Advertisement

ಪುಕ್ಕಟ್ಟೆ, ಪ್ರಚಾರ ಬೇಡ, ಆಸ್ಪತ್ರೆ ಅಭಿವೃದ್ದಿ ಮಾಡಿ

06:52 PM Jul 07, 2021 | Team Udayavani |

ಚಿಂತಾಮಣಿ: ಸರ್ಕಾರಿ ಆಸ್ಪತ್ರೆ ಯಾರಪ್ಪನ ಸ್ವತ್ತಲ್ಲ,ಸಾಮರ್ಥ್ಯ ಇದ್ದರೆ ಸರ್ಕಾರದಿಂದ ಅನುದಾನತಂದು ಅಭಿವೃದ್ಧಿ ಪಡಿಸಲಿ, ಅದು ಬಿಟ್ಟುಅಧಿಕಾರಿಗಳ ಮೇಲೆ ದರ್ಪ ತೋರಿಸಿ,ಕಾರ್ಯಕ್ರಮಕ್ಕೆಬರದಂತೆ ತಡೆಯುವುದು ಸರಿಯಲ್ಲ ಎಂದು ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕಎಂ.ಸಿ.ಸುಧಾಕರ್‌ ವಾಗ್ಧಾಳಿ ನಡೆಸಿದರು.

Advertisement

ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿಆಶ್ರಯ ಹಸ್ತ ಟ್ರಸ್ಟ್‌ನಿಂದ ನಿರ್ಮಿಸಿದ್ದ 300 ಎಲ್‌ಪಿಎಂ ಆಮ್ಲಜನಕ ತಯಾರಿಕ ಘಟಕ ಸೇವೆಗೆಹಸ್ತಾಂತರಿಸಿ ಮಾತನಾಡಿ, ಡೀಸಿ, ಡಿಎಚ್‌ಒಅವರನ್ನು ಆಹ್ವಾನಿಸಿ ಆಮ್ಲಜನಕ ಘಟಕಹಸ್ತಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಡಿಎಚ್‌ಒ ಕೂಡ ಕಾರ್ಯಕ್ರಮಕ್ಕೆ ಬರುವುದಾಗಿತಿಳಿಸಿ, ಸಮಯ ನಿಗದಿ ಮಾಡುವಂತೆಸೂಚಿಸಿದ್ದರು. ಆದರೆ, ಶಾಸಕರು ಒತ್ತಡ ಹಾಕಿಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮಾಡಿದ್ದಾರೆಎಂದು ದೂರಿದರು.ಪುಕ್ಕಟ್ಟೆ ಪ್ರಚಾರ ಬೇಡ:ಯಾರೋ ಕೊಡುವದಿನಸಿ, ಇತರೆ ಕಿಟ್‌ಗಳನ್ನು ವಿತರಿಸಿ ಪುಕ್ಕಟ್ಟೆ ಪ್ರಚಾರಪಡೆಯುವುದು ನಮಗೆ ಬೇಡ, ಅಂತಹ ಚಿಲ್ಲರೆಕೆಲಸ ಬೇಕಾಗಿಲ್ಲ,

ಶಾಸಕರು ಮೊದಲು ಸರ್ಕಾರಿಕಾರ್ಯಕ್ರಮ ಯಾವುದು, ಖಾಸಗಿ ಯಾವುದು ಎಂಬಜ್ಞಾನ ಇಟ್ಟುಕೊಳ್ಳಬೇಕು. ಸರ್ಕಾರದಿಂದಅನುದಾನ ತಂದು ಆಸ್ಪತ್ರೆ ಅಭಿವೃದ್ಧಿ ಮಾಡಲಿ,ಶಾಸಕರ ಕೈಲಾಗದ ಕೆಲಸ ನಾವು ಮಾಡುತ್ತಿದ್ದೇವೆ.ಆಸ್ಪತ್ರೆಯ ಕಮಿಟಿಯಅಧ್ಯಕ್ಷರಾಗಿರುವ ಶಾಸಕರು,ಎಷ್ಟು ಬಾರಿ ಸಭೆ ಮಾಡಿದ್ದಾರೆ, ಆಸ್ಪತ್ರೆಯ ಎಷ್ಟುಸಮಸ್ಯೆ ಬಗೆಹರಿಸಿದ್ದಾರೆ ಎಂದು ಸುಧಾಕರ್‌ ಪ್ರಶ್ನಿಸಿದರು.

ಸರ್ಕಾರಿ ಆಸ್ಪತ್ರೆ ಶಾಸಕರ ಸ್ವತ್ತಲ್ಲ, ವೈದ್ಯರಿಗೆಫೋನ್‌ ಕರೆ ಮಾಡಿ ಬೆದರಿಕೆ ಹಾಕುವುದನ್ನುಬಿಡಬೇಕು ಎಂದು ಹೇಳಿದರು.ಹೆದರುವ ಅಗತ್ಯ ಇಲ್ಲ: ಆಸ್ಪತ್ರೆಯ ವೈದ್ಯರುನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.ಅಂತಹವರಿಗೆ ಬೆದರಿಕೆ ಹಾಕುವವರಿಂದ ಏನುಪ್ರಾಯೋಜನವಾಗುವುದಿಲ್ಲ.

Advertisement

ಈ ಆಸ್ಪತ್ರೆಅಲ್ಲದಿದ್ದರೆ, ಮತ್ತೂಂದಕ್ಕೆ ಹೋಗಬಹುದು.ಯಾವುದಕ್ಕೂ ಹೆದರುವ ಅಗತ್ಯವಿಲ್ಲ, ಧೈರ್ಯವಾಗಿಕಾರ್ಯನಿರ್ವಹಿಸಿ ಎಂದು ತಿಳಿಸಿದರು.ದಾನಿಗಳಿಗೆ ಕೃತಜ್ಞತೆ: ಇನ್ನು ಆಸ್ಪತ್ರೆಗೆ 300 ಎಲ್‌ಪಿಎಂ ಆಮ್ಲಜನಕ ತಯಾರಿ ಘಟಕವನ್ನು ನೀಡಿದಆಶ್ರಯ ಹಸ್ತ ಟ್ರಸ್ಟ್‌ನ ಅಧ್ಯಕ್ಷರಿಗೆ ಹಾಗೂಕೊರೊನಾ ಸಂಕಷ್ಟದಲ್ಲಿ ತಮ್ಮೊಂದಿಗೆ ಕೈಜೋಡಿಸಿದ ಎಲ್ಲಾ ದಾನಿಗಳಿಗೆಕೃತಜ್ಞತೆ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ,ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ ಕುಮಾರ್‌, ನಗರಸಭೆ ಅಧ್ಯಕ್ಷೆ ರೇಖಾಉಮೇಶ್‌, ಉಪಾಧ್ಯಕ್ಷೆ ಸುಹಾಸಿನಿ ಶೇಷು,ಆಶ್ರಯ ಹಸ್ತಟ್ರಸ್ಟ್‌ನ ರಾಜೇಂದ್ರ, ಮುಖಂಡರಾದ ಮುನಿಶ್ಯಾಮಿರೆಡ್ಡಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕನಾಗಿರೆಡಿª, ಟಿಎಪಿಸಿಎಂಎಸ್‌ ಅಧ್ಯಕ್ಷ ಚಂದ್ರಪ್ಪ,ನಗರಸಭೆ ಹಾಲಿ, ಮಾಜಿ ಸದಸ್ಯರು, ಗ್ರಾಪಂಸದಸ್ಯರು, ಬೆಂಬಲಿಗರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next