Advertisement

ರಸ್ತೆ ದುರಸ್ಥಿ  ಮಾಡಿಸಿ-ನಿರಾಶ್ರಿತರಿಗೆ ಸೂರು ನೀಡಿ

08:51 PM Jan 05, 2022 | Team Udayavani |

ಹೊಳೆಆಲೂರ: ಮಲಪ್ರಭಾ ಹಾಗೂ ಬೆಣ್ಣೆ ಹಳ್ಳದ ಭೀಕರ ಪ್ರವಾಹದಿಂದ 11 ವರ್ಷಗಳಿಂದ ಮನೆ ಕಳೆದುಕೊಂಡು ನಿರ್ಗತಿಕರಾಗಿರುವ ನರಗುಂದ ಮತಕ್ಷೇತ್ರದ 17 ಗ್ರಾಮಗಳ ಸಾವಿರಾರು ನಿರಾಶ್ರಿತರಿಗೆ 11 ವರ್ಷಗಳಿಂದ ಮನೆ ಹಂಚಿಕೆ ಮಾಡದೆ ಕಾಲಹರಣ ಮಾಡಿದ್ದಲ್ಲದೇ, ಹಿಂದಿನ ನನ್ನ ಅವ ಧಿಯಲ್ಲಿ ಮಂಜೂರಾದ ಹಲವು ಜನಪರ ಯೋಜನೆಗಳಿಗೆ ಏಕೆ ಕೊಕ್ಕೆ ಹಾಕುತ್ತಿದ್ದೀರಿ ಎಂದು ಮಾಜಿ ಸಚಿವ ಬಿ.ಆರ್‌.ಯಾವಗಲ್ಲ ಸಚಿವ ಸಿ.ಸಿ.ಪಾಟೀಲ ಅವರನ್ನು ಪ್ರಶ್ನಿಸಿದರು.

Advertisement

ನರಗುಂದ ಮತಕ್ಷೇತ್ರದ ಅಭಿವೃದ್ಧಿಯಲ್ಲಾದ ವಂಚನೆ ಖಂಡಿಸಿ ಮಂಗಳವಾರ ಹೊಳೆಆಲೂರಿನಲ್ಲಿ ಹೊಳೆಆಲೂರ ಹಾಗೂ ನರಗುಂದ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಭಾಗದವರೇ ಲೋಕೋಪಯೋಗಿ ಸಚಿವರಾಗಿದ್ದಾರೆ. ಈ ಭಾಗದ ರಸ್ತೆಗಳು ಸುಂದರವಾಗುತ್ತವೆ ಎಂದು ಜನರು ಕನಸು ಕಂಡಿದ್ದರು.

ಆದರೆ, ಕೊಣ್ಣೂರ ಹೊಳೆಆಲೂರ, ರೋಣ ಹೊಳೆಆಲೂರ, ಹೊಳೆಆಲೂರ ಬೆಳವಣಕಿ ಸೇರಿದಂತೆ ಬಹುತೇಕ ಗ್ರಾಮೀಣ ರಸ್ತೆಗಳು ಹದಗೆಟ್ಟು ವಾಹನ ಸಂಚಾರವೇ ಅಯೋಮಯವಾಗಿದೆ. ಆದರೂ ಸಚಿವರು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಗಾಡಗೋಳಿ, ಹೊಳೆಮಣ್ಣೂರ, ಹೊಳೆಹಡಗಲಿ ಸೇರಿದಂತೆ ಮತಕ್ಷೇತ್ರದ 17 ನವ ಗ್ರಾಮಗಳಲ್ಲಿ ನನೆಗುದಿಗೆ ಬಿದ್ದಿರುವ ಮನೆ ಹಂಚಿಕೆ ಮಾಡುವಂತೆ ಜನರು ಪ್ರತಿಭಟನೆ ಮಾಡಿದರೆ ಬೆದರಕಿ ಹಾಕುತ್ತಾರೆ. ಅವರ ಪರವಾಗಿ ಕಾಂಗ್ರೆಸ್‌ ಕಾರ್ಯಕರ್ತರು ಬೆಂಬಲ ನೀಡಿದರೆ ರಾಜಕೀಯ ಮಾಡುತ್ತೀರಿ ಎನ್ನುತ್ತಾರೆ.

ಹೀಗಾದರೆ, ನಿರ್ಗತಿಕರು ಬೀದಿ ಪಾಲಾಗಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌.ಪಾಟೀಲ ಮಾತನಾಡಿ, ನರಗುಂದ ಪಟ್ಟಣದ ಬಡವರಿಗಾಗಿ ಹಿಂದಿನ ಶಾಸಕ ಬಿ.ಆರ್‌. ಯಾವಗಲ್ಲ 110 ಕೋಟಿ ವೆಚ್ಚದಲ್ಲಿ ರೂಪಿಸಿದ್ದ 2 ಸಾವಿರ ಆಶ್ರಯ ಮನೆ ಯೋಜನೆ, 58 ಕೋಟಿ ವೆಚ್ಚದ ನರಗುಂದದ ಎಂಜಿನಿಯರಿಂಗ್‌ ಕಾಲೇಜು, ಹೊಳೆಆಲೂರ ಹಾಗೂ ಕೊಣ್ಣೂರಿನ ವಸತಿ ಶಾಲೆಗಳು, ಹೊಳೆಆಲೂರ ಬದಾಮಿ ಸಂಪರ್ಕಿಸುವ 25 ಕೋಟಿ ವೆಚ್ಚದ ಮಲಪ್ರಭಾ ಬ್ಯಾರೇಜ್‌ ಕಾಮಗಾರಿಗಳು ಅರ್ಧಕ್ಕೇ ನಿಲ್ಲಲು ಸಿ.ಸಿ.ಪಾಟೀಲ ಅವರೇ ಕಾರಣ.

ಈ ಭಾಗದ ಎಲ್ಲ ರಸ್ತೆಗಳು ಹಾಳಾಗಲು ಸಚಿವ ಸಿ.ಸಿ.ಪಾಟೀಲ ಬೆಂಬಲಿಗರ ಅಕ್ರಮ ಮರುಳು ತುಂಬಿದ ಲಾರಿಗಳೇ ಕಾರಣ ಎಂದು ಆರೋಪಿಸಿದರು. ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಅಚ್ಛೇದಿನ್‌ ಆಯೇಗಾ ಎಂದು ಜನರಿಗೆ ಮಂಕು ಬೂದಿ ಎರಚಿ ಅಧಿ ಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ, ಜನರಿಗೆ ಬೇಕಾದ ಅಗತ್ಯ ಮೂಲಭೂತ ವಸ್ತುಗಳ ಬೆಲೆ ಗಗನಕ್ಕೆ ಏರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಾದಯಾತ್ರೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ್ರ ಕೆಂಚನಗೌಡ್ರ, ತಾಪಂ ಮಾಜಿ ಅಧ್ಯಕ್ಷ ತಿ.ಬಿ.ಶಿರಯಪ್ಪಗೌಡ್ರ, ರಾಜ್ಯ ಯುವ ಕಾಂಗ್ರೇಸ್‌ ಪ್ರಧಾನ ಕಾರ್ಯದರ್ಶಿ ವಿವೇಕ ಯಾವಗಲ್ಲ, ಹೊಳೆಆಲೂರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ.ಕೋಳೇರಿ, ನರಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರವೀಣ ಯಾವಗಲ್ಲ, ಶಾರದಾ ಹಿರೇಗೌಡ್ರ, ಉಮಾ ದ್ಯಾವನೂರ, ಪ್ರಕಾಶ ಬಜಂತ್ರಿ, ಬಸವರಾಜ ಪಾಟೀಲ, ರವೀಂದ್ರ ಹಿರೇಮಠ, ವೀರಯ್ಯ ಸೋಮನಕಟ್ಟಿ, ರಾಜು ಕಲಾಲ, ಪ್ರವೀಣ ಜಡಮಳಿ, ಕಾಶಪ್ಪ ಬಳಗಾನೂರ, ಮಹಾಬಳೇಶ ಗಾಣಿಗೇರ, ಕಲ್ಲಪ್ಪ ಬೇಲಿ ಇತರರು ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next