Advertisement
ನಗರದ ಬ್ರಿಮ್ಸ್ ಆಸ್ಪತ್ರೆಗೆ ಭೇಟಿನೀಡಿ ಪರಿಶೀಲನೆ ನಡೆಸಿ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬ ವೈದ್ಯರು, ಎಲ್ಲೋ ಒಂದು ಕಡೆ ಕರ್ತವ್ಯದಲ್ಲಿ ವ್ಯತ್ಯಾಸವಾಗಿದ್ದು, ಅದು ಮಾಧ್ಯಮದಲ್ಲಿ ವರದಿಯಾಗಿ, ಇಡೀ ಆಸ್ಪತ್ರೆಯೇ ಅಸ್ತವ್ಯಸ್ತವಾಗಿದೆ ಎಂದು ಚರ್ಚೆಯ ವಸ್ತುವಾಗಲು ಅಧಿಕಾರಿಗಳು ಬಿಡಬಾರದು.
15 ದಿನಗಳೊಳಗೆ ಬದಲಾವಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಕೆಲವು ವೈದ್ಯರು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ. ಹಾಜರಾದರೂ ನಿಗದಿಪಡಿಸಿದ ಸ್ಥಳದಲ್ಲಿ
ಕುಳಿತು ಕೆಲಸ ನಿರ್ವಹಿಸುವುದಿಲ್ಲ ಎನ್ನುವ ದೂರುಗಳಿಗೆ ಕೊನೆಯಾಗಬೇಕು. ರೋಗಿಗಳಿಗೆ ತಕ್ಷಣ ಸ್ಪಂದಿಸಬೇಕು.
Related Articles
Advertisement
ಕಟ್ಟಡ ದೊಡ್ಡದಿದ್ದು, ಅಗತ್ಯಕ್ಕೆ ತಕ್ಕಂತೆ ಕಾರ್ಯ ಸೌಕರ್ಯಗಳ ಕೊರತೆಯಾಗಿದೆ. ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆಯಿದೆ. ಅಗತ್ಯಕ್ಕನುಸಾರ ಮಾನವ ಸಂಪನ್ಮೂಲವಿದ್ದಲ್ಲಿ ತೊಂದರೆಗಳು ತಪ್ಪಲಿವೆ ಎಂದು ಎಂ.ದೇಶಮುಖ, ವಿಜಯಕುಮಾರ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಮನೋಹರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಲಭೀಮ ಕಾಂಬಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎ.ಜಬ್ಟಾರ ಸೇರಿದಂತೆ ಇತರೆ ವೈದ್ಯರು ಇದ್ದರು.