Advertisement

ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಿ

06:14 PM Nov 22, 2020 | Suhan S |

ದಾವಣಗೆರೆ: ಜಗಳೂರು ವಿಧಾನಸಭೆ ಕ್ಷೇತ್ರದ 57 ಕೆರೆ ತುಂಬಿಸುವ ದೀಟೂರುಏತ ನೀರಾವರಿ ಯೋಜನೆಯ ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ಆಗುವಂತೆ ಸ್ಥಳೀಯ ರೈತರು, ಯುವಕರು, ತಾಂತ್ರಿಕ ಪರಿಣಿತರು ನೋಡಿಕೊಳ್ಳಬೇಕು ಎಂದು ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶಪ್ಪ ಮನವಿ ಮಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಕಷ್ಟು ಹೋರಾಟದ ಫಲವಾಗಿ650ಕೋಟಿ ರೂ. ದೀಟೂರು ಏತನೀರಾವರಿಯೋಜನೆ ಕ್ಷೇತ್ರಕ್ಕೆ ಮಂಜೂರಾಗಿದೆ.ಯೋಜನೆಯ ಕಾಮಗಾರಿಯಲ್ಲಿ ಈಗಾಗಲೇಹಲವು ದೋಷಗಳು ಕಂಡು ಬಂದಿದ್ದು,ಸರಿಪಡಿಸಲು ಇಲಾಖೆಯ ಇಂಜಿನಿಯರ್‌ ಗೆ ಸೂಚಿಸಲಾಗಿದೆ. ಸ್ಥಳೀಯರೂ ಸಹಕಾಮಗಾರಿ ಉತ್ತಮ ಗುಣಮಟ್ಟದಲ್ಲಿನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿರ್ವಹಿಸಬೇಕು.

ಒಂದು ವೇಳೆ ಗುಣಮಟ್ಟದ ಕೆಲಸನಡೆಯದೇ ಇದ್ದರೆ ಯೋಜನೆ ವಿಫಲಗೊಂಡು ಅದಕ್ಕೆ ನಾವೇ ಕಾರಣೀಕರ್ತರಾಗಬೇಕಾಗುತ್ತದೆ. ಆದ್ದರಿಂದ ಕಾಮಗಾರಿಯಲ್ಲಿ ಬಳಸುವ ಪೈಪ್‌ಲೈನ್‌ ಸೂಕ್ಷ್ಮತೆಗಳನ್ನುಗಮನಿಸಿ, ಪರಾಮರ್ಶಿಸುವ ಹೊಣೆಗಾರಿಕೆಯನ್ನು ಸ್ಥಳೀಯ ನಾಗರಿಕರು ಹೊತ್ತು ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಈ ಯೋಜನೆಯಡಿ ದೀಟೂರು ಗ್ರಾಮದ ತುಂಗಭದ್ರಾ ನದಿ ದಡದಲ್ಲಿ ಜಾಕ್‌ ವೆಲ್‌ ನಿರ್ಮಾಣ ಮಾಡಲಾಗುತ್ತಿದ್ದು, ಇಲ್ಲಿ 2400 ಎಚ್‌.ಪಿ. ಸಾಮರ್ಥ್ಯದ ಎಂಟು ಮೋಟಾರ್‌ ಅಳವಡಿಸಲಾಗುತ್ತಿದೆ. ಇದರಿಂದ 1.39 ಟಿ.ಎಂ.ಸಿ ನೀರನ್ನು ಇಲ್ಲಿಂದ 30 ಕಿ.ಮೀ. ದೂರದ ಅಣಜಿ ಸಮೀಪದ ಚಟ್ನಳ್ಳಿ ಗುಡ್ಡದವರೆಗೆ ಹರಿಸಲಾಗುತ್ತದೆ. ನದಿಯಿಂದ 600 ಅಡಿ ಎತ್ತರದಲ್ಲಿ ಗುಡ್ಡವಿದ್ದುಅಲ್ಲಿಂದ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಈ ಕಾಮಗಾರಿಯಲ್ಲಿ ಕೇವಲ 25-40ವರ್ಷ ಆಯಸ್ಸು ಇರುವ ಎಂ.ಎಸ್‌. ಪೈಪ್‌ಹಾಕಲು ಅವಕಾಶ ನೀಡದೆ 100-150 ವರ್ಷ ಆಯಸ್ಸು ಇರುವ ಎಚ್‌.ಡಿ. ಪೈಪ್‌ ಹಾಕುವಂತೆ ನೋಡಿ ಕೊಳ್ಳಬೇಕು.ಗುತ್ತಿಗೆದಾರರಿಗೆ ಈಗಿರುವ ಐದು ವರ್ಷದ ನಿರ್ವಹಣೆಯನ್ನು 10 ವರ್ಷಗಳಿಗೆ ವಿಸ್ತರಿಸಲು ಒತ್ತಾಯಿಸಬೇಕಾಗಿದೆ ಎಂದು ತಿಳಿಸಿದರು.

ದೀಟೂರು ಏತ ನೀರಾವರಿ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುವಂತೆನೋಡಿಕೊಳ್ಳಬೇಕು. ಯೋಜನೆಯಕಾಲಾವಧಿ ಪ್ರಕಾರ ಈ ಡಿಸೆಂಬರ್‌ ವೇಳೆಗೆಕೆರೆಗಳಿಗೆ ನೀರು ತುಂಬಿಸಬೇಕಿತ್ತು. ಆದರೆ,ಈವರೆಗೆ ಶೇ. ಕೇವಲ 35ರಷ್ಟು ಮಾತ್ರಕೆಲಸ ಆಗಿದೆ. ಪ್ರಸ್ತುತ ಭದ್ರಾ ಜಲಾಶಯದ ನೀರು ನಿಲ್ಲಿಸಲಾಗಿದ್ದು, ಈ ಸಂದರ್ಭದಲ್ಲಿ ಕಾಮಗಾರಿ ವೇಗವಾಗಿ ನಡೆಯುವಂತೆ ನೋಡಿಕೊಂಡು ಮುಂದೆ ಮೇ ತಿಂಗಳ ವೇಳೆಗೆ ಮತ್ತೆ ಭದ್ರಾ ಜಲಾಶಯದ ನೀರು ನಿಲ್ಲಿಸಿದಮೇಲೆ ಮತ್ತೆ ಕಾಮಗಾರಿ ತ್ವರಿತಗೊಳಿಸುವಂತೆ ನೋಡಿಕೊಳ್ಳಬೇಕು. ಹೀಗಾದರೆ ಮುಂದಿನಜುಲೈ ವೇಳೆಗಾದರೂ ಕೆರೆಗಳಿಗೆ ನೀರು ಹರಿಸಬಹುದಾಗಿದೆ. ಈ ಎಲ್ಲದರ ಬಗ್ಗೆಯೂನಾಗರಿಕರು ಗಮನಹರಿಸಿ ಯೋಜನೆಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಕೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next