Advertisement

ಸವಾಲು ಎದುರಿಸುವ ವಿದ್ಯಾರ್ಥಿಗಳನ್ನು ರೂಪಿಸಿ

12:32 PM May 08, 2018 | |

ಬೆಂಗಳೂರು: ಜಾಗತಿಕವಾಗಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

Advertisement

ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಸ್ಪರ್ಧಾತ್ಮಕ ಜಗತ್ತು. ಕ್ಷಣಕ್ಷಣವೂ ಸವಾಲು ಎದುರಾಗುತ್ತಿರುತ್ತದೆ. ಹೀಗಾಗಿ ಶಿಕ್ಷಕರ ಜವಾಬ್ದಾರಿ ತರಗತಿಗೆ ಸೀಮಿತವಾಗಿಲ್ಲ ಎಂದು ಹೇಳಿದರು.

ಪಠ್ಯಪುಸ್ತಕದ ಅಧ್ಯಯನ ಕಲಿಕೆಯ ಒಂದು ಭಾಗ. ಅದರಾಚೆಗೂ ಕಲಿಕೆಯ ಹತ್ತಾರು ಮಾರ್ಗವಿದೆ. ಆಧುನಿಕತೆಗೆ ತಕ್ಕಂತೆ ಶಿಕ್ಷಕರು ತನ್ನ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಇದಕ್ಕೆ ಸ್ವಯಂ ಕಲಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸಾಮಾಜಿಕ ವಿಚಾರಗಳನ್ನು ಬೋಧಿಸಬೇಕು ಎಂಬ ಸಲಹೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯುತ್ತಮ ವ್ಯವಸ್ಥೆಯಾಗಿದ್ದು, ಯಾವುದೇ ಪಕ್ಷಗಳ ಸಿದ್ಧಾಂತಗಳನ್ನು ನೋಡಿ ಮತ ಚಲಾಯಿಸಬೇಕೆ ಹೊರತು, ಹಣ ಇನ್ನಿತರ ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ವಿಶ್ವವಿದ್ಯಾಲಯಗಳ ಸುಧಾರಣೆಗೆ ಸಾಕಷ್ಟು ಯೋಜನೆ ಜಾರಿಗೆ ತಂದಿದೆ ಎಂದರು. ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ, ಕುಲಪತಿ ಡಾ. ಕೆ.ಎನ್‌.ಬಿ ಮೂರ್ತಿ, ಪ್ರಾಂಶುಪಾಲ ಡಾ. ಕೆ.ಎಸ್‌. ಶ್ರೀಧರ್‌ ಹಾಗೂ ಪಿಇಎಸ್‌ ವಿದ್ಯಾಸಂಸ್ಥೆಯ ಶಿಕ್ಷಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next