ಅರಸೀಕೆರೆ: ಇಲಾಖೆಯು ಇ-ಸಂಜೀವಿನಿ ಎಂಬ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಮನೆಯಲ್ಲೇ ಕುಳಿತು ವೈದ್ಯರಿಂದ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ ತಿಳಿಸಿದರು.
ನಗರದತಾಲೂಕುಆರೋಗ್ಯಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಾಮಾನ್ಯ ರೋಗಕ್ಕೆ ತಜ್ಞ ವೈದ್ಯರ ಮಾರ್ಗದರ್ಶನ ನೀಡುವ ಜೊತೆಗೆ ಆಸ್ಪತ್ರೆಯಲ್ಲಿ ಸಾಮಾಜಿಕಅಂತರ ಕಾಯ್ದುಕೊಂಡು, ಕೋವಿಡ್ ಸೋಂಕು ಹರಡುವಿಕೆ ಕಡಿಮೆ ಮಾಡುವ ದೃಷ್ಟಿಯಿಂದ ಇ-ಸಂಜೀವಿನಿಯೋಜನೆ ಜಾರಿಮಾಡಲಾಗಿತ್ತು ಎಂದು ವಿವರಿಸಿದರು.
ಕೋವಿಡ್ ಸೇರಿ ಸಾಮಾನ್ಯ ಕಾಯಿಲೆಗಳು, ಆರೋಗ್ಯ ಸಲಹೆಗಳನ್ನು ಈ ಆ್ಯಪ್‌ನಲ್ಲಿ ಪಡೆಯಬಹುದು. ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆರೋಗ್ಯ ಇಲಾಖೆ ಅಭಿವೃದ್ಧಿ ಪಡಿಸಿರುವ ಆಂಡ್ರಾಯ್ಡ, ಐಒಎಸ್ ಆ್ಯಪ್‌ನ ಇ- ಸಂಜೀವಿನಿ ಯೋಜನೆ ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗವಾಗುತ್ತಿದೆ. ಆಸ್ಪತ್ರೆಯ ಒಪ್ಪಿಗೆಯಂತೆ ಕಾರ್ಯ ನಿರ್ವಹಿಸಲಿದೆ, ಪ್ಲೇಸ್ಟೋರ್ ಮೂಲಕ ಜನರು ಡೌನ್ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಂಡರೆ ಟೋಕನ್
ವ್ಯವಸ್ಥೆ ಮೂಲಕ ವಿಡಿಯೋ,ಆಡಿಯೋ ಹಾಗೂ ಟೆಕ್ಸ್ಟ್ ಮೆಸೇಜ್ ಮಾಡುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ವಿಚಾರಿಸಿಕೊಂಡು, ಫೋನ್ ಮೂಲಕವೇ ಔಷಧಿ ಚೀಟಿ ಪಡೆಯಬಹುದು.ಇಲ್ಲಿ ವೈದ್ಯರು ಕಳುಹಿಸುವ ಔಷಧಿ ಚೀಟಿಯು ಅಧಿಕೃತವಾಗಲಿದ್ದು, ಮೆಡಿ ಕಲ್ ಶಾಪನಲ್ಲಿ ಔಷಧಿ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಬಗ್ಗೆ ಆಶಾ, ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಿ, ಮುಂದಿನ ದಿನಗಳಲ್ಲಿ ಮನೆಗೆ ತೆರಳಿ ಅವರು ಅರಿವು ಮೂಡಿ ಸಲಿದ್ದಾರೆಂದರು. ಆರೋಗ್ಯ ಸಹಾಯಕ ಜಬ್ಬೀರ್ ಪಾಷಾ ಉಪಸ್ಥಿತರಿದ್ದರು.