Advertisement

ಜೆಇಇ, ನೀಟ್‌ಗೆ ವಿಶಿಷ್ಟ ಪ್ರಶ್ನೆ ಪತ್ರಿಕೆ?

06:00 AM Jul 19, 2018 | Team Udayavani |

ನವದೆಹಲಿ: ಜೆಇಇ, ನೀಟ್‌ ಹಾಗೂ ನೆಟ್‌ ಪರೀಕ್ಷೆ ನಡೆಸಲಿರುವ ರಾಷ್ಟ್ರೀಯ ಪರೀಕ್ಷಾ ಆಯೋಗವು ವಿದ್ಯಾರ್ಥಿಗಳಿಗೆ ವಿಶಿಷ್ಟ ರೀತಿಯಲ್ಲಿ ಪ್ರಶ್ನೆಗಳನ್ನು ಒದಗಿಸಲಿದೆ. ಈ ಬಗ್ಗೆ “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ. ಪರೀಕ್ಷೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಪ್ರಶ್ನೆಗಳು ಯಾದೃಚ್ಛಿಕ ವಾಗಿ ಆಯ್ಕೆಯಾಗಲಿದೆ. ಇದಕ್ಕಾಗಿ ಆರ್ಟಿಫಿಷಿಯಲ್‌ ಇಂಟಲಿ ಜೆನ್ಸ್‌, ಸೈಕೋಮೆಟ್ರಿಕ್‌ ಅನಾಲಿಸಿಸ್‌ ಹಾಗೂ ಕಂಪ್ಯೂಟರ್‌ ಆಧರಿತ ಅಡಾಪ್ಟಿವ್‌ ಟೆಸ್ಟಿಂಗ್‌ ಅನ್ನು ಅಳವಡಿಸಲಿದೆ. ಇದರ ಅಡಿಯಲ್ಲಿ ಆರಂಭದಲ್ಲಿ ಸರಳ ಪ್ರಶ್ನೆಗಳನ್ನು ಕೇಳಲಾಗುತ್ತದೆ ಮತ್ತು ಹಂತಹಂತವಾಗಿ ಪ್ರಶ್ನೆಗಳು ಕಠಿಣವಾಗುತ್ತವೆ.

Advertisement

ಅತ್ಯಧಿಕ ಗುಣಮಟ್ಟದ ಎನ್‌ಕ್ರಿಪ್ಷನ್‌ ಬಳಸಲಾಗುತ್ತಿದ್ದು, ಯಾರೂ ಇದನ್ನು ಹ್ಯಾಕ್‌ ಮಾಡಲು ಸಾಧ್ಯವಾಗುವುದಿಲ್ಲ. ಕಂಠಪಾಠ ಹಾಗೂ ವಿಪರೀತ ಕೋಚಿಂಗ್‌ನಿಂದ ಈ ವಿಧಾನದ ಪರೀಕ್ಷೆಯಲ್ಲಿ ನೆರವಾಗದು. ಇದೇ ರೀತಿಯಲ್ಲೇ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಾವಿರಾರು ಪ್ರಶ್ನೆಗಳನ್ನು ಸಿದ್ಧಪಡಿಸ ಲಾಗಿರುತ್ತದೆ. ಯಾದೃಚ್ಛಿಕವಾಗಿ ಪ್ರಶ್ನೆಗಳು ಕಾಣಿಸಿ ಕೊಳ್ಳುತ್ತವೆ. ಇವುಗಳಿಗೆ ಅಭ್ಯರ್ಥಿ ಉತ್ತರಿಸಬೇಕಿರುತ್ತದೆ. ಒಂದು ವೇಳೆ ಫ‌ಲಿತಾಂಶ ಸಂತೃಪ್ತಿಕರವಾಗಿ ಬರದಿದ್ದರೆ, ಮೂರು ತಿಂಗಳ ನಂತರ ಪುನಃ ಇದೇ ಪರೀಕ್ಷೆಯನ್ನು ಬರೆಯಬಹುದು. ಸದ್ಯ ಕಳೆದ ವರ್ಷದ ಪರೀಕ್ಷೆಯ ಸೈಕೋಮೆಟ್ರಿಕ್‌ ವಿಶ್ಲೇಷಣೆಯನ್ನು ಎನ್‌ಟಿಎ ನಡೆಸುತ್ತಿದೆ. ಬಹು ಆಯ್ಕೆ ಪ್ರಶ್ನೆಗಳು ಹೇಗೆ ಪರಿಣಾಮ ಬೀರುತ್ತವೆ ಮತ್ತು ಯಾವ ಪ್ರಮಾಣದಲ್ಲಿ ಕಠಿಣ ಇರುವ ಪ್ರಶ್ನೆಗಳನ್ನು ಕೇಳಲಾಗಿದೆ ಎಂಬ ಅಂಶವನ್ನು ಈ ಪ್ರಶ್ನೆಪತ್ರಿಕೆಯಿಂದ ಅಧ್ಯಯನ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next