Advertisement

ಕಮಲ್ ಹಾಸನ್ ಅಭಿನಯದ ಇಂಡಿಯನ್-2 ಚಿತ್ರೀಕರಣ ಸೆಟ್ ಮೇಲೆ ಬಿದ್ದ ಕ್ರೇನ್: ಮೂವರ ಸಾವು

09:53 AM Feb 21, 2020 | Mithun PG |

ಚೆನ್ನೈ: ಕಮಲ್ ಹಾಸನ್ ಅಭಿನಯದ ಇಂಡಿಯನ್ -2 ಚಿತ್ರದ ಸೆಟ್‌ಗಳ ಮೇಲೆ ಕ್ರೇನ್ ಬಿದ್ದು ಬುಧವಾರ ರಾತ್ರಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೆಟ್ ನಿರ್ಮಿಸುವಾಗ ಅಪಘಾತ ಸಂಭವಿಸಿದ್ದು, 10 ಜನರು ಗಾಯಗೊಂಡಿದ್ದಾರೆ.
“ನಾನು ಅನೇಕ ಅಪಘಾತಗಳನ್ನು ಎದುರಿಸಿದ್ದೇನೆ. ಆದರೆ ಇಂದಿನ ದಿನ ಅತ್ಯಂತ ಭಯಾನಕವಾಗಿದೆ. ನಾನು ಮೂವರು ಸಹೋದ್ಯೋಗಿಗಳನ್ನು ಕಳೆದುಕೊಂಡೆ. ಅವರ ಕುಟುಂಬ ಸದಸ್ಯರ ಯಾತನೆ ನನ್ನ ಸ್ವಂತ ನೋವುಗಿಂತ ಅನೇಕ ಪಟ್ಟು ಹೆಚ್ಚಾಗುತ್ತದೆ. ಅವರ ದುಃಖವನ್ನು ಅವರಲ್ಲಿ ಒಬ್ಬನಾಗಿ ಹಂಚಿಕೊಳ್ಳುತ್ತೇನೆ. ನನ್ನ ಸಂತಾಪ ಅವರಿಗೆ “ಎಂದು ಕಮಲ್ ಹಾಸನ್ ಟ್ವೀಟ್ಟರ್ ನಲ್ಲಿ  ತಿಳಿಸಿದ್ದಾರೆ.

Advertisement

ನಿರ್ದೇಶಕ ಶಂಕರ್ ಅವರ ವೈಯಕ್ತಿಕ ಸಹಾಯಕ ಮಧು (29) ಮತ್ತು ಸಹಾಯಕ ನಿರ್ದೇಶಕ ಕೃಷ್ಣ (34) ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ನಟ ಕಮಲ್ ಹಾಸನ್ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದರು.

ಚಿತ್ರೀಕರಣಕ್ಕಾಗಿ ಕ್ರೇನ್ ಬಳಸಿ ಲೈಟಿಂಗ್ ಸೆಟ್ ಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಸ್ಥಳದಲ್ಲಿ ನಿರ್ದೇಶಕ ಶಂಕರ್ ಕೂಡ ಇದ್ದು ಅವಘಡ ಸಂಭವಿಸುವ ವೇಳೇ ಅದೃಷ್ಟವಶಾತ್ ಪಾರಾಗಿದ್ದಾರೆ.

 

Advertisement

ಇಂಡಿಯನ್ 2 ಅನ್ನು ಪ್ರಸ್ತುತ ಚೆನ್ನೈನ ಇವಿಪಿ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗುತ್ತಿದೆ. ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ಮತ್ತು ಕಾಜಲ್ ಅಗರ್ವಾಲ್, ರಕುಲ್ ಪ್ರೀತ್, ಸಿದ್ಧಾರ್ಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು 2021 ರ ಆರಂಭದಲ್ಲಿ ಚಿತ್ರಮಂದಿರಗಳಲ್ಲಿರುತ್ತದೆ ಎಂದು ಅಂದಾಜಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next