Advertisement

ಪ್ರಮುಖ ಸೌದಿ ಪೈಪ್‌ ಲೈನ್‌ ಮೇಲೆ ಡ್ರೋನ್‌ ದಾಳಿ; ಹುತಿ ಬಂಡುಕೋರರ ಕೃತ್ಯ ?

09:55 AM May 15, 2019 | Team Udayavani |

ರಿಯಾಧ್‌ : ಸೌದಿ ಅರೇಬಿಯದ ಪ್ರಮುಖ ತೈಲ ಕೊಳವೆ ಲೈನಿನ ಎರಡು ಪಂಪಿಂಗ್‌ ಸ್ಟೇಶನ್‌ ಮೇಲೆ ಇಂದು ಮಂಗಳವಾರ ಡ್ರೋನ್‌ ಗಳು ದಾಳಿ ಮಾಡಿದ್ದು ಇದರೊಂದಿಗೆ ಹರಿದು ಬರುತ್ತಿದ್ದು ಕಚ್ಚಾ ತೈಲ ನಿಂತು ಹೋಗಿದೆ ಎಂದು ಸೌದಿ ಇಂಧನ ಸಚಿವ ಖಾಲಿದ್‌ ಅಲ್‌ ಫಾಲಿಹ್‌ ತಿಳಿಸಿದ್ದಾರೆ.

Advertisement

ತೈಲ ಸಮೃದ್ಧ ಪೂರ್ವ ಪ್ರಾಂತ್ಯದಿಂದ ಕೆಂಪು ಸಮುದ್ರ ತಲುಪುವ ಪೈಪ್‌ಲೈನ್‌ ಮೇಲೆ ಇಂದು ಮಂಗಳವಾರ ನಸುಕಿನ ವೇಳೆ ಡ್ರೋನ್‌ ದಾಳಿ ನಡೆಯಿತು ಎಂದವರು ಹೇಳಿದ್ದಾರೆ.

ಯೆಮೆನ್‌ನ ಹುತಿ ಬಂಡುಕೋರರು ತಾವು ಸೌದಿ ಅರೇಬಿಯದ ಪ್ರಮುಖ ಗುರಿಗಳ ಮೇಲೆ ಡ್ರೋನ್‌ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next