ದೇವನಹಳ್ಳಿ: ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದರ ಮೂಲಕ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಮೊದಲ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಇತರೆ ಪಂಚಾಯಿತಿಗಳಿಗೆ ಕಾರಹಳ್ಳಿ ಗ್ರಾಪಂ ಮಾದರಿ ಆಗಿದೆ. ಮುಂದಿನ ವರ್ಷಗಳಲ್ಲಿ ಇತರೆ ಪಂಚಾಯಿತಿಗಳಲ್ಲೂ ಸರ್ಕಾರದ ಎಲ್ಲಾ ಯೋಜನೆಗಳು ಜನ ಸಾಮಾನ್ಯರಿಗೆ ರೈತರಿಗೆ ತಲುಪುವಂತೆ ಆಗಬೇಕು. ಬಡವರಿಗೆ 94 ಸಿ ಅಡಿಯಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ. ಗ್ರಾಪಂ ವತಿಯಿಂದ ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಬ್ಯಾಗ್ ಗಳನ್ನು ನೀಡುವುದರ ಮೂಲಕ ಜನರಿಗೆ ಮತ್ತಷ್ಟು ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಗ್ರಾಮದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿದರು.
ತಾಪಂ ಕಾರ್ಯ ನಿರ್ವಹಣಾಧಿಕಾರಿ ಮುರುಡಯ್ಯ ಮಾತನಾಡಿ, ವರ್ಷದಲ್ಲಿ ಎರಡು ಬಾರಿ ಸರ್ಕಾರದ ಆದೇಶದಂತೆ ಗ್ರಾಮಸಭೆ ನಡೆಸಬೇಕು. ಸಭೆಯಲ್ಲಿ ಗ್ರಾಮಗಳ ಅಭಿವೃದ್ಧಿ, ಫಲಾನುಭವಿಗಳ ಆಯ್ಕೆ, ಸಂಬಂಧಿಸಿದ ವಿಷಯಗಳನ್ನ ಗ್ರಾಮಸ್ಥರಿಂದ ಸಲಹೆ ಸೂಚನೆ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಎ ದೇವರಾಜ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿಸಲು ಶ್ರಮಿಸಲಾಗುತ್ತಿದೆ. ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.60-70 ರಷ್ಟು ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ.ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದ ಫಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್ ಮುನೇಗೌಡ, ತಾಪಂ ಅಧ್ಯಕ್ಷ ಚೆ„ತ್ರಾ, ತಾಪಂ ಸದಸ್ಯರಾದ ಕಾರಹಳ್ಳಿ ಶ್ರೀನಿವಾಸ್, ಶೆ„ಲಜಾ, ನೋಡಲ್ ಅಧಿಕಾರಿ ಸಿಡಿಪಿಒ ಹೇಮಾವತಿ, ಪಿಡಿಒ ಕವಿತಾ, ಗ್ರಾಪಂ ಉಪಾಧ್ಯಕ್ಷೆ ಆನಂದಮ್ಮ, ಸದಸ್ಯರಾದ ರಾಜೇಂದ್ರ, ಪ್ರಭಾವತಿ, ಗೋಪಾಲ ಗೌಡ, ವಿಜಯಮ್ಮ, ರೂಪಾ, ಅಂಬಿಕಾ, ಇಂದಿರಮ್ಮ, ಶಿವ ಶಂಕರ್, ನೇತ್ರಾವತಿ, ನಾಗರತ್ನಮ್ಮ, ಡಿಕೆ ನರಸಿಂಹಯ್ಯ, ನಾರಾಯಣಸ್ವಾಮಿ, ಟಿ.ಎಸ್ ರಾಜಣ್ಣ, ಕೆ. ನಾರಾಯಣಸ್ವಾಮಿ, ರಾಮಾಂಜನಪ್ಪ, ಸತ್ಯ ನಾರಾಯಣಮ್ಮ, ಪಂಚಾಯಿತಿ ಕಾರ್ಯದರ್ಶಿ ರಾಜೇಶ್ ಇದ್ದರು.