Advertisement
ಅದೇ ರೀತಿ ಲಾಕ್‌ಡೌನ್ ಅವಧಿ ವೇತನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಇಲಾಖೆಯಲ್ಲಿರುವ ಎಲ್ಲ ಹೊರಗುತ್ತಿಗೆ ಕಾರ್ಮಿಕರಿಗೆ ಬಿಡುಗಡೆ ಮಾಡಬೇಕು. ಹಾಸ್ಟೆಲ್‌ಗಳಲ್ಲಿ ಉಳಿದಿರುವ ಆಹಾರ ಸಾಮಗ್ರಿಗಳು ಹಾಳಾಗುವ ಮುನ್ನ ಹೊರಗುತ್ತಿಗೆ ಕಾರ್ಮಿಕರಿಗೆ ರೇಷನ್ ಕಿಟ್‌ಗಳಾಗಿ ತಕ್ಷಣವೇ ವಿತರಿಸಬೇಕು. ಜತೆಗೆ ಹೊರಗುತ್ತಿಗೆ ಕಾರ್ಮಿಕರು ಮತ್ತು ಅವರ ಕುಟುಂಬದವರು ಕೊರೊನಾ ಕಾಯಿಲೆಯಿಂದ ಬಳಲಿದರೆ ಉಚಿತ ಚಿಕಿತ್ಸೆ ನೀಡಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ವಿಶೇಷ ಜೀವ ವಿಮೆ ಸೌಲಭ್ಯವನ್ನು ವಿಸ್ತರಿಸಬೇಕು. ಜತೆಗೆ ಗುತ್ತಿಗೆದಾರರು ಗುತ್ತಿಗೆ ಅವಧಿ ಮುಗಿಯುವ ಮುನ್ನ ಎಲ್ಲ ಕಾರ್ಮಿಕರಿಗೆ ಇಪಿಎಫ್-ಇಎಸ್‌ಐ ತನ್ನ ಅವಧಿ ಯ ಎಲ್ಲ ಹಣವನ್ನು ಪಾವತಿ ಮಾಡಿರುವ ಕುರಿತು ಖಾತ್ರಿಪಡಿಸಿಕೊಂಡು ಕಾರ್ಮಿಕರಿಗೆ ಅವರ ಖಾತೆಯ ವಿವರಗಳನ್ನು ನೀಡಬೇಕು. ಮುಂದೆ ಬರುವ ಗುತ್ತಿಗೆದಾರರು ಹಿಂದಿನ ಖಾತೆಗಳನ್ನು ಮುಂದುವರಿಸುವಂತೆ ಸೂಚಿಸಬೇಕು ಎಂದು ಎಐಯುಟಿಯುಸಿ ಪದಾಧಿಕಾರಿಗಳಾದ ರಾಘವೇಂದ್ರ ಎಂ.ಜಿ., ಭಾಗಣ್ಣ ಬುಕ್ಕಾ ಆಗ್ರಹಿಸಿದ್ದಾರೆ. Advertisement
ಕ್ವಾರಂಟೈನ್ ಕೇಂದ್ರ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡಿ
05:43 AM May 23, 2020 | Suhan S |
Advertisement
Udayavani is now on Telegram. Click here to join our channel and stay updated with the latest news.