Advertisement

Modi ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ: ಶಾಸಕ ಸಿದ್ದು ಸವದಿ

06:47 PM Jan 19, 2024 | Team Udayavani |

ರಬಕವಿ ಬನಹಟ್ಟಿ : ಪ್ರಧಾನ ಮಂತಿ ನರೇಂದ್ರ ಮೋದಿ ಬಡವರಿಗಾಗಿ ಅನೇಕ ಜನಪ್ರೀಯ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಶುಕ್ರವಾರ ತಾಲೂಕಿನ ರಾಮಪುರ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಜಾಗೃತಿಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ಸರಕಾರ ಪ್ರತಿ ತಿಂಗಳು ನೀಡುವ 5 ಕೆಜಿ ಪಡಿತರ ಅಕ್ಕಿ ಮೋದಿ ಸರಕಾರ ಕೊಡುವ ಅಕ್ಕಿಯಾಗಿದೆ. ಮನೆಮನೆಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರೈತರಿಗೆ ವಿವಿಧ ಸೌಲಭ್ಯಗಳು, ಕೈಗಾರಿಕಾ ಕ್ಷೇತ್ರದ ಬೆಳವಣಿಗೆ, ಕ್ರೀಡಾಪಟುಗಳಿಗೆ ವಿಶೇಷವಾದ ಹತ್ತು ಹಲವಾರು ಕ್ಷೇತ್ರಗಳ ಬಗ್ಗೆ ವಿಶೇಷ ಕಾಳಜಿಯನ್ನ ಹೊಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಸಮಗ್ರ ಬದಲಾವಣೆಯ ಹರಿಕಾರರಾಗಿದ್ದಾರೆ ಎಂದು ಸವದಿ ಹೇಳಿದರು.

ದಿವ್ಯಾಂಗರ ಸಬಲೀಕರಣ ಹಾಗೂ 401 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ. ಆರ್ಥಿಕ ದುರ್ಬಲವರ್ಗಗಳಿಗೆ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ1೦.ಮೀಸಲಾತಿ ನಿಡುತ್ತಿದೆ. ಪ್ರಧಾನಮಂತ್ರಿ ಸ್ವನಿಧಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ಸುಲಭ ಸಣ್ಣ ಸಾಲ ಯೋಜನೆಯಲ್ಲಿ 45 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಸಾಲ ವಿತರಿಸಲಾಗಿದೆ, ಪ್ರಧಾನಮಂತ್ರಿ ವಿಶ್ವಕರ್ಮಯೋಜನೆಯಿಂದ ಕೇಂದ್ರ ಸರ್ಕಾರ 13 ಸಾವಿರ ಕೋಟಿ ರೂಪಾಯಿ ಯೋಜನೆ ತಂದಿದೆ. ಆಹಾರ ಭದ್ರತೆಯಲ್ಲಿ ಅನ್ನ ಯೋಜನೆ ಅಡಿಯಲ್ಲಿ 1424 ಲಕ್ಷ ಮೇಟ್ರಿಕ ಟನ್ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ ಎಂದರು.

ದೇಶದಲ್ಲಿ ಇಲ್ಲಿಯವರೆಗೆ 13.5 ಕೋಟಿ ನಲ್ಲಿಗಳ ಮೂಲಕ ನೀರಿನ ಸಂಪರ್ಕ ಹೊಂದಲಾಗಿದೆ. 11 ಕೋಟಿಗೂ ಹೆಚ್ಚು ರೈತರಿಗೆ 2.6 ಲಕ್ಷ ಕೋಟಿ ರೂಗಳ ಸಹಾಯ ನೀಡಲಾಗಿದೆ. ನಾಲ್ಕು ಕೋಟಿ ಪಕ್ಕಾ ಮನೆಗಳ ನಿರ್ಮಾಣ ಮಾಡಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿ 10 ಕೋಟಿ ಗ್ಯಾಸ್ ಕನೆಕ್ಷನ್ ನೀಡಲಾಗಿದೆ. ಕೇಂದ್ರದ ಮೋದಿ ಸರ್ಕಾರವು ಪ್ರತಿಯೊಬ್ಬ ಬಡವರಿಗೂ ಉಚಿತ ಚಿಕಿತ್ಸೆ ನೀಡುತ್ತಿದೆ.55 ಕೋಟಿ ಜನರಿಗೆ 4 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ದೇಶಾದ್ಯಂತ 9,996 ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರಗಳು ಇದ್ದು ಗುಣಮಟ್ಟದ ಔಷಧಿಗಳು ಕೈಗೆಟುಕುವುದರಲ್ಲಿ ಇಲ್ಲಿ ಲಭ್ಯವಿದೆ. 1,965ವಿಧದ ಔಷಧಿಗಳು ಮತ್ತು 193 ಇತರ ವೈದ್ಯಕೀಯ ಉಪಕರಣಗಳು ಜನ ಔಷಧಿ ಕೇಂದ್ರಗಳಲ್ಲಿ ಶೇಕಡ 5೦ ರಿಂದ ಶೇಕಡ 90ರಷ್ಟು ಕಡಿಮೆ ದರದಲ್ಲಿ ಬ್ರಾಂಡೆಡ್ ಔಷಧಿಗಳಿಗಿಂತ ಕಡಿಮೆ ದರದಲ್ಲಿ ದೊರೆಯುತ್ತವೆ. 12 ಕೋಟಿ ಬಡ ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡುತ್ತಿದೆ. ಇದು ಮೋದಿ ಸರ್ಕಾರದ ಗ್ಯಾರಂಟಿಗಳಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಲು
ವಿನಂತಿಸಿಕೊಂಡರು.

Advertisement

ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ, ಪೌರಾಯುಕ್ತ ಜಗದೀಶ ಈಟಿ, ಲೀಡ್ ಬ್ಯಾಂಕಿನ ಎಂ. ಸಿ. ಮಧುಸೂಧನ, ಎಸ್‌ಬಿಐನ ಮ್ಯಾನೇಜರ ರಮೇಶ ಸಿಂಧೆ, ಸೋಮಶೇಖರ ಕೊಟ್ಟರಶೆಟ್ಟಿ, ಬಸವಪ್ರಭು ಹಟ್ಟಿ, ಪ್ರಕಾಶ ಸಿಂಘನ, ಆನಂದ ಕಂಪು, ಸುರೇಶ ಅಕ್ಕಿವಾಟ, ಸುರೇಶ ಬಾಗೇವಾಡಿ, ರವಿ ಕೊರ್ತಿ, ಶೀಶೈಲ ಆಲಗೂರ, ಚಿದಾನಂದ ಹೊರಟ್ಟಿ, ಪರಪ್ಪ ಬಿಳ್ಳೂರ, ಯಲ್ಲಪ್ಪ ತಳವಾರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next