ಬೆಂಗಳೂರು: ಫ್ಲೈಓವರ್‌ನಿಂದ ಹರಿವ ನೀರನ್ನು ಸರಾಗವಾಗಿ ಬಿಡಿಸಿಕೊಡುವುದು, ಅದಕ್ಕಾಗಿ ಪೈಪ್ ಅಳವಡಿಕೆ, ಒಳಚರಂಡಿ, ರಾಷ್ಟ್ರೀಯ ಹೆದ್ದಾರಿಯ ಉಳಿಕೆ ಕಾಮಗಾರಿ ನಿರ್ವಹಿಸಲು ನವಯುಗ ಸಂಸ್ಥೆಗೆ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಕಾಮಗಾರಿ ನಿರ್ವಹಿಸಲು ಸೂಚಿಸಿದ್ದು ಮೇಲ್ವಿಚಾರಣೆ ನಡೆಯುತ್ತಿದೆ ಎಂದು ಸರಕಾರ ಸದನದಲ್ಲಿ ಉತ್ತರಿಸಿದೆ.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಕುಂದಾಪುರದಲ್ಲಿ ಹೆದ್ದಾರಿಯಿಂದ ನಗರಕ್ಕೆ ಪ್ರವೇಶ ಸೇರಿದಂತೆ ರಾ.ಹೆ.66ರ ಕುರಿತು ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಉತ್ತರಿಸಿದ್ದಾರೆ.
ಫ್ಲೈಓವರ್ ಅಡಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಉದ್ಯಾನವನ ನಿರ್ಮಿಸ ಬಹುದು. ವಾಹನ ಪಾರ್ಕಿಂಗ್‌ಗೆ ಅವಕಾಶ ಒದಗಿಸಿಲ್ಲ. ಕುಂದಾಪುರ, ತೊಕ್ಕೊಟ್ಟು, ಪಂಪ್‌ವೆಲ್ ಫ್ಲೈಓವರ್‌ನಲ್ಲಿ ಮಳೆನೀರು ಹರಿಯಲು ಪೈಪ ಅಳವಡಿಕೆ ಪೂರ್ಣಗೊಂಡಿಲ್ಲ. ಕುಂದಾಪುರ ನಗರದಲ್ಲಿ ಹೆದ್ದಾರಿಯಿಂದ ಪ್ರವೇಶ ನೀಡುವ ಕುರಿತು ಬೇಡಿಕೆ ಬಂದಿದೆ. ವಿನಾಯಕ ಬಳಿ ಹಾಗೂ ಎಪಿಎಂಸಿ ಬಳಿ ಅವಕಾಶ ನೀಡಿದ್ದು ಬೊಬ್ಬರ್ಯನಕಟ್ಟೆ ಬಳಿ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಅದಕ್ಕಾಗಿ ಸರ್ವಿಸ್ ರಸ್ತೆಯಲ್ಲಿಯೇ ನಗರಕ್ಕೆ ಬರಲು ಅವಕಾಶ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ.
ಸುದಿನ ವರದಿ
ಕುಂದಾಪುರ ನಗರಕ್ಕೆ ಹೆದ್ದಾರಿಯಿಂದ ಪ್ರವೇಶ ಅವಕಾಶ ನೀಡುವ ಕುರಿತು ಫ್ಲೈಓವರ್ ಕಾಮಗಾರಿ ಪೂರ್ಣ ಗೊಳ್ಳುವ ಮುನ್ನವೇ, ಎರಡು ವರ್ಷಗಳಿಂದ ಅನೇಕ ಬಾರಿ “ಉದಯವಾಣಿ’ “ಸುದಿನ’ ವರದಿ ಮಾಡಿತ್ತು. ಪುರಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಸಚಿವೆ, ಶಾಸಕರು ಇಲಾಖೆಯ ಗಮನ ಸೆಳೆದಿದ್ದರು. ಜಿಲ್ಲಾಧಿಕಾರಿಗಳು, ಸ.ಕಮಿಷನರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು.