ಯಾದಗಿರಿ: ವಿಜ್ಞಾನ ಕ್ಷೇತ್ರದಲ್ಲಿ ದೇಶ ಮುಂದುವರೆದ ರಾಷ್ಟ್ರವಾಗಬೇಕಾದರೆ, ಮಕ್ಕಳಲ್ಲಿ ತಂತ್ರಜ್ಞಾನದ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಆಗಿರುತ್ತದೆ ಎಂದು ಮುಖ್ಯ ಶಿಕ್ಷಕಿ ದೀಪಿಕಾ ರೆಡ್ಡಿ ಹೇಳಿದರು.
ನಗರದ ಪಿ.ಎಸ್.ಡಿ ಜೈನ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿ, ಒಂದು ವಿದ್ಯಾಸಂಸ್ಥೆ ಹಾಗೂ ಆ ಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳನ್ನು ಬೆಳೆಸುವಲ್ಲಿ ಶಿಕ್ಷಕರು ಮನಃ ಪೂರ್ವಕವಾಗಿ ಶ್ರಮಿಸಬೇಕು.
ಅಂದಾಗ ಮಾತ್ರ ಶಿಕ್ಷಕ ಎನ್ನುವ ಪದಕ್ಕೆ ಒಂದು ಅರ್ಥ ಬರುತ್ತದೆ ಎಂದು ಹೇಳಿದರು.
ಈ ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳಲ್ಲಿ ಹೆಚ್ಚಿನ ಪ್ರೊತ್ಸಾಹ ತುಂಬುವಲ್ಲಿ ಶಿಕ್ಷಕಿಯರಾದ ಕುಮುದಾ ದಿನೇಶ, ಸಬಿನಾ ಡೆವಿಡ್, ಜೋಸ್ನಾಕುಮಾರಿ, ಸರಳಾ ಅರುಣ, ಶೃತಿ ಹಿರೇಮಠ, ವಿದ್ಯಾ ಶೆಟ್ಟಿ, ಲತಾ ನ್ಯಾಮಗೌಡ, ನೀತು ಪಾಂಡೆ, ರೂಪಾ ಹುಜರತಿ ಮತ್ತಿತರರು ಪ್ರಮುಖ ಪಾತ್ರ ವಹಿಸಿದ್ದರು.
ಪ್ರಾಂಶುಪಾಲ ಬಾಬು ಇಮ್ಯಾನ್ಯುವೆಲ್ ಅವರು ಶಿಕ್ಷಕಿಯರ ಈ ಒಂದು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಮ್ಮ ಮಕ್ಕಳು ಭಾಗವಹಿಸಿ, ಅವರುಗಳು ತಯಾರಿಸಿರುವ ಮಾದರಿಗಳನ್ನು ವೀಕ್ಷಿಸಿದ ಪಾಲಕ ಪೋಷಕರು ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಹಲವು ಗಣ್ಯರು ಉಪಸ್ಥಿತರಿದ್ದರು.