ಹೊಸದಿಲ್ಲಿ : ಅತ್ಯಂತ ಮಹತ್ವದ ಸೀಮೋಲ್ಲಂಘನದಲ್ಲಿ ಉತ್ತರ ಪ್ರದೇಶದ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್) ಇಂದು ಗುರುವಾರ ಐಸಿಸ್ ಸಂಘಟನೆಯೊಂದಿಗೆ ನಂಟು ಹೊಂದಿರುವರೆನ್ನಲಾದ ಕನಿಷ್ಠ ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ.
ಆರಂಭಿಕ ವರದಿಗಳಿಂದ ತಿಳಿದು ಬಂದಿರುವ ಪ್ರಕಾರ ಈ ಶಂಕಿತ ಉಗ್ರರು ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಐಸಿಸ್ ಉಗ್ರ ಸಂಘಟನೆಗೆ ನೇಮಕಾತಿ ಮಾಡುವುದರಲ್ಲಿ ತೊಡಗಿಕೊಂಡಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಶಂಕಿತ ಉಗ್ರರನ್ನು ಐದು ರಾಜ್ಯಗಳ ಪೊಲೀಸ್ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಯಿತೆಂದು ತಿಳಿದು ಬಂದಿದೆ.
ಉತ್ತರ ಪ್ರದೇಶ ಎಸ್‌ಟಿಎಫ್ ಸಿಬಂದಿಗಳು ಈ ಮೂವರು ಐಸಿಸ್ ಉಗ್ರ ಶಂಕಿತರನ್ನು ಜಾಲಂಧರ್, ಮುಂಬಯಿ ಮತ್ತು ಬಿಜನೋರ್‌ನಲ್ಲಿ ಬಂಧಿಸಿದರೆಂದು ಮೂಲಗಳು ತಿಳಿಸಿವೆ.
Related Articles
ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಆರು ಮಂದಿಯನ್ನು ಬಂಧಿಸಲಾಗಿರುವುದಾಗಿ ತಿಳಿದು ಬಂದಿದೆ.