Advertisement
ಮೈಪಾಲ ಕೆರೆ ಸುಮಾರು ಅರ್ಧ ಎಕರೆ ಭೂಪ್ರದೇಶದಲ್ಲಿದೆ. ಆದರೇ ಕೆರೆ ಕಣ್ಮರೆಯಾಗಿದೆ. ಇಲ್ಲೊಂದು ಕೆರೆ ಇತ್ತು ಎನ್ನುವುದನ್ನೇ ಜನರು ನಂಬಲಸಾಧ್ಯ ಎನ್ನುವಂತಿದೆ. ಕೆರೆಯಲ್ಲಿ ಹೂಳು ತುಂಬಿದ್ದು, ಅದರ ಮೇಲೆ ಮತ್ತು ಸುತ್ತಲೂ ಗಿಡಗಂಟಿ, ಮರಗಳು ಬೆಳೆದು, ಕೆರೆಯ ಕುರುಹೂ ಇಲ್ಲದಂತಾಗಿದೆ.
ಬಾವಿಗಳಿಲ್ಲದೆ ನೀರಿಗಾಗಿ ಪರಿತಪಿಸುತ್ತಿದ್ದ ಅಂದಿನ ಕಾಲದಲ್ಲಿ ಮೈಪಾಲ, ಹಿರ್ಗಾನ, ಪತ್ತೋಂಜಿಕಟ್ಟೆಯ ಹಲವು ಕೃಷಿ ಅಧಾರಿತ ಕುಟುಂಬಗಳಿಗೆ ನೀರಿನ ಆಶ್ರಯ ತಾಣವಾಗಿತ್ತು ಇದೇ ಮೈಪಾಲ ಕೆರೆ. ಇದು ದಾಹ ತೀರಿಸುವುದರ ಜತೆಗೆ ಕೃಷಿ ಚಟುವಟಿಕೆಗಳಿಗೆ ಈ ಕೆರೆಯ ನೀರು ಜೀವ ಜಲವಾಗಿತ್ತು.
Related Articles
ಕೆರೆಯಲ್ಲಿ ದಟ್ಟವಾಗಿ ನೀರು ಸಂಗ್ರಹವಾಗುತ್ತಿದ್ದ ರಿಂದ ಪರಿಸರದಲ್ಲಿ ಅಂತರ್ಜಲ ಮಟ್ಟ ಸಾಕಷ್ಟು ಮೇಲ್ಮಟ್ಟದಲ್ಲೇ ಇತ್ತು. ಬೇಸಗೆಯಲ್ಲೂ ನೀರಿನ ಅಭಾವ ಇರಲಿಲ್ಲ. ಆದರೆ ನಿರ್ಲಕ್ಷಿಸಿದ್ದರಿಂದ ಕೆರೆ ನೇಪಥ್ಯಕ್ಕೆ ಸರಿದಿದೆ.
Advertisement
ಹೂಳು ತೆಗೆದರೆ ಸಮೃದ್ಧ ನೀರು!ಹಿರಿಯ ತಲೆಮಾರಿನವರು ಇರುವಷ್ಟು ದಿನ ಕೆರೆಯನ್ನು ಸದುದ್ದೇಶಕ್ಕೆ ಬಳಸಿ ಕೊಂಡರು. ಅನಂತರದಲ್ಲಿ ಕೆರೆಯ ನಿರ್ಲಕ್ಷ ವಹಿಸುತ್ತ ಬರಲಾಗಿದೆ. ಕೆರೆ ಪಕ್ಕದಲ್ಲೇ ಪುರಸಭೆಯಿಂದ ಬಾವಿ ನಿರ್ಮಿಸಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಬಳಕೆಯಾಗುತ್ತಿದೆ. ಇದರಲ್ಲಿ ಸಮೃದ್ಧವಾಗಿ ನೀರಿದೆ. ಇದು ಕೆರೆಯ ತಳಭಾಗದಲ್ಲಿ ಸಮೃದ್ಧ ನೀರು ಈಗಲೂ ಇದೆ ಎನ್ನುವುದನ್ನು ಸೂಚಿಸುತ್ತದೆ. ಕ್ರಮ ಕೈಗೊಳ್ಳಲಾಗುವುದು
ಕೆರೆ ಅಭಿವೃದ್ಧಿ ವಿಚಾರವನ್ನು ನನ್ನ ಗಮನಕ್ಕೆ ಯಾರೂ ತಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು
-ನೀತಾ, ಕೌನ್ಸಿಲರ್, 1ನೇ ವಾರ್ಡ್ ಅಲೆದಾಡಿದರೂ ಪ್ರಯೋಜನವಾಗಿಲ್ಲ
ಪುರಾತನ ಕೆರೆಯನ್ನು ಅಭಿವೃದ್ಧಿಗೊಳಿಸಬೇಕು, ಹೂಳು ತೆಗೆಯಬೇಕು ಎಂದು ಸಂಬಂಧಿಸಿದ ಇಲಾಖೆಗೆ ಅನೇಕ ಪತ್ರ ವ್ಯವಹಾರ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಗಳಿಂದ ಪುರಸಭೆಗೆ ಪರಿಶೀಲಿಸಿ ಕ್ರಮಕ್ಕೆ ಸೂಚನೆಗಳು ಬಂದಿವೆ. ಪುರಸಭೆ ಇದು ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಡಿ ಬರುತ್ತದೆ ಎಂದು ಹಿಂಬರಹ ನೀಡಿದೆ. ಕೆರೆಯ ಸ್ಥಿತಿ ಇಂದಿಗೂ ಬದಲಾಗಲಿಲ್ಲ. ಯಾವ ಇಲಾಖೆಯಾದರೂ ಸರಿ ಕೆರೆ ಅಭಿವೃದ್ಧಿಗೊಳಿಸಿದರೆ ಒಳಿತು ಎಂದು ಸ್ಥಳಿಯ ನಿವಾಸಿ ಸಂತೋಷ್ ವಿ.ಕೋಟ್ಯಾನ್ ಹೇಳುತ್ತಾರೆ.