Advertisement

ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿ

11:02 AM Oct 29, 2019 | Suhan S |

ಹರಿಹರ: ಸೂಳೆಕೆರೆ ಹಳ್ಳದ ಪ್ರವಾಹದಿಂದ ಕೊಚ್ಚಿ ಹೋಗಿದ್ದ ತಾಲೂಕಿನ ಬೆಳ್ಳೂಡಿ ಗ್ರಾಮದ ರಸ್ತೆಯನ್ನು ಭಾನುವಾರ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಪರಿಶೀಲಿಸಿದರು.

Advertisement

ಸುಮಾರು 40 ಮೀ. ರಸ್ತೆಯೇ ನೀರಿನ ಸೆಳವಿಗೆ ಕೊಚ್ಚಿ ಹೋಗಿರುವುದನ್ನು ಕಂಡು ಆಶ್ಚರ್ಯಗೊಂಡ ಅವರು, ಸೇತುವೆ ನಿರ್ವಹಣೆ ಸಣ್ಣ ನೀರಾವರಿ ಇಲಾಖೆಗೆ ಹಾಗೂ ರಸ್ತೆ ನಿರ್ವಹಣೆ ಜಿಪಂ ಇಂಜಿನಿಯರಿಂಗ್‌ ವಿಭಾಗಕ್ಕೆ ಸೇರಿದ್ದಾಗಿದ್ದು, ಎರಡೂ ಇಲಾಖೆಗಳ ಕಾರ್ಯಪಾಲಕ ಅಭಿಯಂತರರಿಗೆ ದೂರವಾಣಿಯಲ್ಲಿ ಮಾತನಾಡಿ, ಕೂಡಲೇ ಜನ, ವಾಹನ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿ, ನಂತರ ನಾಲ್ಕೈದು ದಿನಗಳಲ್ಲಿ ಪುನರ್‌ ನಿರ್ಮಾಣ ಕುರಿತು ವಿಸ್ತೃತ ವರದಿ ನೀಡಿವಂತೆ ಸೂಚಿಸಿದರು.

ಅಕ್ಕಪಕ್ಕದ ಎಲೆಬಳ್ಳಿ ತೋಟಗಳಿಗೆ ಭೇಟಿ ನೀಡಿದ ಡಿಸಿ, ನೀರು ನಿಂತು ಎಲೆಬಳ್ಳಿ ಸೊರಗಿರುವುದನ್ನು ಗಮನಿಸಿದರು. ಸತತವಾಗಿ ನೀರು ನಿಂತಿರುವುದರಿಂದ ಬಹುತೇಕ ಎಲೆಬಳ್ಳಿಗಳನ್ನು ಬದಲಿಸಬೇಕಾಗಿದೆ. ಇದರಿಂದ ಅಂದಾಜು ಎರಡು ವರ್ಷ ಬೆಳೆ ಇಲ್ಲದಂತಾಗುತ್ತದೆ. ಎಲೆಬಳ್ಳಿ ಮೇಲೆ ನಿರ್ಭರರಾದ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು. ಆಗ ಡಿಸಿ ನಷ್ಟಕ್ಕೀಡಾದ ರೈತರಿಗೆ ನಿಯಮದಂತೆ ಪರಿಹಾರ ಒದಗಿಸಲಾಗುವುದು. ಯಾವ ರೈತರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಧೆ„ರ್ಯ ತುಂಬಿದರು.

ಮಾಜಿ ಶಾಸಕ ಬಿ.ಪಿ. ಹರೀಶ್‌, ತಾಪಂ ಮಾಜಿ ಸದಸ್ಯ ಎಚ್‌.ಎಚ್‌. ಬಸವರಾಜ್‌ ಬೆಳ್ಳೂಡಿ, ಎಪಿಎಂಸಿ ಅಧ್ಯಕ್ಷ ನರೇಂದ್ರ ಬೆಳ್ಳೂಡಿ, ಗ್ರಾಪಂ ಅಧ್ಯಕ್ಷ ಮರುಳಸಿದ್ದಯ್ಯ, ಸದಸ್ಯ ರಾಜು, ತಹಸೀಲ್ದಾರ್‌ ಕೆ.ಬಿ.ರಾಮಚಂದ್ರಪ್ಪ, ಉಪನ್ಯಾಸಕ ಶಂಭುನಾಥ್‌, ಜಿಪಂ ಎಇಇ ಡೊಂಕಪ್ಪ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next