ಮಾದನ ಹಿಪ್ಪರಗಿ: ಬದಲಾದ ಜೀವನ ಶೈಲಿಯಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಎಲ್ಲರೂ ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಬೇಕು ಎಂದು ಗಡಿಗೌಡಗಾಂವನ ಶಾಂತವೀರ ಶಿವಾಚಾರ್ಯರು ನುಡಿದರು.
ಸ್ಥಳೀಯ ಶಿವಲಿಂಗೇಶ್ವರ ಹಾಗೂ ಹಾವೇರಿ ಹುಕ್ಕೇರಿ ಮಠದ ಪೀಠಾಧಿಪತಿಗಳಾಗಿದ್ದ ಲಿಂ| ಶಿವಲಿಂಗ ಸ್ವಾಮಿಗಳ ಜನ್ಮಶತಮಾನೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಶಿಬಿರ ಹಾಗೂ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೂಜೆ, ನಿಷ್ಠೆ, ನಿಯಮಗಳ ಜೊತೆಗೆ ವ್ಯಾಯಾಮ, ಯೋಗಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲರೂ ಆರೋಗ್ಯದಿಂದ ಬಾಳುತ್ತಾರೆ. ದುಶ್ಚಟಗಳಿಂದ ದೂರವಿದ್ದು ಸನ್ನಡತೆಯಿಂದ ಮುನ್ನಡೆಯಿರಿ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ದಿನನಿತ್ಯದ ಕಾಯಕ ಮಾಡಿ. ಅಂದರೆ ಶತಾಯುಷಿ ಆಗುತ್ತಿರಿ ಎಂದು ಆಶೀರ್ವಚನ ನೀಡಿದರು.
ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ಇದ್ದರು. ಕಲಬುರಗಿಯ ಡಾ| ಗಿರೀಶ ರೋಣದ, ಡಾ| ಪಸ್ತಾಪುರೆ, ಡಾ| ಸಂತೋಷ ಸಿಗದೂರ, ಡಾ| ಬಸವಂತರಾಯ ಪಾಟೀಲ, ಡಾ| ಸಂಗಮೇಶ್ವರ ಪಾಟೀಲ, ಡಾ| ಅಂಬರೀಶ ವಡೇದ್, ಡಾ| ಅಭಿಷೇಕ ಕುಲ್ಕರ್ಣಿ, ಡಾ| ವಸಂತ ಕುಲ್ಕರ್ಣಿ 800 ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಿದರು.
ಮಾದನ ಹಿಪ್ಪರಗಿ ಸಮುದಾಯ ಆರೋಗ್ಯ ಕೆಂದ್ರದ ಶ್ರೀನಿವಾಸ, ನಾಗರಾಜ, ಶೋಭಾ, ಮಲ್ಲಮ್ಮ, ಶ್ರವಣಕುಮಾರ, ಜಿಲ್ಲಾ ಆರೋಗ್ಯ ಇಲಾಖೆಯ ಸೋಮಶೇಖರ ಮದನಕರ್, ವಿಜಯಲಕ್ಷ್ಮೀ, ಅನಿಲ್ ಕುಮಾರ ಖಂಡೆ ಇದ್ದರು.