Advertisement
ಜಾಗತಿಕವಾಗಿ 12.6 ಕೋಟಿಗೂ ಅಧಿಕ ಜನರು ವಿವಿಧ ಮೂಳೆ ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದಾರೆ ಎಂಬುದಾಗಿ ಅಮೆರಿಕನ್ ಅಕಾಡೆಮಿ ಆಫ್ ಆಥೊìಪೆಡಿಕ್ ಸರ್ಜನ್ ಬಹಿರಂಗಪಡಿಸಿದೆ. ಇವುಗಳಲ್ಲಿ ಬಹ್ವಂಶ ತೊಂದರೆಗಳು ಬಾಲ್ಯದಲ್ಲಿ ಕಾಣಿಸಿಕೊಂಡ ತೊಂದರೆಗಳ ಪರಿಣಾಮವಾಗಿ ಉಂಟಾಗಿರುವಂಥವು. ಆದ್ದರಿಂದ 2012ರ ಬಳಿಕ ಮಕ್ಕಳ ಎಲುಬು ಮತ್ತು ಸಂದುಗಳ ದಿನವನ್ನು ಆಚರಿಸುವ ಸಂಪ್ರದಾಯವನ್ನು ಆರಂಭಿಸಲಾಯಿತು. ಮಕ್ಕಳ ಎಲುಬು ಮತ್ತು ಸಂದುಗಳಿಗೆ ಸಂಬಂಧಪಟ್ಟ ತೊಂದರೆಗಳ ಬಗ್ಗೆ ಅರಿವು ಹೆಚ್ಚಿಸಲು, ಅವುಗಳನ್ನು ತಡೆಯಲು ಮತ್ತು ಸಮಾಜದ ಮೇಲೆ ಅವುಗಳ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಈ ದಿನಾಚರಣೆಯನ್ನು ಆರಂಭಿಸಲಾಯಿತು. ಮಕ್ಕಳ ಎಲುಬು ಮತ್ತು ಸಂದುಗಳ ಅನಾರೋಗ್ಯಗಳನ್ನು ತಡೆಯುವ ಕ್ರಮಗಳನ್ನು ಮತ್ತು ಚಿಕಿತ್ಸೆಗಳನ್ನು ಸುಧಾರಿಸುವುದು ದಿನಾಚರಣೆಯ ಪ್ರಧಾನ ಲಕ್ಷ್ಯವಾಗಿದೆ.
ಸಿರಿವಂತ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನ್ಮತಃ ಉಂಟಾಗುವ ಅನಾರೋಗ್ಯಗಳು ಮತ್ತು ನ್ಯೂರೊಮಸ್ಕಾéಲಾರ್ ಓಥೊìಪೆಡಿಕ್ಸ್ ಕಾಯಿಲೆಗಳು ಪ್ರಮುಖ ಸಮಸ್ಯೆಗಳಾಗಿವೆ. ಸ್ಲಿಪ್ಡ್ ಕ್ಯಾಪಿಟಲ್ ಫೀಮೋರಲ್ ಎಪಿಫೈಸಿಸ್, ಬೊಜ್ಜು ಇತ್ಯಾದಿಗಳು ಬೊಜ್ಜಿನಿಂದಾಗಿ ಉಂಟಾಗುತ್ತವೆ. ಶಿಶುಗಳ ಮತ್ತು ಜನನೋತ್ತರ (ನಿಯೊನೇಟಲ್) ಆರೈಕೆ ಶ್ರೀಮಂತವಾಗಿರುವುದರಿಂದ ಕಡಿಮೆ ಜನನತೂಕವುಳ್ಳ ಶಿಶುಗಳು ಜನಿಸುತ್ತವೆ. ಆದರೆ, ಇಂತಹ ಮಗು ಶಾಶ್ವತ ಮಿದುಳು ಹಾನಿ (ಸೆರೆಬ್ರಲ್ ಪಾಲ್ಸಿ)ಗೆ ತುತ್ತಾಗುವ ಅಪಾಯವಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸೆರೆಬ್ರಲ್ ಪಾಲ್ಸಿ ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚುತ್ತಿದೆ.
Related Articles
ಅಪೌಷ್ಟಿಕತೆ, ವಿಟಮಿನ್‌ಗಳ ಕೊರತೆ, ಪ್ರಸಾರವಾಗುವ ಸೋಂಕುರೋಗಗಳು, ಪ್ರಗತಿಶೀಲ ನ್ಯೂರೊಮಸ್ಕಾéಲಾರ್ ಕಾಯಿಲೆಗಳು ಭಾರತದಂತಹ ಅಭಿವೃದ್ಧಿಶೀಲ ದೇಶಗಳು ಎದುರಿಸುತ್ತಿರುವ ಪ್ರಧಾನ ಸಮಸ್ಯೆಗಳಾಗಿವೆ. ರಿಕೆಟ್ಸ್, ಸ್ಕರ್ವಿ, ಸ್ಪೈನಾ ಬೈಫಿxಯಾ ಇತ್ಯಾದಿಗಳು ಅಪೌಷ್ಟಿಕತೆಯಿಂದ ಉಂಟಾಗುತ್ತವೆ. ಕಳಪೆ ನೈರ್ಮಲ್ಯ, ಪೌಷ್ಟಿಕಾಂಶಗಳ ಕೊರತೆ, ಕಳಪೆ ಸಾಮಾಜಿಕ-ಆರ್ಥಿಕ ಹಿನ್ನೆಲೆಗಳು ಸೋಂಕುಗಳನ್ನು ಬೆಳೆಸಿಕೊಳ್ಳುವ ಅಪಾಯವನ್ನು ಒಡ್ಡುತ್ತವೆ. ಎಲುಬಿನ ಸೋಂಕು (ಓಸ್ಟಿಯೊಮೈಲೈಟಿಸ್), ಸಂದುಗಳ ಸೋಂಕು (ಸೆಪ್ಟಿಕ್ ಆಥೆಟಿಸ್), ಲೋ ಗ್ರೇಡ್ ಇನ್‌ಫೆಕ್ಷನ್ (ಕ್ಷಯ) ಇತ್ಯಾದಿಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸೋಂಕುಗಳಾಗಿವೆ. ಇವೆಲ್ಲವುಗಳ ಜತೆಗೆ, ಅಭಿವೃದ್ಧಿ ಹೊಂದಿದ ದೇಶಗಳು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಾದ ಬೊಜ್ಜು, ಜನ್ಮಜಾತ ಕಾಯಿಲೆಗಳು ಮತ್ತು ನ್ಯೂರೊಮಸ್ಕಾéಲಾರ್ ಆಥೊìಪೆಡಿಕ್ ಸಮಸ್ಯೆಗಳು ನಮ್ಮಲ್ಲೂ ಇವೆ.
Advertisement
ಸಾಮಾನ್ಯ ಪೀಡಿಯಾಟ್ರಿಕ್ ಆಥೊìಪೆಡಿಕ್ಸ್ ಡಿಸಾರ್ಡರ್ಅತಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಜನ್ಮಜಾತ ವೈಕಲ್ಯವೆಂದರೆ ಅಟ್ಟೆಗಾಲು ಅಥವಾ ಕ್ಲಬ್ ಫೂಟ್. ಪ್ರತೀ ಒಂದು ಸಾವಿರ ಸಜೀವವಾಗಿ ಜನಿಸುವ ಶಿಶುಗಳಲ್ಲಿ ಒಂದು ಶಿಶು ಅಟ್ಟೆಗಾಲು ಹೊಂದಿರುತ್ತದೆ. ಅಮೆರಿಕದ ಜನಸಂಖ್ಯೆ 34 ಕೋಟಿಗಳಾಗಿದ್ದು, ಪ್ರತೀ ವರ್ಷ 3.8 ಮಿಲಿಯ ಶಿಶುಗಳು ಜನಿಸುತ್ತವೆ. ಭಾರತವು 134 ಕೋಟಿ ಜನಸಂಖ್ಯೆ ಹೊಂದಿದ್ದು, ಪ್ರತೀ ವರ್ಷ 18 ಮಿಲಿಯ ಶಿಶುಗಳು ಜನ್ಮತಾಳುತ್ತವೆ. ಆದ್ದರಿಂದ ಪ್ರತೀ ವರ್ಷ 20 ಸಾವಿರ ಶಿಶುಗಳು ಅಟ್ಟೆಗಾಲು ಹೊಂದಿ ಜನ್ಮತಾಳುತ್ತವೆ ಎಂಬುದಾಗಿ ಲೆಕ್ಕ ಹಾಕಬಹುದು. ಇತರ ಜನ್ಮಜಾತ ಅಂಗವೈಕಲ್ಯಗಳಾದ ಸೊಂಟದ ಪ್ರಗತಿಶೀಲ ಡಿಸ್‌ಪ್ಲಾಸಿಯಾ ಮತ್ತು ಕೈಗಳ ವೈಕಲ್ಯವುಳ್ಳ ಶಿಶುಗಳೂ ಇಷ್ಟೇ ಸಂಖ್ಯೆಯಲ್ಲಿ ಜನಿಸಬಹುದಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಒಂದು ದೇಶವಾಗಿರುವ ಭಾರತವು ಪ್ರಗತಿಶೀಲ ಮತ್ತು ಪ್ರಗತಿ ಹೊಂದಿರುವ ದೇಶಗಳೆರಡೂ ಎದುರಿಸುವ ಆರೋಗ್ಯ ಸಮಸ್ಯೆಗಳನ್ನು ಹೊಂದಿದೆ. ಅಪೌಷ್ಟಿಕತೆ ಮತ್ತು ಬೊಜ್ಜಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಭಾರತವೂ ಎದುರಿಸುತ್ತಿದೆ. ಸಿರಿವಂತ ಮತ್ತು ಪ್ರಗತಿ ಹೊಂದುತ್ತಿರುವ ದೇಶಗಳೆರಡರಲ್ಲೂ ಮೂಳೆ ಮುರಿತ ಮತ್ತು ಸ್ಥಾನಪಲ್ಲಟ ಸಾಮಾನ್ಯ ಸಮಸ್ಯೆಗಳಾಗಿವೆ. ಮಕ್ಕಳ ಆಥೊìಪೆಡಿಕ್
ಡಿಸಾರ್ಡರ್‌ಗಳಿಗೆ ಚಿಕಿತ್ಸೆ ಅಟ್ಟೆಗಾಲು, ಲಿಂಬ್ ಡಿಫೀಶಿಯೆನ್ಸಿಗಳಂತಹ ಕೆಲವು ಜನ್ಮಜಾತ ವೈಕಲ್ಯಗಳನ್ನು ಬಹಳ ಸುಲಭವಾಗಿ, ಬಹಳ ಬೇಗನೇ ಪತ್ತೆಹಚ್ಚಬಹುದು. ಡಿಡಿಎಚ್‌ನಂತಹ ಕೆಲವು ವೈಕಲ್ಯಗಳನ್ನು ನಿಪುಣ ವೈದ್ಯರಿಗೂ ಕೂಡ ಕೆಲವೊಮ್ಮೆ ಸುಲಭವಾಗಿ ಪತ್ತೆ ಮಾಡಲಾಗದು. ಈ ಎರಡೂ ವಿಧವಾದ ವೈಕಲ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ಈ ವೈಕಲ್ಯಗಳನ್ನು ಬೇಗನೆ ಪತ್ತೆಹಚ್ಚಿದರೆ ಚಿಕಿತ್ಸೆಯನ್ನು ಕೂಡ ಬೇಗನೆ ಆರಂಭಿಸಬಹುದು. ವಯಸ್ಸು ಸಣ್ಣದಿದ್ದಾಗ ಬಹುತೇಕ ಎಲ್ಲ ಚಿಕಿತ್ಸೆಗಳನ್ನು ನೀಡುವುದು ಸುಲಭ, ಶಸ್ತ್ರಚಿಕಿತ್ಸೆ ಇಲ್ಲದೆಯೂ ಗುಣ ಸಾಧಿಸಬಹುದು. ಸಾಂಪ್ರದಾಯಿಕ ವಿಧಾನದಿಂದಲೇ ಅಟ್ಟೆಗಾಲನ್ನು ಸರಿಪಡಿಸುವ ಚಿಕಿತ್ಸೆಯಲ್ಲಿ ಶೇ.90ರಿಂದ 95ರಷ್ಟು ಯಶಸ್ವಿ ಫಲಿತಾಂಶ ಸಾಧಿಸಬಹುದು. ಇಂತಹ ವೈಕಲ್ಯಗಳನ್ನು ಆದಷ್ಟು ಶೀಘ್ರವಾಗಿ ಪತ್ತೆಹಚ್ಚಿ ಚಿಕಿತ್ಸೆಯನ್ನು ಆರಂಭಿಸಬೇಕು. ಎಲುಬು ಮತ್ತು ಸಂಧುಗಳ ಸೋಂಕಿನಂತಹ ಕೆಲವು ಕಾಯಿಲೆಗಳಿಗೆ ಆದಷ್ಟು ಬೇಗನೆ ಶಸ್ತ್ರಕ್ರಿಯೆ ಮತ್ತು ಶಸ್ತ್ರಕ್ರಿಯೇತರ ಔಷಧ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಸರಿಪಡಿಸಲಾಗದ ಸಂಕೀರ್ಣ ಸಮಸ್ಯೆಗಳನ್ನು ತಡೆಯುವುದಕ್ಕಾಗಿ ಇಂತಹ ಸಮಸ್ಯೆಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಪತ್ತೆ ಮಾಡಿ ಚಿಕಿತ್ಸೆ ಆರಂಭಿಸಬೇಕು. ಪೌಷ್ಟಿಕಾಂಶ ಸಂಬಂಧಿ ತೊಂದರೆಗಳು ಮತ್ತು ನ್ಯೂರೊಮಸ್ಕಾಲಾರ್ ಡಿಸಾರ್ಡರ್‌ಗಳಿಗೆ ಕನ್ಸರ್ವೇಟಿವ್ (ಶಸ್ತ್ರಕ್ರಿಯೇತರ) ವಿಧಾನಗಳನ್ನು ಶಿಫಾರಸು ಮಾಡಲಾಗಿದೆ. ಕಾಯಿಲೆಯ ಚಹರೆಯನ್ನು ಆಧರಿಸಿ ಶಸ್ತ್ರಕ್ರಿಯೆ ಅಥವಾ ಶಸ್ತ್ರಕ್ರಿಯೇತರ ಚಿಕಿತ್ಸೆ ನೀಡಬೇಕೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಹಿರಿಯರಲ್ಲಿ ಉಂಟಾಗುವ ಮೂಳೆ ಮುರಿತ ಮತ್ತು ಸ್ಥಾನಪಲ್ಲಟಗಳಿಗಿಂತ ಮಕ್ಕಳದು ಭಿನ್ನವಾಗಿರುತ್ತದೆ. ಮಗುವಿನ ವಯಸ್ಸು, ಗಾಯದ ಸ್ವಭಾವ, ಸಹ ಗಾಯಗಳನ್ನು ಆಧರಿಸಿ ನಿಭಾಯಿಸಬೇಕಾಗುತ್ತದೆ. ನಿಖರ ತಂತ್ರಗಳನ್ನು ಮತ್ತು ಉತ್ತಮ ವೈದ್ಯಕೀಯ ನಿರ್ಧಾರಗಳ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯ. ಅನೇಕ ಮೂಳೆ ಮುರಿತಗಳನ್ನು ಶಸ್ತ್ರಕ್ರಿಯೆ ಇಲ್ಲದೆಯೇ ಸರಿಪಡಿಸಬಹುದು. ಆದರೆ ಭವಿಷ್ಯದಲ್ಲಿ ಉಂಟಾಗಬಹುದಾದ ಸಂಭಾವ್ಯ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಕೆಲವು ಮೂಳೆಮುರಿತಗಳನ್ನು ಶಸ್ತ್ರಕ್ರಿಯೆಯ ಮೂಲಕ ಚಿಕಿತ್ಸೆಗೆ ಒಳಪಡಿಸಬೇಕು. –ಡಾ| ಹಿತೇಶ್ ಶಾ
ಪೀಡಿಯಾಟ್ರಿಕ್ ಓಥೊìಪೆಡಿಕ್ ಸರ್ವೀಸಸ್
ಕೆಎಂಸಿ, ಮಣಿಪಾಲ