Advertisement
ಭಾರತೀಯರಾದ ನಾವು ಎರಡು ರೀತಿಯಲ್ಲಿ ಕಾಲ ಗಣನೆ ಮಾಡುತ್ತೇವೆ. ಸೂರ್ಯನ ಚಲನೆಯನ್ನು ಅನು ಲಕ್ಷಿಸಿ ಮಾಡುವ ಕಾಲಗಣನೆ ಸೌರಮಾನ ಪದ್ಧತಿ. ಚಂದ್ರನ ಚಲನೆಯನ್ನು ಗುರುತಿಸುವುದು ಚಾಂದ್ರಮಾನ ಪದ್ಧತಿ. ಚಂದ್ರನ ಚಲನೆಯನ್ನು ಚೈತ್ರಾದಿ ಮಾಸಗಳ ಮೂಲಕ ಲೆಕ್ಕಹಾಕುತ್ತೇವೆ. ಸೂರ್ಯನ ಸಂಚಾರವನ್ನು ಮೇಷಾದಿ ರಾಶಿಗಳ ಮೂಲಕ ಗುರುತಿಸುತ್ತೇವೆ.
Related Articles
Advertisement
ಮಕರ ಸಂಕ್ರಾಂತಿ ಸೂರ್ಯನನ್ನು ಪ್ರಧಾನವಾಗಿರಿಸಿ ಆಚರಿಸುವ ಹಬ್ಬ. ಸೂರ್ಯ ಚಂದ್ರರು ಪ್ರತ್ಯಕ್ಷವಾಗಿ ಕಣ್ಣಿಗೆ ಕಾಣುವ ದೇವರುಗಳು. ಸೂರ್ಯ ಚರಾಚರ ಪ್ರಕೃತಿಯಲ್ಲಿ ಚೈತನ್ಯ ತುಂಬುವ ದೇವರು. “ಸೂರ್ಯ ಆತ್ಮಾ ಜಗತಸ್ತಸುತಶ್ಚ’ – ಸೂರ್ಯ ಸ್ಥಾವರ ಜಂಗಮಗಳ ಆತ್ಮ ಹಾಗೂ ಜಗತ್ತಿನ ಕಣ್ಣು. “ಹೃದ್ರೋಗಂ ಮಮ ಸೂರ್ಯ ಹರಿಮಾಣಂ ಚ ನಾಶಯ’ – ಹೃದ್ರೋಗದ ನಿವಾರಣೆಗಾಗಿ ಆಸ್ತಿಕ ಪ್ರಪಂಚ ಸೂರ್ಯನನ್ನು ಪ್ರಾರ್ಥಿಸುತ್ತದೆ. ಸರ್ವ ರೋಗಗಳ ನಿವಾರಣೆಗಾಗಿ ಆಸನಗಳ ರಾಜ ಸೂರ್ಯ ನಮ ಸ್ಕಾರವನ್ನು ಮಾಡುತ್ತೇವೆ. ಲೋಕದ ಬೌದ್ಧಿಕ ವಿಕಾಸ ಕ್ಕಾಗಿ “ಗಾಯತ್ರಿ ಮಂತ್ರ’ವನ್ನು ಪಠಿಸುತ್ತೇವೆ. ಮಗುವಿನ ಶರೀರದಲ್ಲಿ ವಿಟಮಿನ್ ವರ್ಧನೆಗೆ ಎಳೆಬಿಸಿಲು ಬೇಕು.ಹೀಗಾಗಿ ನಿಸರ್ಗದ ದಿವ್ಯ ಆರಾಧನೆಯಲ್ಲಿ ಸೂರ್ಯನಿಗೆ ಮುಖ್ಯವಾದ ಸ್ಥಾನ. ಪ್ರಾಚೀನ ಯಾವ ಮತ-ಸಿದ್ಧಾಂತ ಗಳೂ ಸೂರ್ಯನನ್ನು ಬಿಟ್ಟಿಲ್ಲ. ಉತ್ಕರ್ಷ, ಜ್ಞಾನ, ಸಮೃದ್ಧಿ, ಸಂತೋಷ…ಇವೆಲ್ಲಕ್ಕೂ ಸೂರ್ಯಾನುಗ್ರಹ ಬೇಕೆಂದು ಜಗದಗಲದ ದೇವರು ನಂಬಿದ್ದಾರೆ ಮತ್ತು ನಡೆದುಕೊಳ್ಳುತ್ತಿದ್ದಾರೆ. ಮಕರ ಸಂಕ್ರಾಂತಿಯಂದು ಭಾರತದ ಎಲ್ಲೆಡೆ ಸುಗ್ಗಿಯ ಹಿಗ್ಗು ಆವರಿಸುತ್ತದೆ. ಭಾರತದ ಉದ್ದಗಲಕ್ಕೂ ಮಕರ ಸಂಕ್ರಾಂತಿಯನ್ನು ವೈವಿಧ್ಯಮಯವಾಗಿ ಆಚರಿಸುತ್ತಾರೆ. ಭಾರತದಲ್ಲಿ ಮಕರ ಸಂಕ್ರಾಂತಿಯನ್ನು ವೈವಿಧ್ಯಮಯ ವಾಗಿ ಆಚರಿಸುವ ಪರಂಪರೆಯೇ ಇದೆ.ಪ್ರಕೃತಿಯಲ್ಲಿ ಹಾಗೂ ಸೌರಮಂಡಲದಲ್ಲಾಗುವ ಬದಲಾವಣೆ ಮಾನವ ಬದುಕನ್ನು ಪರಿವರ್ತಿಸುತ್ತದೆ. ಈ ಸಂದರ್ಭ ವಿಶೇಷವಾಗಿ ಎಳ್ಳು-ಬೆಲ್ಲ ಹಂಚಿ ತಿನ್ನುತ್ತಾರೆ. ಸಿಹಿಯಾದ ಒಳ್ಳೆಯ ಮಾತನ್ನಾಡಬೇಕು ಎಂಬು ದರ ಸಂಕೇತ ಬೆಲ್ಲವಾದರೆ ಸ್ನೇಹಪೂರ್ಣವಾಗಿ ಬದು ಕುವ ಸಂದೇಶವನ್ನು ಎಳ್ಳುನೀಡುತ್ತದೆ. ಸಿಹಿ ಹಾಗೂ ಸ್ನೇಹಮಯ ಬದುಕಾಗಲಿ ಎಂಬ ಹಾರೈಕೆ ಇದೆ. ಎಳ್ಳು-ಬೆಲ್ಲ ಸೇವನೆ, ತೈಲಾಭ್ಯಂಜನ, ದಾನಾದಿಗಳನ್ನು ನಡೆಸುತ್ತಾರೆ. ಇದೊಂದು ಪುರಾಣೋಕ್ತ ಕಥೆಯಾದರೂ ಸ್ಮರಣೀಯ ಅಂಶಗಳಿವೆ. ಉತ್ತಮ ನಡೆನುಡಿಯೇ ಬದುಕನ್ನು ಸುಖಮಯವಾಗಿಸುತ್ತದೆ. ಮಾಧವತ್ವಕ್ಕೆ ಏರುವುದಕ್ಕೆ ಬದುಕನ್ನು ಸಂಸ್ಕರಿಸಿಕೊಳ್ಳಬೇಕು. ಸಮಸ್ಯೆ ಗಳನ್ನು ಮೆಟ್ಟಿನಿಂತು ಬದುಕನ್ನು ಕಟ್ಟಿಕೊಳ್ಳಬೇಕು ಇತ್ಯಾದಿ ಸಂದೇಶಗಳಿವೆ. ಸಂಕ್ರಾಂತಿಯ ಶುಭಗಳಿಗೆ ನಮ್ಮೆಲ್ಲರ ಜೀವನದಲ್ಲಿ ಬದಲಾವಣೆಯನ್ನು ತರಲಿ, ಸಮ್ಯಕ್ ಕ್ರಾಂತಿಯನ್ನುಂಟು ಮಾಡಲಿ ಎಂದು ಆಶಿಸೋಣ. ಡಾ|ಸೋಂದಾ ಭಾಸ್ಕರ ಭಟ್