Advertisement

FRCVS: 1.45 ಲಕ್ಷ ಕೋಟಿ ರೂ. ಮೌಲ್ಯದ ಯುದ್ದೋಪಕರಣ ಖರೀದಿಗೆ ಒಪ್ಪಿಗೆ

11:43 PM Sep 03, 2024 | Team Udayavani |

ಹೊಸದಿಲ್ಲಿ: ಟ್ಯಾಂಕ್‌ಗಳು, ರೇಡಾರ್‌ ಮತ್ತು ವಿಮಾನಗಳು ಸೇರಿ ಒಟ್ಟು 1.45 ಕೋಟಿ ರೂ. ಮೌಲ್ಯದ ಯುದ್ದೋಪಕರಣಗಳ ಖರೀದಿ ಪ್ರಸ್ತಾವಕ್ಕೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ರಕ್ಷಣ ಸ್ವಾಧೀನ ಸಮಿತಿ ಮಂಗಳವಾರ ಒಪ್ಪಿಗೆ ನೀಡಿದೆ.

Advertisement

ಟ್ಯಾಂಕ್‌ಗಳ ಆಧುನೀಕರಣಕ್ಕಾಗಿ ಸೇನೆಗೆ ಫ್ಯೂಚರ್‌ ರೆಡಿ ಕಾಂಬಾಟ್‌ ವೆಹಿಕಲ್ಸ್‌(ಎಫ್ಆರ್‌ಸಿವಿಎಸ್‌) ಖರೀದಿಗೆ ಅನುಮತಿ ನೀಡಲಾಗಿದೆ. ಅದೇ ರೀತಿ, ಏರ್‌ ಡಿಫೆನ್ಸ್‌ ಫೈರ್‌ ಕಂಟ್ರೋಲ್‌ ರೇಡಾರ್‌, ಡೋರ್ನಿಯರ್‌-228 ವಿಮಾನಗಳು, ಮುಂದಿನ ಪೀಳಿಗೆಯ ವೇಗದ ಗಸ್ತು ಹಡಗುಗಳು ಸೇರಿದಂತೆ ಇನ್ನಿತರ ಯುದೊœàಪಕರಣಗಳ ಖರೀದಿಗೆ ಸಮ್ಮತಿಸಲಾಗಿದೆ. ಭಾರತೀಯ ಕರಾವಳಿ ಕಾವಲು ಪಡೆ(ಐಸಿಜಿ)ಯನ್ನು ಆಧುನೀಕರಣಗೊಳಿಸುವ 3 ಪ್ರಸ್ತಾವಕ್ಕೂ ಸಮಿತಿಯು ಅನುಮೋದನೆ ನೀಡಿದೆ.

ಒಟ್ಟು ಖರೀದಿಯ ಮೌಲ್ಯ 1,44,716 ಕೋಟಿ ರೂ. ಆಗಲಿದೆ. ಈ ಪೈಕಿ, ಬೈ ಆ್ಯಂಡ್‌ ಬೈ ವರ್ಗದಲ್ಲಿ ಶೇ.99ರಷ್ಟು ಖರೀದಿಯನ್ನು ಸ್ವದೇಶಿ ಮೂಲದ ಕಂಪೆನಿಗಳ ಮೂಲಕವೇ ಖರೀದಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.