Advertisement

ಮಾಸ್‌ ಸಿಂಗನ ಟ್ರೇಲರ್‌ಗೆ ಜೋರು ತಯಾರು

12:18 PM Jun 11, 2019 | Lakshmi GovindaRaj |

ಚಿರಂಜೀವಿ ಸರ್ಜಾ ಸದ್ಯಕ್ಕೆ ಫ‌ುಲ್‌ ಬಿಜಿ ನಟ. ಒಂದರ ಮೇಲೊಂದು ಸಿನಿಮಾಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತಿರುವ ಚಿರಂಜೀವಿ ಸರ್ಜಾ ಇದೀಗ ತಮ್ಮ ಅಭಿನಯದ “ಸಿಂಗ’ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಸಾರೆ. ಹೌದು, “ಸಿಂಗ’ ಚಿತ್ರ ಈಗ ತೆರೆಗೆ ಬರಲು ತಯಾರು ಮಾಡಿಕೊಳ್ಳುತ್ತಿದೆ.

Advertisement

ಈಗಾಗಲೇ “ಸಿಂಗ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಹಂತದಲ್ಲಿದ್ದು, ಇದೇ ವೇಳೆ ನಿಧಾನವಾಗಿ ಚಿತ್ರದ ಪ್ರಮೋಶನ್ಸ್‌ ಕೆಲಸಗಳಿಗೆ ನಿರ್ಮಾಪಕ ಉದಯ್‌ ಮೆಹ್ತಾ ಅವರು ಚಾಲನೆ ನೀಡಿದ್ದಾರೆ. ಅಂದಹಾಗೆ, ಜೂ. 14ರಂದು “ಸಿಂಗ’ ಚಿತ್ರದ ಮೊದಲ ಥಿಯೇಟ್ರಿಕಲ್‌ ಟ್ರೇಲರ್‌ ಬಿಡುಗಡೆ ಮಾಡಲು ತಯಾರಿ ನಡೆಸಿದೆ.

ಇದೊಂದು ಪಕ್ಕಾ ಲವ್‌ ಮತ್ತು ಆ್ಯಕ್ಷನ್‌ ಅಂಶಗಳನ್ನು ಹೊಂದಿರುವ ಕಥೆಯಾಗಿದ್ದು, ಮನರಂಜನೆಯ ಜೊತೆಗೆ ಎಮೋಷನಲ್‌, ಸೆಂಟಿಮೆಂಟ್‌ ವಿಷಯಗಳು ಈ ಚಿತ್ರದಲ್ಲಿದೆ. “ಸಿಂಗ’ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ರವಿಶಂಕರ್‌, ತಾರಾ, ಶಿವರಾಜ್‌ ಕೆ.ಆರ್‌ ಪೇಟೆ, ಅರುಣಾ ಬಾಲರಾಜ್‌, ರಂಜಿತಾ, ಚಂದ್ರಪ್ರಭ ಸೇರಿದಂತೆ ಇನ್ನಿತರೆ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಚಿರಂಜೀವಿ ಸರ್ಜಾ ಅವರಿಗೆ “ರಾಮ್‌ಲೀಲಾ’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್‌ ಕಿರಣ್‌ ಅವರು ಪುನಃ ಅವರೊಂದಿಗೆ “ಸಿಂಗ’ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿತ್ರಕ್ಕೆ ಕಿರಣ್‌ ಹಂಪಾಪುರ ಛಾಯಾಗ್ರಹಣ ಮಾಡಿದ್ದಾರೆ. ಗಣೇಶ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಧರ್ಮವಿಶ್‌ ಸಂಗೀತವಿದೆ. ಹಾಡುಗಳಿಗೆ ವಿ ನಾಗೇಂದ್ರ ಪ್ರಸಾದ್‌, ಕವಿರಾಜ್‌ ಹಾಗೂ ಚೇತನ್‌ ಅವರ ಸಾಹಿತ್ಯವಿದೆ.

Advertisement

ಕೆ. ರವಿವರ್ಮ, ಪಳನಿರಾಜ್‌ ಚಿತ್ರಕ್ಕೆ ಭರ್ಜರಿ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. “ಯುಕೆಎಂ ಸ್ಟುಡಿಯೋಸ್‌’ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿರುವ ಉದಯ್‌. ಕೆ ಮೆಹ್ತಾ ಅವರು, ಇಷ್ಟರಲ್ಲೇ ಚಿತ್ರವನ್ನು ಬಿಡುಗಡೆ ಮಾಡಲು ಜೋರು ತಯಾರಿ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next