆದರೆ, ಇಂದು ಆ ಪರಿಸ್ಥಿತಿ ಇಲ್ಲ. ನಮ್ಮ ರೇಷ್ಮೆಇಲಾಖೆಯಲ್ಲಿ ಹೊಸದಾಗಿ ರೇಷ್ಮೆ ನಾಟಿಮಾಡಿಕೊಂಡ ರೈತರಿಗೆ ಕನಿಷ್ಠ 40ಸಾವಿರದವರೆಗೆ ಸಹಾಯಧನ ನೀಡಲಾಗುತ್ತದೆ ಎಂದು ಹೇಳಿದರು.

ಈ ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯಿತಿಯಸಿಬ್ಬಂದಿ,ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next