Advertisement

ಸಿದ್ಧಗಂಗಾ ಶ್ರೀಗಳ ಆದರ್ಶ ಮೈಗೂಡಿಸಿಕೊಳ್ಳಿ

08:53 AM Mar 14, 2019 | |

ಎಚ್‌.ಡಿ.ಕೋಟೆ: ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರು ವೀರಶೈವ ಸಮಾಜಕ್ಕೆ ಮಾತ್ರ ಸಿಮೀತವಾಗಿರದೇ ಎಲ್ಲ ವರ್ಗಕ್ಕೂ ಮೀಸಲಾಗಿದ್ದರು, ಸದಾ ಸಮಾಜದ ಒಳಿತನ್ನು ಬಯಸುತ್ತಿದ್ದರು, ಇಂದಿನ ಯುವ ಪೀಳಿಗೆ ಶ್ರೀಗಳ ಆದರ್ಶಗಳನ್ನು ರೂಡಿಸಿ ಕೊಳ್ಳಬೇಕು. ಅನ್ನ, ಸಮಯವನ್ನು ಎಂದಿಗೂ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ತುಮಕೂರು ಶ್ರೀ ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.

Advertisement

ಅಖೀಲ ಭಾರತ ವೀರಶೈವ ಮಹಾಸಭಾದಿಂದ ತಾಲೂಕು ಘಟಕದ ವತಿಯಿಂದ ಸರಗೂರು ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೆ ಮತ್ತು ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಮಾತ ನಾಡಿದರು. ಕಾಯಕ ಯೋಗಿ: ಶ್ರೀಗಳು ಕಾಯಕಯೋಗಿ ಬಸವಣ್ಣನ ಆದರ್ಶಗಳನ್ನು ಬದುಕಿನಲ್ಲಿ ಮೈಗೂಡಿಸಿ ಕೊಂಡು ಬಂದವರು, ಆಚಾರ್ಯಕ್ಕೆ ಎಂದು ಕುಂದು ಬಾರದಂತೆ ನಡೆದುಕೊಂಡವರು. ಕಾಯಕ ಮಾಡಿ ಬದುಕುವುದನ್ನು ಇಡೀ ಸಮಾಜಕ್ಕೆ ಕಲಿಸಿ ಕೊಟ್ಟವರು ಎಂದರು.

ಶ್ರೀಗಳು ಭಾಗಿ: ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ, ಹಂಚೀಪುರ ಮಠದ ಚನ್ನಬಸವಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಬಿಡುಗಲು ಮಠದ ಮಹದೇವಸ್ವಾಮೀಜಿ, ದಂಡೀಕೆರೆ ಮಠದ ಬಸಲಿಂಗಸ್ವಾಮೀಜಿ, ಜಕ್ಕಹಳ್ಳಿ ನಂದೀಶಸ್ವಾಮೀಜಿ, ಕೆಂಡಗಣ್ಣಸ್ವಾಮೀಜಿ, ಬೀಚನಹಳ್ಳಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ನಾಗೇಂದ್ರ ಸ್ವಾಮೀಜಿ, ಪುರ ಮಠದ ಚಂದ್ರಶೇಖರ ಸ್ವಾಮೀಜಿ, ಕುದೇರು ಮಠದ ಇಮ್ಮಡಿ ಗುರುಲಿಂಗಸ್ವಾಮೀಜಿ, ದಡದಹಳ್ಳಿ ಗುರುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸಿದ್ಧಗಂಗೆಯ ಎಂ. ಬಾಲಚಂದ್ರ ಉಪನ್ಯಾಸ ನೀಡಿದರು. ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಗಂಗಾಬಿಕೆ ಮಲ್ಲಿಕಾರ್ಜುನ ಮಾತನಾಡಿದರು.

ಶಾಸಕ ನಿರಂಜನ್‌ಕುಮಾರ್‌, ಅನಿಲ್‌ ಚಿಕ್ಕಮಾದು, ಜಿಪಂ ಅಧ್ಯಕ್ಷೆ ಪರಿಮಳಾ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಸರಗೂರು ಪಪಂ ಅಧ್ಯಕ್ಷೆ ಜ್ಯೋತಿ, ಕೆಪಿಸಿಸಿ ಸದಸ್ಯೆ ಎಸ್‌.ಆರ್‌.ಜಯಮಂಗಳ, ಮೈಮುಲ್‌ ಅಧ್ಯಕ್ಷ ಕೆ.ಜಿ.ಮಹೇಶ್‌, ನಗರ ಪಾಲಿಕೆ ಸದಸ್ಯ ವಿವಿ ಮಂಜುನಾಥ್‌, ಜಿಪಂ ಸದಸ್ಯ ವೆಂಕಟಸ್ವಾಮಿ, ಮೈಮುಲ್‌ ನಿರ್ದೇಶಕಿ ದಾಕ್ಷಾಯಿಣಿ ಬಸವರಾಜಪ್ಪ, ಮಹಾಸಭಾದ ಜಿಲ್ಲಾಧ್ಯಕ್ಷ ಶಿವಮೂರ್ತಿ ಕಾನ್ಯ, ಸರ್ವಮಂಗಳಮ್ಮ, ರೂಪ ಸೇರಿದಂತೆ ವೀರಶೈವ ಸಮಾಜದ ಮುಖಂಡರು ಹಾಜರಿದ್ದರು.

ಕಲಾ ಪ್ರದರ್ಶನ ಕಾರ್ಯಕ್ರಮಕ್ಕೂ ಮುನ್ನ ಲಿಂಗೆ„ಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರ ಶರಣರ ವಚನಗಳು, ಅಲಂಕೃತ ಸ್ತಬ್ಧ ಚಿತ್ರಗಳು, ಭಜನಾ ಮೇಳ, ನಂದಿ ಧ್ವಜ, ಮಹಿಳಾ ಜಾನಪದ ಕಲಾ ವಿದರಿಂದ ವೀರಗಾಸೆ ಕುಣಿತ, ಡೊಳ್ಳು ಕುಣಿತ, ಚಂಡೆಮೇಳ, ಮಂಗಳವಾದ್ಯ ದೊಂದಿಗೆ ವಿವಿಧ ಜಾನಪದ ಕಲಾತಂಡಗಳು ನೋಡುಗರ ಕಣ್ಮನ ಸೆಳೆದವು. ಹಳೇ ಹೆಗ್ಗುಡಿಲು ನೀಲಕಂಠ ತಂಡ ದಿಂದ ವೀರಗಾಸೆ ಕುಣಿತ ನೋಡುಗರನ್ನು ತನ್ನತ್ತ ಸೆಳೆಯಿತು. ಪಟ್ಟಣದ ಕೆಇಬಿ ಕಚೇರಿ ಆವರಣ ದಿಂದ ಮೆರವಣಿಗೆ ಹೊರಟು ಶ್ರೀ ಬಸವೇಶ್ವರ ದೇವಸ್ಥಾನದ ರಸ್ತೆಯ ಮೂಲಕ ಶ್ರೀ ಸಂತೆಮಾ ಸ್ತಮ್ಮನ ದೇವಸ್ಥಾನ ವನ್ನು ತಲುಪಿ ಅಲ್ಲಿಂದ
ವೀರಶೈವ ಬೀದಿಯ ಮುಖಾಂತರ ಜಯಚಾಮ ರಾಜೇಂದ್ರ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಶರಣರ ಅನುಭವ ಮಂಟಪ ತಲುಪಿತು.  

Advertisement
Advertisement

Udayavani is now on Telegram. Click here to join our channel and stay updated with the latest news.

Next