Advertisement

ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ

03:58 PM Nov 29, 2021 | Team Udayavani |

ಸಿಂಧನೂರು: ರಕ್ತದಾನ ಮಾಡುವುದರಿಂದ ಯಾವುದೇ ಆರೋಗ್ಯ ಸಮಸ್ಯೆಯಾಗುವುದಿಲ್ಲ. ಮತ್ತಷ್ಟೂ ಆರೋಗ್ಯ ಸದೃಢವಾಗುತ್ತದೆ. ಮತ್ತೊಬ್ಬರ ಜೀವ ಉಳಿಸುವ ಅಮೂಲ್ಯ ಕೆಲಸಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ, ವರ್ಷಕ್ಕೆ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು ಎಂದು ತಹಶೀಲ್ದಾರ್‌ ಮಂಜುನಾಥ ಭೋಗಾವತಿ ಹೇಳಿದರು.

Advertisement

ನಗರದ ಹೊಸಳ್ಳಿ ಕ್ಯಾಂಪಿನಲ್ಲಿ ಐಕ್ಯೂ ಇಂಟರ್‌ನ್ಯಾಶನಲ್‌ ಪಿಯು ಕಾಲೇಜು, ನೆಕ್ಕಂಟಿ ಸೂರ್ಯನಾರಾಣ ಎಜ್ಯುಕೇಶನ್‌ ಟ್ರಸ್ಟ್‌, ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್‌, ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ, ಶ್ರೀಶಕ್ತಿ ಭಂಡಾರ ಹಾಗೂ ಸಪ್ತಗಿರಿ ಆಸ್ಪತ್ರೆ ಸಹಭಾಗಿತ್ವದಲ್ಲಿ ರವಿವಾರ ಹಮ್ಮಿಕೊಂಡಿದ್ದ ಬೃಹತ್‌ ಆರೋಗ್ಯ ತಪಾಸಣೆ ಶಿಬಿರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಶಹರ ಠಾಣೆ ಪಿಎಸ್‌ಐ ಸೌಮ್ಯ ಮಾತನಾಡಿ, ಆರೋಗ್ಯ ರಕ್ಷಣೆ, ಅಪಘಾತ ತಡೆಗೆ ಹೆಚ್ಚಿನ ಒತ್ತು ಕೊಡಬೇಕು. ಕಳೆದ 15 ದಿನಗಳಲ್ಲಿ 10 ಜನ ಅಪಘಾತದಲ್ಲಿ ಮೃತಪಟ್ಟಿದ್ದು, ಮುನ್ನೆಚ್ಚರಿಕೆ ಅಗತ್ಯ ಎಂದರು.

ಶಿಬಿರದಲ್ಲಿ 500ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. 30ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪ್ರಭಾಕರ ಕುಲಕರ್ಣಿ, ಪಿಎಸ್‌ಐ ಬಸವರಾಜ, ಐಕ್ಯೂ ಪಿಯು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರರಾವ್‌, ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷ ಜಿ. ರಾಮಕೃಷ್ಣ, ಆಹಾರ ಜೋಳಿಗೆ ಟ್ರಸ್ಟ್‌ ಕಾರ್ಯದರ್ಶಿ ಅಶೋಕ ನಲ್ಲಾ, ದಂತ ವೈದ್ಯ ಡಾ| ನವೀನ್‌, ಶ್ರೀಶಕ್ತಿ ಭಂಡಾರದ ಅಧ್ಯಕ್ಷ ಸೋಮನಗೌಡ ಬಾದರ್ಲಿ, ಸನ್‌ರೈಸ್‌ ಫಾರ್ಮಸಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next