Advertisement
ಈ ಕುರಿತು ಮಾಹಿತಿ ನೀಡಿದ ಅವರು, ಪಪ್ಪೆಟ್ ಹಾಗೂ ಅಭಿನಯ ಮಾದರಿಯಲ್ಲಿ ನಡೆಯುವ ಈ ನಾಟಕ ಮಕ್ಕಳನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುವುದಲ್ಲದೆ ಸಿನಿಮಾದ ಅನುಭವವನ್ನು ಕೊಡುತ್ತದೆ. 20 ಮಂದಿ ಅಭಿನಯಿಸುವ ಈ ನಾಟಕ ಮಕ್ಕಳ ಮನೋವಿಕಾಸ ಹಾಗೂ ಅವರ ಆಲೋಚನಾ ಕ್ರಮಗಳನ್ನು ವಿಸ್ತರಿಸುತ್ತದೆ. ಒಂದು ಗಂಟೆ 20 ನಿಮಿಷ ಅವಧಿಯ ಈ ನಾಟಕಲ್ಲಿ ಮಕ್ಕಳಿಗೆ ಕಚಗುಳಿ ಇಡುವ ಅನೇಕ ದೃಶ್ಯಗಳಿವೆ. ಈ ನಾಟಕ ಮಿಸ್ ಮಾಡಿಕೊಂಡರೆ ಏನನ್ನೋ ಕಳೆದುಕೊಂಡಂತಾಗುತ್ತದೆ. ಎಂದರು.
Related Articles
Advertisement
ಪ್ರಕೃತಿಯ ಇತರ ಜೀವಿಗಳ ಸಹಜ ಬದುಕಿನ ಮೇಲೆ ಮನುಷ್ಯನ ಹಸ್ತಕ್ಷೇಪ ಎಂಥದ್ದು ಮತ್ತು ಅದಕ್ಕೆ ಪ್ರಕೃತಿ ಕೊಡುವ ತಿರುಗೇಟು ಏನು ಎಂಬುದು ಈ ನಾಟಕದಲ್ಲಿ ಅಡಕವಾಗಿದೆ. ಆಧುನಿಕ ಬದುಕಿನ ಕ್ರೌರ್ಯ ಬಿಂಬಿತ: ಪಶ್ಚಿಮಘಟ್ಟಗಳ ಮೇಲಾಗುವ ಮನುಷ್ಯನ ಯಂತ್ರದಾಳಿಗೆ ಹೆದರಿ ಹಕ್ಕಿಗಳು ಕಾಡನ್ನು ತೊರೆಯುತ್ತವೆ. ಅಲ್ಲಿಂದ ಶುರುವಾಗುವ ಆ ಜೀವಿಗಳ ಬದುಕು ದಾರುಣವಾಗುತ್ತಾ ಬರುವ ಚಿತ್ರಣ ಈ ನಾಟಕದಲ್ಲಿದೆ.
ಕಾರ್ಖಾನೆಯ ವಿಷದ ಹೊಗೆ, ಡೈನಾಮೈಟ್‌ಗಳ ಸ್ಫೋಟ, ಮುಳುಗಡೆಯ ಪ್ರದೇಶಗಳಿಂದಾಗುವ ಅವಾಂತರ ಹೀಗೆ ಒಂದಾದ ಮೇಲೊಂದು ಅವಘಡಗಳಿಗೆ ಸಿಲುಕಿ ಹಕ್ಕಿಗಳು ಸಾಯುತ್ತವೆ. ಕೊನೆಯಲ್ಲಿ ಮರಗಳ ಕೇಡಿಗೆ ಹೆದರಿ ಮೊಬೈಲ್ ಟವರ್‌ಗಳ ಮೇಲೆ ಗೂಡು ಕಟ್ಟುವ ಸ್ಥಿತಿ, ಮನುಷ್ಯನ ಆಧುನಿಕ ಬದುಕಿನ ಕ್ರೌರ್ಯವನ್ನು ವ್ಯಂಗ್ಯವಾಗಿ ತೋರಿಸುತ್ತದೆ. ಅಲ್ಲಿಗೂ ಬರುವ ಮನುಷ್ಯನ ಸ್ವಾರ್ಥ ಬುದ್ದಿಗೆ ಪ್ರಕೃತಿ ತನ್ನದೇ ರೀತಿಯಲ್ಲಿ ಉತ್ತರಿಸಿ ಬಿಡುತ್ತದೆ. ಇಂತಹ ಸನ್ನಿವೇಶಗಳು ನಾಟಕದಲ್ಲಿ ಚಿತ್ರಿತವಾಗಿದೆ ಎಂದರು.