Advertisement

ಜನರ ಕೆಲಸ ತ್ವರಿತವಾಗಿ ಮಾಡಿ

05:43 PM Mar 12, 2022 | Team Udayavani |

ಗುರುಮಠಕಲ್‌: ಮತಕ್ಷೇತ್ರದ ಜನರ ಕೆಲಸಗಳು ತ್ವರಿತವಾಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಜನರ ವಿಶ್ವಾಸ ಗಳಿಸಿ ತ್ವರಿತವಾಗಿ ಕೆಲಸ ಮಾಡಿಕೊಡಬೇಕು ಎಂದು ಶಾಸಕ ನಾಗನಗೌಡ ಕಂದಕೂರ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಪಟ್ಟಣದ ನೂತನ ತಹಶೀಲ್ದಾರ್‌ ಕಾರ್ಯಾಲಯ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಮತಕ್ಷೇತ್ರವು ಶೇ.50 ಹಳ್ಳಿಗಳು ತೆಲಂಗಾಣ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿವೆ. ನಾನು ಶಾಸಕನಾದ ತಕ್ಷಣ ಜನರಿಗೆ ಅನುಕೂಲವಾಗುವ ಸಂಬಂಧ ಎಲ್ಲ ಸರ್ಕಾರಿ ಕಾರ್ಯಾಲಯಗಳು ಹಾಗೂ ಕಾರ್ಯಗಳು ಒಂದು ಸ್ಥಳದಲ್ಲಿ ಸುಲಭವಾಗಿ ಜನರಿಗೆ ದೊರಕುವಂತಾಗಲು ಮಿನಿ ವಿಧಾನ ಸಭೆ ನಿರ್ಮಾಣ ಮಾಡಲು ಪ್ರಯತ್ನಿಸಿದ್ದೇನೆ ಎಂದರು.

ತಹಶೀಲ್ದಾರ್‌ ಶರಣ ಬಸವ, ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಪಿಐ ಖಾಜಾಹುಸೇನ್‌, ಜೆಡಿಎಸ್‌ ಬ್ಲಾಕ್‌ ಅಧ್ಯಕ್ಷ ಪ್ರಕಾಶ ನಿರೇಟಿ, ಎಪಿಎಂಸಿ ಸದಸ್ಯ ಅನಂತಪ್ಪ ಬೋಯಿನ್‌, ಜಿ. ತಮ್ಮಣ್ಣ, ಬಸಣ್ಣ ದೇವರಹಳ್ಳಿ, ಕಿಷ್ಟರೆಡ್ಡಿ ಪೊಲೀಸ್‌ ಪಾಟೀಲ್‌, ರಘುನಾಥರೆಡ್ಡಿ ಗವಿನೋಳ ಇತರರು ಇದ್ದರು. ಶಿಕ್ಷಣ ಸಂಯೋಜಕ ಶಿವರಾಜ ಸಾಕಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next