Advertisement
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಕಚೇರಿ ಸಭಾಂಗಣದಲ್ಲಿ ನಡೆದ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ ಎಸ್‌ಸಿಪಿ ಯೋಜನೆಯಡಿ ಒಟ್ಟಾರೆ ಶೇ.57 ಮತ್ತು ಟಿಎಸ್‌ಪಿ ಯೋಜನೆಯಡಿಶೇ. 66 ಪ್ರಗತಿ ಸಾಧಿಸಲಾಗಿದೆ. ಆದಷ್ಟು ಶೀಘ್ರವಾಗಿ ಅನುದಾನವನ್ನು ಬಳಕೆ ಮಾಡಿ, ನಿಗದಿತ ಕಾರ್ಯಕ್ರಮಗಳು, ಕಾಮಗಾರಿಗಳನ್ನು ಪೂರ್ಣಗೊಳಿಸಿ ಗುರಿ ಸಾಧಿಸಬೇಕು ಎಂದರು.
Related Articles
Advertisement
ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಎಸ್‌ಸಿಪಿ ಯೋಜನೆಯಡಿ ಶೇ 60.55, ಟಿಎಸ್‌ಪಿ ಯೋಜನೆಯಡಿ ಸಿಸಿ ರಸ್ತೆ,ಸೋಲಾರ್ ನೀರು ವ್ಯವಸ್ಥೆ ಒದಗಿಸಲು ಟೆಂಡರ್ ಕರೆಯಲಾಗಿದೆ. ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಐಎಎಸ್/ಕೆಎಎಸ್ ಕೋಚಿಂಗ್ ನೀಡಲು 12 ಲಕ್ಷ ಅನುದಾನ ನಿಗದಿಯಾಗಿದೆ ಎಂದರು.
ಎಸ್‌ಟಿಗೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನುಗುರುತಿಸಿ ದಾವಣಗೆರೆ ವಿವಿ ರಿಜಿಸ್ಟ್ರಾರ್‌ರನ್ನು ಸಂಪರ್ಕಿಸಿ ಕೋಚಿಂಗ್ ಕೊಡಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಯೋಜನೆಯಡಿ ಅತಿ ಕಡಿಮೆ ಪ್ರಗತಿ ಸ ಧಿಸಿರುವ ಹಾಗೂ ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಿದರು.
ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಅರಣ್ಯ, ಸಹಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಕೈಮಗ್ಗ ಮತ್ತು ಜವಳಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ,ಕೈಗಾರಿಕಾ ಕೇಂದ್ರ, ಗ್ರಾಮಿಣ ಕುಡಿಯುವನೀರು, ಪಶುಪಾಲನೆ, ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ನಿಗದಿತ ಅವಧಿ ಯೊಳಗೆ ಪ್ರಗತಿ ಸಾಧಿಸುವಂತೆ ತಿಳಿಸಿದರು.