Advertisement

ಸದ್ಬಳಕೆಯಾಗಲಿ ಸಾಲ ಸೌಲಭ್ಯ

04:35 PM Dec 20, 2020 | Suhan S |

ಸಿಂದಗಿ: ಸಹಕಾರ ಕ್ಷೇತ್ರ ಬೆಳವಣಿಗೆಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂದು ಪುರಸಭೆ ಅಧ್ಯಕ್ಷ ಡಾ|ಶಾಂತವೀರ ಮನಗೂಳಿ ಹೇಳಿದರು.

Advertisement

ಪಟ್ಟಣದ ಗಜಾನನ ವಿವಿಧೋದ್ದೇಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಕಾರ್ಯಾಲಯದಲ್ಲಿ ನಡೆದ ಗಜಾನನ ವಿವಿಧೋದ್ದೇಶ ಸೌಹಾರ್ದ ಪತ್ತಿನಸಹಕಾರಿ ನಿಯಮಿತದ 15ನೇ ವಾರ್ಷಿಕ ಸರ್ವಸಾಧಾರಣ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಒಂದು ಬ್ಯಾಂಕ್‌ ಬೆಳೆಯಬೇಕಾದಲ್ಲಿ ಗ್ರಾಹಕರ ಸಹಕಾರ ಅತ್ಯವಶ್ಯಕ. ಗ್ರಾಹಕರು ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿ ಸಾಲ ಪಡೆದು ಅದನ್ನು ಸದುಪಯೋಗಮಾಡಿಕೊಂಡು ಜೀವನದಲ್ಲಿ ಆರ್ಥಿಕ ಜೀವನ ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.

ಪಟ್ಟಣದ ಗಜಾನನ ವಿವಿಧೋದ್ದೇಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತವುಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ಪ್ರತಿ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಗಜಾನನ ವಿವಿಧೋದ್ದೇಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ, 2005ರಲ್ಲಿ 4 ಲಕ್ಷ ರೂ. ಬಂಡವಾಳದೊಂದಿಗೆ ಪ್ರಾರಂಭವಾದ ಈ ಸಂಸ್ಥೆ 15 ವರ್ಷದಲ್ಲಿ ಸಂಸ್ಥೆಯ ಒಟ್ಟು ಬಂಡವಾಳ 14.25 ಕೋಟಿ ರೂ. ಆಗಿದೆ. ಪ್ರಸಕ್ತ ವರ್ಷದಲ್ಲಿ 46.68 ಲಕ್ಷ ರೂ. ಲಾಭದಲ್ಲಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 80 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ ಸದಸ್ಯರ ಮಕ್ಕಳಾದ ಅನಿತಾ ಕುಲಕರ್ಣಿ, ಪ್ರೀಯಾ ಪಾಟೀಲ, ಹರ್ಷಿತಾ ಕುಲಕರ್ಣಿ, ಸುಪ್ರಿತಾ ಜೋಶಿ, ಸುಹಾಸ ಮಿರ್ಜಿಕರ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಸಂಸ್ಥೆ ಉಪಾಧ್ಯಕ್ಷ ಎಸ್‌.ಆರ್‌.ಪೋತದಾರ, ನಿರ್ದೇಶಕರಾದ ಡಾ| ಗಿರೀಶ ಕುಲಕರ್ಣಿ, ವಿಜಯಕುಮಾರ ಕುಲಕರ್ಣಿ, ಶರದ ನಾಡಗೌಡ, ಚಿಂತಾಮಣಿ ಕುಲಕರ್ಣಿ, ಆನಂದರಾವ್‌ ಕುಲಕರ್ಣಿ, ವಿವೇಕಾನಂದ (ನಾರಾಯಣ) ಕುಲಕರ್ಣಿ, ಭೀಮಾಶಂಕರ ಕುಲಕರ್ಣಿ,ದಯಾನಂದ ಪತ್ತಾರ, ಎಂ.ಎ. ಸಿಂದಗೇರಿ,ಎಸ್‌.ಎಸ್‌. ಸೋಮಯಾಜಿ, ವಿ.ವೈ. ಮಿರ್ಜಿಕರ, ವ್ಯವಸ್ಥಾಪಕ ಅವಧೂತ ಜೋಶಿ ವೇದಿಕೆಯಲ್ಲಿದ್ದರು.

ಸದಸ್ಯರಾದ ಅಶೋಕ ಕುಲಕರ್ಣಿ, ವಾಸುದೇವ ಪೋತದಾರ, ಎಚ್‌.ಜಿ. ಪೋದ್ದಾರ ಸೇರಿದಂತೆ ಇನ್ನುಳಿದ ಸದಸ್ಯರು,ಬ್ಯಾಂಕ್‌ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಂಗರಾವ್‌ ಖೇಡಗಿಕರ ಸ್ವಾಗತಿಸಿದರು. ಸತೀಶ ಕುಲಕರ್ಣಿ ನಿರೂಪಿಸಿದರು. ಶರದ ನಾಡಗೌಡ ಜೋಶಿ ವಂದಿ ಸಿದರು.

Advertisement

Udayavani is now on Telegram. Click here to join our channel and stay updated with the latest news.

Next