Advertisement

RSS; ಜಾತಿ ಮತ್ತು ಲಿಂಗ ತಾರತಮ್ಯ ಹೋಗಲಾಡಿಸಲೇಬೇಕು: ಮೋಹನ್ ಭಾಗವತ್

10:33 PM Apr 07, 2024 | Team Udayavani |

ವಡೋದರಾ: ಸಮಾಜದಲ್ಲಿ ಜಾತಿ ಮತ್ತು ಲಿಂಗದ ಮೇಲಿನ ತಾರತಮ್ಯವನ್ನು ಹೋಗಲಾಡಿಸಲು ವಿಶೇಷ ಪ್ರಯತ್ನಗಳನ್ನು ಮಾಡುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಕರೆ ನೀಡಿದ್ದಾರೆ.

Advertisement

ಎರಡು ದಿನಗಳ ಗುಜರಾತ್ ಭೇಟಿಯ ಎರಡನೇ ದಿನದಂದು ವಡೋದರಾದಲ್ಲಿ ನಡೆದ ಬುದ್ಧಿಜೀವಿಗಳ ಸಭೆಯಲ್ಲಿ ಮಾತನಾಡಿ ಈ ಕರೆ ನೀಡಿದ್ದಾರೆ. ಶನಿವಾರ ಭಾಗವತ್ ದಕ್ಷಿಣ ಗುಜರಾತ್‌ನ ಭರೂಚ್‌ನಲ್ಲಿ ಇದೇ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಆರ್‌ಎಸ್‌ಎಸ್ ಹೇಳಿದೆ.

‘ಸೌಹಾರ್ದತೆ, ಕೌಟುಂಬಿಕ ಶಿಕ್ಷಣ, ಆಚರಣೆಗಳ ಅನುಸರಣೆ, ಪರಿಸರ ಸಂರಕ್ಷಣೆ, ಸ್ಥಳೀಯ ಮೌಲ್ಯಗಳ ಜಾಗೃತಿ ಮತ್ತು ನಾಗರಿಕ ಕರ್ತವ್ಯದ ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆಗಳಿಗೆ ‘ಸಜ್ಜನ ಶಕ್ತಿ’ (ಉದಾತ್ತ ಶಕ್ತಿ) ಸಂಘಟಿತವಾಗಬೇಕು ಮತ್ತು ಸಕ್ರಿಯವಾಗಬೇಕು’ ಎಂದು ಕರೆ ನೀಡಿದ್ದಾರೆ.

“ಸಮಾಜದಲ್ಲಿ ಜಾತಿ ಮತ್ತು ಲಿಂಗ ವ್ಯತ್ಯಾಸಗಳನ್ನು ತೊಡೆದುಹಾಕಲು ವಿಶೇಷ ಪ್ರಯತ್ನಗಳನ್ನು ಮಾಡಬೇಕು ಮತ್ತು ಸಜ್ಜನ ಶಕ್ತಿಯ ಜಾಲವನ್ನು ರಚಿಸಲು ವಿಶೇಷ ಪ್ರಯೋಗಗಳನ್ನು ಮಾಡಬೇಕು” ಎಂದು ಹೇಳಿರುವುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next