Advertisement

Majestic 2: ಶೆಡ್ಡಿಗೆ ಹೋಗೋಣ ಬಾ… ಮೆಜೆಸ್ಟಿಕ್‌ನಲ್ಲಿ ಐಟಂ ಸಾಂಗ್‌

03:54 PM Jul 30, 2024 | Team Udayavani |

ಯಾವುದಾದರೊಂದು ಪದ ಅಥವಾ ವಿಚಾರ ವೈರಲ್‌ ಆದರೆ ಅದನ್ನು ಮೊದಲು ಬಳಸಿಕೊಳ್ಳುವ ಮಂದಿ ಎಂದರೆ ಅದು ಸಿನಿಮಾದವರು. ಒಂದಾ ಸಿನಿಮಾ ಟೈಟಲ್‌, ಸ್ಟೋರಿಲೈನ್‌, ಹಾಡು, ಡೈಲಾಗ್‌… ಹೀಗೆ ಎಲ್ಲಾದರೊಂದು ಕಡೆ ವೈರಲ್‌ ಪದನ್ನು ಬಳಸಿ

Advertisement

“ನೆಮ್ಮದಿಯ ನಿಟ್ಟುಸಿರು’ ಬಿಡುತ್ತಾರೆ. ಈಗ ಇದೇ ರೀತಿ “ಮೆಜೆಸ್ಟಿಕ್‌-2′ ತಂಡವೊಂದು ಇತ್ತೀಚೆಗೆ ವೈರಲ್‌ ಆಗಿರುವ “ಶೆಡ್ಡಿಗೆ ಹೋಗೋಣ ಬಾ.. ಕುಂಟೆಬಿಲ್ಲೆ ಆಡೋಣ ಬಾ’ ಎಂಬ ಪದ ಇಟ್ಟುಕೊಂಡು ಹಾಡು ಬರೆಸಿದೆ.

ಅದು ಐಟಂ ಸಾಂಗ್‌. ಇತ್ತೀಚೆಗೆ ಈ ಹಾಡಿನ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ರಾಮು ನಿರ್ದೇಶನದ ಈ ಚಿತ್ರವನ್ನು ಆನಂದಪ್ಪ ನಿರ್ಮಿಸುತ್ತಿದ್ದಾರೆ. ನವನಟ ಭರತ್‌ ಈ ಚಿತ್ರದ ನಾಯಕ.

ರೌಡಿಸಂ ಹಾಗೂ ಆ್ಯಕ್ಷನ್‌ ಹಿನ್ನೆಲೆಯ ಕಥಾಹಂದರ ಹೊಂದಿರುವ ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ನಟಿಸಿದ್ದಾರೆ. ಹಿರಿಯ ನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದ್ದು, ವೀನಸ್‌ ಮೂರ್ತಿ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next