Advertisement

ಸಮಾಜದಲ್ಲಿ ಜಾಗೃತಿ ಮೂಡಿಸಿ

11:00 AM Sep 26, 2017 | |

ವಿಜಯಪುರ: ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದ ರಾಯಭಾರಿಗಳಿದ್ದಂತೆ. ಗ್ರಾಮೀಣ ಜನರಲ್ಲಿ ಮಹಿಳಾ ಕಾನೂನು, ಸ್ವತ್ಛತೆ ಮತ್ತು ನೈರ್ಮಲ್ಯ ಸೇರಿದಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯ
ಎಂದು ಕುಲಪತಿ ಪ್ರೊ| ಸಬಿಹಾ ಆಶಯ ವ್ಯಕ್ತಪಡಿಸಿದರು.

Advertisement

ಸೋಮವಾರ ಮಹಿಳಾ ವಿಶ್ವವಿದ್ಯಾಲಯದಲ್ಲಿ ವಿವಿಧ ವಿಭಾಗಗಳಿಂದ ಹಮ್ಮಿಕೊಂಡಿದ್ದ ಮಹಿಳಾ ಕಾನೂನು ಜಾಗೃತಿ
ಆಂದೋಲನ ಹಾಗೂ ನೈರ್ಮಲ್ಯ, ಶೌಚಾಲಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿಯಾನದಲ್ಲಿ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ. ಉತ್ತಮ ಕೆಸಲಗಳ ಮೂಲಕ ಸಾಧನೆ ಮಾಡಿ ವಿಶ್ವವಿದ್ಯಾಲಯ ಕೀರ್ತಿ ಹೆಚ್ಚಿಸುವ ಹೊಣೆಗಾರಿಕೆ ನಿಭಾಯಿಸಿ ಎಂದರು. 

ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಆರ್‌.ಸುನಂದಮ್ಮ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿನಿಯರು ಇದ್ದರು. ಆಂದೋಲನವು ಜಿಲ್ಲೆಯ ಐದು ತಾಲೂಕುಗಳ ವ್ಯಾಪ್ತಿ ಹಳ್ಳಿಗಳಲ್ಲಿ ವಿಶ್ವವಿದ್ಯಾಲಯದ 125 ಸ್ನಾತಕೋತ್ತರ ವಿದ್ಯಾರ್ಥಿನಿಯರು,
25 ಸಂಶೋಧನಾ ವಿದ್ಯಾರ್ಥಿನಿಯರು ಸೇರಿ ಪ್ರಾಧ್ಯಾಪಕರು ಪಾಲ್ಗೊಳ್ಳಲಿದ್ದು, ಬೀದಿ ನಾಟಕಗಳು, ಜಾಗೃತಿ ಹಾಡುಗಳು, ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next