Advertisement

ಜಮ್ಮು-ಕಾಶ್ಮೀರ: ಸೇತುವೆ ಸ್ಫೋಟಗೊಳಿಸುವ ಉಗ್ರರ ಸಂಚು ವಿಫಲ, ತಪ್ಪಿದ ಭಾರೀ ಅನಾಹುತ

08:29 AM Aug 17, 2020 | Nagendra Trasi |

ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆ ಸಮೀಪದ ಟುಜಾನ್ ಗ್ರಾಮದಲ್ಲಿ ಭದ್ರತಾ ಪಡೆ ಐಇಡಿಯನ್ನು(ಸುಧಾರಿತ ಸ್ಫೋಟಕ ಸಾಧನ) ಪತ್ತೆ ಹಚ್ಚುವ ಮೂಲಕ ಭಾರೀ ಅನಾಹುತವನ್ನು ತಪ್ಪಿಸಿದಂತಾಗಿದೆ ಎಂದು ವರದಿ ತಿಳಿಸಿದೆ.

Advertisement

ಐಜಿಪಿ ಕಾಶ್ಮೀರ್ ವಿಜಯ್ ಕುಮಾರ್ ನೀಡಿರುವ ಮಾಹಿತಿ ಪ್ರಕಾರ, ಟುಜಾನ್ ಗ್ರಾಮದ ಸೇತುವೆಯನ್ನು ಸ್ಫೋಟಿಸಲು ಸಂಚು ಹೂಡಿ ಉಗ್ರರು ಐಇಡಿಯನ್ನು ಅಡಗಿಸಿಟ್ಟಿದ್ದರು. ಈ ಸೇತುವೆ ಟುಜಾನ್ ಮತ್ತು ದಾಲ್ವಾನ್ ಅನ್ನು ಸಂಪರ್ಕಿಸುತ್ತದೆ ಎಂದು ತಿಳಿಸಿದ್ದಾರೆ.

ಭದ್ರತಾಪಡೆಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿಸಿದಂತಾಗಿದೆ. ಪುಲ್ವಾಮಾ ಜಿಲ್ಲೆಯ ಬಡ್ಗಾಮ್ ಅನ್ನು ಸಂಪರ್ಕಿಸುವ ಈ ರಸ್ತೆಯನ್ನು ಭದ್ರತಾ ಪಡೆಗಳು ಒಂದು ಪ್ರದೇಶದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಉಪಯೋಗಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಉಗ್ರರು ಸೇತುವೆ ಕೆಳಭಾಗದಲ್ಲಿ ಐಇಡಿಯನ್ನು ಅಡಗಿಸಿಟ್ಟು ಸ್ಫೋಟಿಸುವ ಸಂಚು ರೂಪಿಸಿದ್ದು, ಇದನ್ನು ಭದ್ರತಾಪಡೆ ವಿಫಲಗೊಳಿಸಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next