ಇಂಡಿ: ಮಳೆ ಬಂದರೆ ಕುಡಿಯುವ ನೀರಿನ ತೊಂದರೆಯಾಗುವುದಿಲ್ಲ. ಮಳೆ ಬರದಿದ್ದರೂ ಸಹ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಕೃಷ್ಣಾ ನಿಗಮದ ನೀರಾವರಿ ಅಧಿಕಾರಿ ಮತ್ತು ಜಿಪಂ ಅಧಿಕಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಮಂಗಳವಾರ ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ನಡೆದ ತ್ತೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕರ್ನಾಟಕ ರಸ್ತೆ ಸಾರಿಗೆಯವರು ಗ್ರಾಮೀಣ ಪ್ರದೇಶದಿಂದ ಬಸ್‌ಗಳನ್ನು ಓಡಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅದಲ್ಲದೆ ರಸ್ತೆ ಕೆಟ್ಟಿದೆ ಎಂದು ತಡವಲಗಾ ಗ್ರಾಮಕ್ಕೆ ಹೋಗುವ ಎಲ್ಲ ಬಸ್ ಓಡಿಸದಿರುವುದಕ್ಕೆ ತರಾಟೆಗೆ ತೆಗೆದುಕೊಂಡ ಶಾಸಕರು, ಇದ್ದ ವ್ಯವಸ್ಥೆಯಲ್ಲಿಯೇ ಸರಿಪಡಿಸಿ ಕೆಲಸ ಮಾಡಲು ತಿಳಿಸಿದರು.
ತಾಲೂಕಿನಲ್ಲಿ ರಸ್ತೆಗಳು ಕೆಟ್ಟಿವೆ ಎಂದು ಸದಸ್ಯೆ ಬೋರಮ್ಮ ಮುಳಜಿ ಆರೋಪಿಸಿದರು. ನಾದ ಕೆಡಿಯಿಂದ ಶಿರಶ್ಯಾಡ ರಸ್ತೆ ಕೆಟ್ಟಿದ್ದು ಟಂಟಂ ಬಿದ್ದು ಮಗು ಸತ್ತಿದೆ. ಬಸ್ ಕೂಡ ಬಿದ್ದು ಸೇರಿದಂತೆ ಹಲವಾರು ಘಟನೆಗಳಾಗಿವೆ ಎಂದರು. ಕೃಷಿ, ಹೆಸ್ಕಾಂ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆ ಪ್ರಗತಿ ಕುರಿತು ಚರ್ಚಿಸಲಾಯಿತು.
ಎಸಿ ರಾಮಚಂದ್ರ ಗಡದೆ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಇಒ ಸುನೀಲ ಮದ್ದಿನ, ಬಿಇಒ ವಸಂತ ರಾಠೊಡ, ಟಿಎಚ್‌ಒ ಅರ್ಚನಾ ಕುಲಕರ್ಣಿ, ಸಿಪಿಐ ರಾಜಶೇಖರ ಬಡೆದೇಸಾರ, ಆರ್.ಎಸ್. ರುದ್ರವಾಡಿ, ಆರ್.ಎಸ್. ಮೆಂಡೆದಾರ, ಎಸ್.ಓ. ಬಿರಾದಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.