ಯಾದಗಿರಿ: ಕುಷ್ಠ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಅರಿವು ಅವಶ್ಯಕ ಎಂದು ಹಯ್ನಾಳ (ಬಿ) ಸಮುದಾಯದ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಜಲಾಲಸಾಬ್ ಕುರುಕುಂದಿ ಹೇಳಿದರು.
ತಾಲೂಕಿನ ಹಯ್ನಾಳ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕೊಂಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಷ್ಠ ರೋಗದ ಅರಿವು ಜಾಗೃತಿ ಅಭಿಯಾನಕ್ಕೆ ಸಸಿಗಳಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕುಷ್ಠ ರೋಗ ಮಾರಕ ರೋಗವಲ್ಲ, ಜನರು ಧನಾತ್ಮಕವಾಗಿ ಚಿಂತಿಸುವುದರ ಮೂಲಕ ರೋಗಿಗಳ ಕಾಳಜಿ ವಹಿಸಬೇಕಿದೆ ಎಂದರು.
ಗ್ರಾಪಂ ಅಧ್ಯಕ್ಷ ದೇವಿಂದ್ರಪ್ಪ ಬಾಗ್ಲಿ ಶಾಲಾ ಮಕ್ಕಳ ಜಾಥಕ್ಕೆ ಚಾಲನೆ ನೀಡಿದರು. ಶಾಲೆಯ ಮಕ್ಕಳು ಗ್ರಾಮದಲ್ಲಿ ಸಂಚರಿಸಿ ಪ್ರಭಾತ ಫೇರಿ ಮೂಲಕ ಗ್ರಾಮಸ್ಥರಲ್ಲಿ ಕುಷ್ಠ ರೋಗದ ಬಗ್ಗೆ ಜಾಗೃತಿ ಅರಿವು ಮೂಡಿಸಿದರು.
ಇದೇ ಸಂದರ್ಭದಲ್ಲಿ ಕುಷ್ಠ ರೋಗ ಬಾದಿತರನ್ನು ಸತ್ಕರಿಸಲಾಯಿತು. ಮುಖ್ಯ ಶಿಕ್ಷಕ ಮೈನೋದ್ಧೀನ್ ಪಠಾಣ, ಗ್ರಾಪಂ ಅಧ್ಯಕ್ಷ ದೇವಿಂದ್ರಪ್ಪ ಬಾಗ್ಲಿ, ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದ ಜಾಲಿಬೆಂಚಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಮುನುಮುಟಿಗಿ, ರಮೇಶ ಬಾವೂರ, ಯಂಕಣ್ಣ ಜಲ್ಲಿ, ಮಾಳಿಂಗರಾಯ ನಾಗರಾಳ, ಶರಣಪ್ಪ ಮಡಿವಾಳ, ರಾಮಚಂದ್ರ ಡೋಣ್ಣೆಗೌಡ, ಮರೆಪ್ಪ, ರಾಮಯ್ಯ ನಾಗರಾಳ, ಆರೋಗ್ಯ ಇಲಾಖೆ ಸಿಬ್ಬಂದಿ ಚೇತನ್, ಶ್ರೀಕಾಂತ ಹಾಗೂ ಶಾಲೆಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲೆಯ ಮಕ್ಕಳು ಭಾಗವಹಿಸಿದ್ದರು. ಶಿಕ್ಷಕ ಈರಣ್ಣ ಯಾಳವಾರ ನಿರೂಪಿಸಿದರು. ಶಿಕ್ಷಕ ಬಸವಮಹಾಂತ ವಂದಿಸಿದರು.