Advertisement

ಸರಕಾರದಿಂದ ದೊಡ್ಡ ಮಟ್ಟದ ಆರ್ಥಿಕ ಸುಧಾರಣೆ: ಪ್ರಧಾನಿ ಮೋದಿ

12:59 PM Feb 04, 2018 | |

ಗುವಾಹಾಟಿ: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ದೊಡ್ಡ ಪ್ರಮಾಣದ ಆರ್ಥಿಕ ಸುಧಾರಣ ಕ್ರಮಗಳನ್ನು ಕೈಗೊಂಡಿದೆ. ಈ ಮೂಲಕ ವಿಶ್ವದಲ್ಲಿ ಬಂಡವಾಳ ಹೂಡಿಕೆ ಮಾಡುವ ರಾಷ್ಟ್ರಗಳಿಗೆ ಭಾರತ ಅತ್ಯಂತ ಪ್ರಶಸ್ತ ತಾಣ ಎಂಬ ಭಾವನೆ ಬರುವಂತೆ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

Advertisement

“ಮೂರೂವರೆ ವರ್ಷಗಳ ಅವಧಿಯಲ್ಲಿ ಸರಕಾರ ಹಲವು ರೀತಿಯ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿದೆ. 2016-17ನೇ ಸಾಲಿನಲ್ಲಿ 3.84 ಲಕ್ಷ ಕೋಟಿ ರೂ. (60 ಅಮೆರಿಕನ್‌ ಬಿಲಿಯನ್‌ ಡಾಲರ್‌)ಗಳಷ್ಟು  ವಿದೇಶಿ ನೇರ ಬಂಡವಾಳ ಹರಿದು ಬಂದಿದೆ’ ಎಂದರು. ಗುವಾ ಹಾಟಿಯಲ್ಲಿ ಅಸ್ಸಾಂ ಸರಕಾರ ಆಯೋಜಿಸಿರುವ 2 ದಿನಗಳ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಮೋದಿ ಮಾತನಾಡಿದರು. “ಎನ್‌ಡಿಎ ಸರಕಾರ ಸರಕಾರಿ ವ್ಯವಸ್ಥೆ ಅತ್ಯಂತ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುವಂತೆ ಬದಲಾವಣೆ ತಂದಿದೆ. ನಾವು ಜಾರಿ ಮಾಡಿರುವ ಯೋಜನೆಗಳು ನಿಗದಿತ ಗುರಿಗಿಂತ ಮೊದಲೇ ಪೂರ್ಣವಾಗಬೇಕು. ಈಶಾನ್ಯ ರಾಜ್ಯಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಭಾರತ ಸರಿಯಾದ ರೀತಿಯಲ್ಲಿ ಅಭಿವೃದ್ಧಿಯ ವೇಗ ಪಡೆಯಲಿದೆ’ ಎಂದರು. “ಕೇಂದ್ರ ಸರಕಾರ ಪೂರ್ವದತ್ತ ನೋಟ ನೀತಿಯನ್ನು ಜಾರಿಗೆ ತಂದಿದೆ. ಈಶಾನ್ಯ ರಾಜ್ಯಗಳೇ ಅದರ ಕೇಂದ್ರ ಬಿಂದು. ಪೂರ್ವದಲ್ಲಿನ ರಾಷ್ಟ್ರಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿನ ಜನರ ನಡುವೆ ಸಂಬಂಧ, ವ್ಯಾಪಾರ ವಹಿವಾಟು ವೃದ್ಧಿ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು’ ಎಂದಿದ್ದಾರೆ ಪ್ರಧಾನಿ. 

ಐದು ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆಗಳು ಅಸ್ಸಾಂನಲ್ಲಿ 15 ಸಾವಿರ ಕಿ.ಮೀ. ಪೈಪ್‌ಲೈನ್‌ ಅಳವಡಿಸಲಿದ್ದು, ಈಶಾನ್ಯ ರಾಜ್ಯಗಳಿಗೆ ಅನಿಲ ಪೂರೈಕೆಗೆ ಇದು ನೆರವಾಗಲಿದೆ. ಅದಕ್ಕೆ 6 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.

ಧರ್ಮೇಂದ್ರ ಪ್ರಧಾನ್‌,  ಕೇಂದ್ರ ಪೆಟ್ರೋಲಿಯಂ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next