Advertisement

ಮೆಕ್ಕೆ ಜೋಳ ಬೆಳೆಗೆ ಸೈನಿಕ ಹುಳು ದಾಳಿ

01:15 PM Dec 23, 2021 | Team Udayavani |

ಕಲಾದಗಿ: ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ರೈತರು ಮುಖ್ಯ ಬೆಳೆಯಾಗಿ ಗೋವಿನ ಜೋಳದ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದು,ಆದರೆ ಗೋವಿನಜೋಳಕ್ಕೆ ಈಗ ರೋಗಬಾಧೆಕಾಡುತ್ತಿರುವುದು ಕಲಾದಗಿ ಭಾಗದ ರೈತರು ಕಂಗಾಲು ಆಗುವಂತೆ ಮಾಡಿದೆ.

Advertisement

ಕಲಾದಗಿ ಭಾಗದಲ್ಲಿ ಪ್ರಮುಖ ಬೆಳೆ ಕಬ್ಬು ಇದ್ದರೆ, ಇದರ ಜೊತೆಗೆ ಮೆಕ್ಕೆಜೋಳದ ಬೆಳೆಯ ಮೇಲೆಹೆಚ್ಚು ಅವಲಂಬಿಸಿದ್ದಾರೆ. ಹಿಂಗಾರು ಹಂಗಾಮಿನ ಮೆಕ್ಕೆಜೋಳದ ಬೆಳೆಗೆ ಕೀಟರೋಗ ಬಾಧೆ ಕಾಡುತ್ತಿದೆ.ಬಿತ್ತನೆ ಮಾಡಿದ ಒಂದೂವರೆ ತಿಂಗಳಲ್ಲಿ ಬೆಳೆದ ಬೆಳೆಗೆ ದಿಢೀರ್‌ ಕೀಟಬಾಧೆ ರೋಗ ಕಾಣಿಸಿಕೊಂಡು ಬೆಳೆ ಭಾಗಶಃ ಹಾನಿಯಾಗುತ್ತಿದೆ. ಉದಗಟ್ಟಿ ಗ್ರಾಮದ ಮಲ್ಲಪ್ಪ ಕೋಟಿ ಅವರು ತಮ್ಮ ನಾಲ್ಕು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳಕ್ಕೆ ರೋಗ ಕಾಣಿಸಿಕೊಂಡು ಬೆಳೆ ಹಾನಿ ಆಗಿದೆ.  ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನ ಬೆಳೆಯಾಗಿ 200 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ.

ನಾಟಿ ಮಾಡಿದ ತಿಂಗಳ ಬೆಳೆಗೆ ಕೀಟಭಾದೆಯ ರೋಗ ಅಂಟಿಕೊಂಡು, ಸಂಪೂರ್ಣ ಪ್ರದೇಶದ ಬೆಳೆಗೆ ವ್ಯಾಪಿಸಿ ಬೆಳೆಯ ಸುಳಿಯ ಒಳಗೆ ಸೈನಿಕ ಹುಳು ದಾಳಿ ಇಟ್ಟಿದೆ. ಎಲೆಯ ಭಾಗವನ್ನು ತಿಂದು ಅಲ್ಲೇ ಲದ್ದಿ ಹಾಕುತ್ತಿದೆ. ಸಾಲಸೂಲ ಮಾಡಿ ಮೆಕ್ಕೆಜೋಳ ಬೆಳೆದ ರೈತರಿಗೆ ಸೈನಿಕ ಹುಳು ದಾಳಿ ಚಿಂತಾಕ್ರಾಂತವಾಗುವಂತೆ ಮಾಡಿದೆ.

ಕೃಷಿ ಇಲಾಖೆ ಅಧಿಕಾರಿಗಳು ಔಷಧಗಳ ಸಿಂಪರಣೆ ಕುರಿತು ಸೂಕ್ತ ಮಾಹಿತಿ ನೀಡಿ ಬೆಳೆ ರಕ್ಷಣೆಗೆ ಸಹಾಯಮಾಡಬೇಕು ಎಂದು ಮೆಕ್ಕೆಜೋಳ ಬೆಳೆದ ರೈತರು ಮನವಿ ಮಾಡಿದ್ದಾರೆ.

ಬಿತ್ತನೆ ಮಾಡಿದ ಒಂದೂವರೆ ತಿಂಗಳಲ್ಲಿ ಮೆಕ್ಕೆಜೋಳದ ಬೆಳೆಗೆ ಕೀಟ ರೋಗಬಾಧೆಕಾಣಿಸಿಕೊಂಡಿದ್ದು, ಬೆಳೆ ಭಾಗಶಃ ಹಾನಿಗಾಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಮಲ್ಲಪ್ಪ ಕೋಟಿ, ಉದಗಟ್ಟಿ ರೈತ

Advertisement

ಮೆಕ್ಕೆಜೋಳದ ಬಿತ್ತನೆ ಮಾಡಿದ ರೈತರ ತೋಟಗಳಿಗೆ ಭೇಟಿ ಮಾಡಲಾಗಿದೆ. ಇದುಸೈನಿಕ ಹುಳುವಿನ ದಾಳಿ ಆಗಿದೆ. ಸೂಕ್ತ ಔಷಧ ಸಿಂಪರಣೆ ಮಾಡಲು ರೈತರಿಗೆ ಮಾಹಿ ನೀಡಲಾಗಿದೆ. ಆರ್‌.ಎ.ಸುರಪುರ, ಕೃಷಿ ಅಧಿಕಾರಿ, ಕಲಾದಗಿ ಹೋಬಳಿ

ಚಂದ್ರಶೇಖರ ಹಡಪದ

Advertisement

Udayavani is now on Telegram. Click here to join our channel and stay updated with the latest news.

Next