ಬೆಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಬಿಬಿಎಂಪಿ ನಗರ ಯೋಜನೆ ಸಹಾಯಕ ನಿರ್ದೇಶಕ ದೇವೇಂದ್ರಪ್ಪನನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ.
ಪೂರ್ಣಗೊಂಡ ಕಟ್ಟಡಕ್ಕೆ ಅಕ್ಯುಪೆನ್ಸ್ ಸರ್ಟಿಫಿಕೇಟ್ ನೀಡಲು ಲಂಚ ಪಡೆಯುತ್ತಿದ್ದ ವೇಳೆ ದೇವೇಂದ್ರಪ್ಪ ಸಿಕ್ಕಿಬಿದ್ದಿದ್ದರು.
ಹುಳಿಮಾವು ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿಯವರಿಗೆ ಸೇರಿದ ಸ್ವತ್ತಿನಲ್ಲಿ ಕಟ್ಟಡ ನಿರ್ಮಾಣ ಮಾಡಿ ಸಿಗ್ಮಿಸ್ ಬ್ರಿವರೀಸ್ ಘಟಕದ ಕಟ್ಟಡ ನಿರ್ಮಾಣ ರ್ಪೂಗೊಳಿಸಲಾಗಿತ್ತು. ಆದರೆ ಪೂರ್ಣಗೊಂಡ ಕಟ್ಟಡ ಕಾಮಗಾರಿಗೆ ಓ.ಸಿ. ಪಡೆಯಲು ಕಂಪನಿ ಮ್ಯಾನೇಜರ್ ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಎಡಿಟಿಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ನಿಮ್ಮ ಸರ್ಕಾರ ಇದ್ದಾಗ ಏನು ಮಂಡಕ್ಕಿ ತಿಂತಾ ಇದ್ರಾ ಸಿದ್ದರಾಮಯ್ಯನವರೇ..? ಈಶ್ವರಪ್ಪ
ಆದರೆ, ಎಡಿಟಿಪಿ ದೇವೇಂದ್ರಪ್ಪ ಓ.ಸಿ ನೀಡಲು 40 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಮ್ಯಾನೇಜರ್ ನೀಡಿದ ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ಫೆ. 5ರಂದು ಕಾರ್ಯಾಚರಣೆ ನಡೆಸಿ ದೂರು ದಾರರಿಂದ ತಮ್ಮ ಕಚೇರಿಯಲ್ಲಿ ದೇವೇಂದ್ರಪ್ಪ 20 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ದೇವೆಂದ್ರಪ್ಪನನ್ನು ಬಂಧಿಸಿ ಲಂಚದ ಹಣವನ್ನು ಜಪ್ತಿ ಮಾಡಿದ್ದಾರೆ.ಜತೆಗೆ ಅವರ ಕಾರಿನಲ್ಲಿ 7.40 ಲಕ್ಷ ರೂ. ಹಣ ಹಾಗೂ 50ಕ್ಕೂ ಹೆಚ್ಚು ಕಡತ ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: ಬಂಟ್ವಾಳ: ತಾಯಿಯ ಕುರಿತು ಭಾವನಾತ್ಮಕ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ!
ಫೆ.5ರಂದು ನಡೆಸಿದ ಕಾರ್ಯಾಚರಣೆ ವೇಳೆ ದೇವೇಂದ್ರಪ್ಪ ಕಾರಿನಲ್ಲಿ ಅನಧಿಕೃತವಾಗಿ 7.40 ಲಕ್ಷ ರೂ. ಹಾಗೂ ಐವತ್ತಕ್ಕೂ ಹೆಚ್ಚು ಕಡತಗಳು ಪತೆಯಾಗಿದ್ದವು. ಇದರ ಜಾಡು ಹಿಡಿದು ಎಸಿಬಿ ಅಧಿಕಾರಿಗಳ ತಂಡ, ದೇವೇಂದ್ರಪ್ಪ ಮನೆಗೆ ತರಳಿದಾಗ ಯೋಜನಾ ವಿಭಾಗಕ್ಕೆ ಸಂಬಂಧಿಸಿದ 430ಕ್ಕೂ ಅಧಿಕ ಕಡತಗಳು ಪತ್ತೆಯಾಗಿವೆ. ಜತೆಗೆ ಪಾಲಿಕೆ ಅಧಿಕಾರಿಗಳಾದ ಎಇ, ಸಿಇ, ಜಂಟಿ ಆಯುಕ್ತರು ಸೇರಿದಂತೆ ವಿವಿಧ ಅಧಿಕಾರಿಗಳ 50ಕ್ಕೂ ಹೆಚ್ಚು ಸೀಲುಗಳು ಪತ್ತೆಯಾಗಿವೆ. ಜತೆಗೆ ಆರೋಪಿ ದೇವೇಂದ್ರಪ್ಪ ಬಳಿ ಐಶಾರಾಮಿ ಕಾರುಗಳು, ವಿವಿಧ ಬ್ಯಾಂಕ್ ಖಾತೆಗಳು, ಅಪಾರ ಪ್ರಮಾಣದ ನಿಶ್ಚಿತ ಠೇವಣಿ ಹಣ ಕಂಡು ಬಂದಿದೆ