ಆರೋಗ್ಯವಾಗಿರಬೇಕಾದರೆ ದೇಹದಲ್ಲಿ ಕೊಬ್ಬಿನ ಪ್ರಮಾಣ ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಈಗಿನ ಜೀವನ ಶೈಲಿ ಯಿಂದಾಗಿ ಸಣ್ಣ ವಯಸ್ಸಿನ ಮಕ್ಕಳಿಂದು ಅಧಿಕ ಕೊಲೆ ಸ್ಟ್ರಾಲ್ (ಕೊಬ್ಬು) ನಿಂದ ಬಳಲುತ್ತಿದ್ದಾರೆ. ಇದನ್ನು ಸರಿಯಾದ ಸಮಯದಲ್ಲಿ ನಿಯಂತ್ರಿಸದೇ ಹೋದರೆ ಮುಂದೆ ಜೀವನ ಪರ್ಯಂತ ತೊಂದರೆ ಅನುಭವಿಸಬೇಕಾಗುತ್ತದೆ.
ನಮ್ಮ ಜೀವನ ಶೈಲಿಯ ಮೂಲಕವೇ ಅಧಿಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಇದಕ್ಕಾಗಿ ಕೆಲವೊಂದು ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಾಕು. ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆಯಾದರೂ ವ್ಯಾಯಾಮ ಮಾಡಬೇಕು. ಇದರಿಂದ ನಮ್ಮ ದೇಹದ ಆಕಾರವನ್ನು ಸರಿಯಾಗಿ ಇರಿಸಿಕೊಳ್ಳಬಹುದು. ಜಡತ್ವ ಜೀವನ ಶೈಲಿಯಿಂದ ಕೊಲೆಸ್ಟ್ರಾಲ್ ಹೆಚ್ಚುವುದು ಮಾತ್ರವಲ್ಲ ಬೊಜ್ಜು, ಸ್ನಾಯುಗಳ ಶಕ್ತಿಯನ್ನೂ ಕುಂದಿಸುತ್ತದೆ.
ಎಣ್ಣೆಯಲ್ಲಿ ಕರಿದ ಅಥವಾ ಹುರಿದ ಆಹಾರವನ್ನು ತ್ಯಜಿಸಿ ಆರೋಗ್ಯಕರ ಕೊಬ್ಬನ್ನು ಹೊಂದಿರುವ ಮೀನು, ಆಲಿವ್, ಡ್ರೈಫ್ರುಟ್ಸ್ ಗಳನ್ನು ಸೇವಿಸಬೇಕು. ಹೆಚ್ಚು ನಾರಿನಾಂಶ ಹೊಂದಿರುವ ಹಣ್ಣು, ತರಕಾರಿ, ಧಾನ್ಯ, ಬೀಜಗಳ ಸೇವನೆಯಿಂದ ದೇಹ ಪ್ರಕೃತಿಯನ್ನು ಸಮತೋಲನ ದಲ್ಲಿರಿಸಬಹುದು.
ಇದನ್ನೂ ಓದಿ:ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತೆ…ಮೀನಿನಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಗೊತ್ತಾ!
ಇದು ಹೃದಯದ ಆರೋಗ್ಯಕ್ಕೂ ಉತ್ತಮ. ನಿತ್ಯ ಆಹಾರ ದಲ್ಲಿ ಕನಿಷ್ಠ 5 ಬಗೆಯ ತಾಜಾ ಹಣ್ಣು ಅಥವಾ ತರ ಕಾರಿ ಇರಲಿ. ಇದರಿಂದ ಎಲ್ಲ ಆರೋಗ್ಯ ಸಮಸ್ಯೆಗಳು ದೂರ ವಾಗುವುವು. ಧೂಮಪಾನ, ಮದ್ಯಪಾನ ಒಳ್ಳೆಯದಲ್ಲ. ಇವು ಶ್ವಾಸಕೋಶ, ಯಕೃತ್ ನ ಆರೋಗ್ಯದ ಮೇಲೆ ಪರಿ ಣಾಮ ಬಿರುತ್ತವೆ ಮಾತ್ರವಲ್ಲ ಕೊಲೆಸ್ಟ್ರಾಲ್ ಮಟ್ಟವನ್ನೂ ಹೆಚ್ಚಿಸುತ್ತವೆ.