ಪಟ್ನಾ: ತೇಜಸ್ವಿ ಯಾದವ್ ಅವರನ್ನು ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲು ಜೆಡಿಯು 2025 ರವರೆಗೆ ಕಾಯಬೇಕಿಲ್ಲ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದರು.
ಶನಿವಾರ (ಡಿ.17 ರಂದು) ಶಿಯೋಹರ್ ನಲ್ಲಿ ಅವರ ಜನ್ ಸೂರಜ್ ಪಾದಯಾತ್ರೆಯ ವೇಳೆ ಮಾತಾನಾಡಿದ ಅವರು, ತೇಜಸ್ವಿ ಯಾದವ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲು 2025 ರವರೆಗೆ ಕಾಯುವ ಅಗತ್ಯವಿಲ್ಲ. ಅವರ ಮೈತ್ರಿಯಲ್ಲಿ ಆರ್ ಜೆಡಿ ಹೆಚ್ಚು ಪಾಲನ್ನು ಹೊಂದಿದೆ. ನಿತೀಶ್ ಕುಮಾರ್ ತೇಜಸ್ವಿ ಅವರನ್ನು ಸಿಎಂ ಆಗಿ ಮಾಡಬೇಕೆಂದರು.
ಇದನ್ನೂ ಓದಿ:ಮರ್ಸಿಡೀಸ್ ಕಾರನ್ನು ನಿಲ್ಲಿಸಿ ಮೂತ್ರಕ್ಕೆ ಹೋದಾತನ ಕಾರನ್ನೇ ಎಗರಿಸಿಕೊಂಡು ಹೋದರು.!
ಒಂದು ವೇಳೆ ನಿತೀಶ್ ಅವರನ್ನು ಈಗಲೇ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ, 3 ವರ್ಷ ಮತದಾರರು ತೇಜಸ್ವಿ ಅವರ ಆಡಳಿತವನ್ನು ನೋಡಿ ಮುಂದಿನ ಚುನಾವಣೆಗೆ ಮತ ಹಾಕುತ್ತಾರೆ ಎಂದು ಅವರು ಹೇಳಿದರು.
ಇತ್ತೀಚೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ತೇಜಸ್ವಿ ಕುರಿತಂತೆ, ತೇಜಸ್ವಿ ಯಾದವ್ ಅವರು, 2025ರ ವಿಧಾನ ಸಭೆ ಚುನಾವಣೆಯ ಮಹಾಘಟ್ ಬಂಧನ್ ನ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದ್ದರು.