Advertisement

ಮುಜುಂಗಾವು ವಿದ್ಯಾಪೀಠದಲ್ಲಿ ಸ್ವಾಸ್ತ್ಯ ಮಂಗಲ

03:45 AM Jul 07, 2017 | Harsha Rao |

ಕುಂಬಳೆ: ಶ್ರೀ ರಾಮಚಂದ್ರಾಪುರ ಮಠ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನಿರ್ದೇ
ಶಾನುಸಾರ ಕುಂಬಳೆ ವಲಯ ಮಾತೃ ವಿಭಾಗ ವಲಯದವರಿಗಾಗಿ ಆಯೋಜಿಸಿದ ಸ್ವಾಸ್ತ್ಯ ಮಂಗಲ ಕಾರ್ಯಕ್ರಮವು ಮುಜುಂಗಾವು ವಿದ್ಯಾಪೀಠದಲ್ಲಿ ನೆರವೇರಿತು.

Advertisement

ಶಂಖನಾದದೊಂದಿಗೆ ಪ್ರಾರಂಭವಾಗಿ ವಲಯದ ಉಪಾಧ್ಯಕ್ಷೆ ಪದ್ಮಾವತಿ ಡಿ.ಪಿ.ಭಟ್‌ ದೀಪಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ವಲಯಾಧ್ಯಕ್ಷರಾದ ಬಾಲಕೃಷ್ಣ ಶರ್ಮ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಯುರ್ವೇದ ತಜ್ಞೆ, ಡಾ|ಶೋಭಾಕೃಷ್ಣ ರಾಜ ಕಾಟಿಪ್ಪಳ್ಳ ಆಹ್ವಾನಿತರಾಗಿ ಆಗಮಿಸಿದ್ದರು.
ಆಹಾರದಲ್ಲಿ ಮುಖ್ಯ ಪಾತ್ರವಹಿಸುವ ಅಡುಗೆ ತಯಾರಿ, ಅದಕ್ಕೆ ಬಳಸುವ ಪಾತ್ರೆಗಳ ಗಮನ, ಸಾವಯವ ತರಕಾರಿಗಳ ಬಗ್ಗೆ, ಅಡುಗೆ ಮನೆ, ಆಹಾರ ಸೇವಿಸುವ ಕ್ರಮ, ಇವುಗಳನ್ನೆಲ್ಲ ವಿವರವಾಗಿ ತಿಳಿಸುವುದರೊಂದಿಗೆ ಶ್ರೋತೃಗಳ ಸಂಶಯ, ಸಂದೇಹಗಳಿಗೂ ಉತ್ತರಿಸಿದರು.

ಶಿಕ್ಷಣ ತಜ್ಞರೂ ಪ್ರಖ್ಯಾತ ಸಾಹಿತಿಗಳೂ ಆದ ವಿ.ಬಿ.ಕುಳಮರ್ವ ಅವರು ತಮ್ಮ ಉತ್ತಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಲಯ ಮಾತೃ ಪ್ರಧಾನೆ ಶಿವಕುಮಾರಿ ಕುಂಚಿನಡ್ಕ, ವಲಯದ ಕಾರ್ಯದರ್ಶಿಗಳಾದ  ಸೇಡಿ ಗುಮ್ಮೆ ಗೋಪಾಲಕೃಷ್ಣ ಭಟ್‌, ವಿದ್ಯಾಪೀಠದ ಆಡಳಿತಾ ಧಿಕಾರಿ ಶ್ಯಾಂಭಟ್‌ ದಭೆìಮಾರ್ಗ ಉಪಸ್ಥಿತರಿದ್ದರು.

ಡಾ| ಶೋಭಾ ಕಾಟಿಪ್ಪಳ್ಳ ಅವರಿಗೆ ಸಾವಿತ್ರಿ ದೊಡ್ಡ ಮಾಣಿ ಹಾಗೂ ವಿಜಯಾ ಸುಬ್ರಹ್ಮಣ್ಯ ಸ್ಮರಣಿಕೆಯಿತ್ತು ಗೌರವಿಸಿದರು. ಪಾರ್ವತಿ ಪೆರಡಾನ ಸ್ವಾಗತಿಸಿದರು. ದೀಪಾ ದೊಡ್ಡಮಾಣಿ ಕಾರ್ಯಕ್ರಮ ನಿರೂಪಿಸಿದರು. ರೂಪಶ್ರೀ ಕೋಡಿಮೂಲೆ ವಂದಿಸಿದರು. ಮಾತೆಯರಿಂದ ಕುಂಕುಮಾರ್ಚನೆ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next