Advertisement

ಮೇಜರ್‌ ಸುಮನ್‌ಗೆ ಯುಎನ್‌ ಪ್ರಶಸ್ತಿ

02:42 AM May 29, 2020 | Hari Prasad |

ಹೊಸದಿಲ್ಲಿ: ವಿಶ್ವ ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಪ್ರತಿಷ್ಠಿತ ಯುನೈಟೆಡ್‌ ನೇಷನ್ಸ್‌ ಮಿಲಿಟರಿ ಜೆಂಡರ್‌ ಅಡ್ವೊಕೇಟ್‌ ಆಫ್‌ ದ ಇಯರ್‌ ಪ್ರಶಸ್ತಿಯನ್ನು ಇಬ್ಬರು ಮಹಿಳೆಯರಿಗೆ ನೀಡಲಾಗಿದೆ.

Advertisement

ವಿಶೇಷವೇನೆಂದರೆ ಭಾರತ ಸೇನೆಯ ಅಧಿಕಾರಿ ಮೇಜರ್‌ ಸುಮನ್‌ ಗವಾನಿ ಹಾಗೂ ಬ್ರೆಜಿಲ್‌ನ ವಾಯುಪಡೆ ಕಮಾಂಡರ್‌ ಕಾರ್ಲ ಮೊಂಟೈರೊ ಡೆ ಕಾಸ್ಟ್ರೋ ಅರೌಜೊ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಹಿಂದೆ ದಕ್ಷಿಣ ಸುಡಾನ್‌ನಲ್ಲಿನ ಯುಎನ್‌ ಮಿಷನ್‌ನಲ್ಲಿ ಭಾಗಿಯಾಗಿದ್ದ ಮೇಜರ್‌ ಸುಮನ್‌, ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ಭಾರತದ ಪ್ರಥಮ ಶಾಂತಿ ಪಾಲಕರಾಗಿದ್ದಾರೆ.

ವಿಶ್ವ‌ಸಂಸ್ಥೆಯ ಶಾಂತಿಪಾಲಕರ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಮೇ 29ರಂದು ನಡೆಯಲಿರುವ ಆನ್‌ಲೈನ್‌ ಸಮಾರಂಭದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್‌ರಿಂದ ಈ ಸಾಧಕಿಯರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಹಾಗೇ ಈ ಇಬ್ಬರು ಶಾಂತಿಪಾಲಕರನ್ನು ‘ಅತ್ಯಂತ ಪ್ರಭಾವಿ ಆದರ್ಶ ವ್ಯಕ್ತಿಗಳು’ ಎಂದು ವಿಶ್ವಸಂಸ್ಥೆ ಬಣ್ಣಿಸಿದೆ.

Advertisement

ಭಾರತ ಮೂಲದ ವಿಜ್ಞಾನಿಗೆ ಪ್ರಶಸ್ತಿ
ನ್ಯೂಯಾರ್ಕ್‌:
ಭಾರತೀಯ ಮೂಲದ ಅಮೆರಿಕ ವಿಜ್ಞಾನಿ ಡಾ.ರಾಜೀವ್‌ ಜೋಶಿ ಅವರು ಪ್ರತಿಷ್ಠಿತ ‘ವರ್ಷದ ಸಂಶೋಧಕ’ (ಇನ್ವೆಂಟರ್‌ ಆಫ್ ದಿ ಇಯರ್‌) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಲೆಕ್ಟ್ರಾನಿಕ್‌ ಉದ್ಯಮವನ್ನು ಮುನ್ನಡೆಸುವಲ್ಲಿ ಮತ್ತು ಕೃತಕ ಬುದ್ಧಿಮತ್ತೆಯ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಅವರು ತೋರಿದ ಸಾಧನೆಗಾಗಿ ಈ ಪ್ರಶಸ್ತಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next