Advertisement

ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರು ಆದ್ಯತೆ ನೀಡಿ

07:36 PM Feb 15, 2021 | Team Udayavani |

ಮಳವಳ್ಳಿ: ಉತ್ತಮ ಫಲಿತಾಂಶ ಪಡೆಯುವ ಜತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಆಲೋಚನೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಹೇಳಿದರು.

Advertisement

ಪಟ್ಟಣದ ಕೋಟೆ ಬೀದಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರೌಢಶಾಲಾ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಭಾಷಾ ವಿಷಯಗಳ ವಿದ್ಯಾರ್ಥಿಗಳಿಗೆ ಬಹುಮುಖ್ಯ. ಹೀಗಾಗಿ ವೃತ್ತಿಪರ ಶಿಕ್ಷಕರು ನಿರಂತರ ಓದು ಮತ್ತು ಗುಣಮಟ್ಟದ ಚಿಂತನೆಗಳ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಶಿಕ್ಷಕರು ವೃತ್ತಿಪರ ಅಭಿವೃದ್ಧಿಯ ಜತೆ ಮಕ್ಕಳ ಬೌದ್ಧಿಕ ಶಕ್ತಿ ಹೆಚ್ಚಿಸಲು ಕಾರ್ಯಪ್ರವೃತರಾಗ ಬೇಕು ಎಂದು ಹೇಳಿದರು.

ಪರಿವೀಕ್ಷಕ ಎಚ್‌.ಎಂ.ನಾಗೇಂದ್ರಮೂರ್ತಿ ಮಾತನಾಡಿ, ಶಿಕ್ಷಕರು ಈ ಕಾರ್ಯಾಗಾರದ ಪಡೆದ ಉತ್ತಮ  ಅಂಶಗಳನ್ನು ವಿದ್ಯಾರ್ಥಿಗಳಿಗೆ ಗುಣಾತ್ಮಕವಾಗಿ ಜವಾಬ್ದಾರಿಯುತವಾಗಿ ತಲುಪಿಸಬೇಕು. ಅಲ್ಲದೆ, ಈ ತರಬೇತಿಯು ಶಿಕ್ಷಕರ ಜಾnನ ಮತ್ತು ಅವರ ವೃತ್ತಿ ಅನುಭವ ಹೆಚ್ಚುತ್ತದೆ ‌ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ಕೆ.ನಾರಾಯಣ, ಕೆ.ನಾಗರಾಜು, ತಾಲೂಕು ಪ್ರೌಢಶಾಲಾ ಶಿಕ್ಷಕರು ‌ ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಮುಖ್ಯ ಶಿಕ್ಷಕಿ ಮನು, ಉಪ ಪ್ರಾಂಶುಪಾಲ ಶ್ರೀನಿವಾಸ್‌ ಹಾಜರಿದ್ದರು.

18ರಿಂದ ಧರಣಿ ಆರಂಭ :

ಮದ್ದೂರು: ಇಲ್ಲ ಸಲ್ಲದ ನೆಪ ಹೇಳಿ ಮದ್ದೂರು ಪುರಸಭೆ ಹೊರ ಗುತ್ತಿಗೆ ನೌಕರರನ್ನು ಗುತ್ತಿಗೆದಾರರು ಕೈಬಿಡಿಸಿರುವ ಕ್ರಮ ಖಂಡಿಸಿ, ಫೆ.18ರಿಂದ ಮದ್ದೂರು ಪುರಸಭೆ ಬಳಿಧರಣಿ ಆರಂಭಿಸಲಾಗುವುದು ಎಂದು ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಡಿ. ನಾಗಣ್ಣಗೌಡ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅರಕೇಶ್ವರ ಎಂಟರ್‌ ಪ್ರಸಸ್‌ನಿಂದ ಮದ್ದೂರು ಪುರಸಭೆಗೆ ಹೊರ ಗುತ್ತಿಗೆಆಧಾರದಲ್ಲಿ ಚಾಲಕರಾಗಿ ಕರ್ತವ್ಯನಿರ್ವಹಿಸುತ್ತಿರುವ ಶ್ರೀನಿವಾಸ್‌ ಎಂಬ ನೌಕರರಿಗೆ ಪುರಸಭೆ ಅಧಿಕಾರಿಗಳುತೊಂದರೆ ನೀಡುತ್ತಿದ್ದು, ಕೆಲಸದಿಂದ ಕೈಬಿಡಿಸುವ ಕ್ರಮವನ್ನು ಖಂಡಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಎಂ.ಡಿ. ದಿನೇಶ್‌, ಪದಾಧಿಕಾರಿಗಳಾದ ಚನ್ನೇಶ್‌, ಮಣಿ, ರೂಪೇಶ್‌, ಶ್ರೀನಿವಾಸ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next