Advertisement

ಅಂಗನವಾಡಿ ಕೇಂದ್ರಗಳಲ್ಲಿ ನಿರ್ವಹಣೆ ಸೂಕ್ತವಾಗಿಲ್ಲ: ಆರೋಪ

09:35 PM Jan 01, 2020 | Team Udayavani |

ಭೇರ್ಯ: ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸರಿಯಾಗಿ ಆಹಾರ ನೀಡುತ್ತಿಲ್ಲ. ಶುಚಿತ್ವ ಕಾಪಾಡುತ್ತಿಲ್ಲ. ಕಾರ್ಯಕರ್ತೆಯರು ಸರಿಯಾಗಿ ಕಾರ್ಯನಿರ್ವಸುತ್ತಿಲ್ಲ ಎಂದು ತಾಪಂ ಅಧ್ಯಕ್ಷ ಕೆ.ಪಿ.ಯೋಗೇಶ್‌ ಆರೋಪಿಸಿದ್ದಾರೆ. ಭೇರ್ಯ ವ್ಯಾಪ್ತಿಯ ಅಂಗನವಾಡಿ ಕೇಂದ್ರ, ಗ್ರಾಪಂಗೆ ಭೇಟಿ ನೀಡಿ ಪರಿಶೀಲಿಸಿ, ಅಸಮಾಧಾನ ವ್ಯಕ್ತಪಡಿಸಿದರು.

Advertisement

ಬಟಿಗನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಇರಲಿಲ್ಲ, ಕೇಳಿದರೆ ರಜೆ ಮೇಲೆ ಇದ್ದಾರೆ ಎನ್ನುತ್ತಾರೆ. ಆದರೆ ಹಾಜರಾತಿ ಪುಸ್ತಕ ನೋಡಿದರೇ ಅವರು ಕಳೆದ ಮೂರು ದಿನಗಳಿಂದ ಅಂಗನವಾಡಿ ಕೇಂದ್ರಕ್ಕೆ ಬಂದಿಲ್ಲ. ಈ ಬಗ್ಗೆ ವಿವರಣೆ ಕೊಡಿ ಎಂದು ಈ ಭಾಗದ ಅಂಗನವಾಡಿ ಕೇಂದ್ರಗಳ ಮೇಲ್ವಚಾರಕಿ ಶೋಭಾ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಹೊಸ ಅಗ್ರಹಾರದ ಅಂಗನವಾಡಿ ಕೇಂದ್ರ ಶುಚಿತ್ವದಿಂದ ಕೂಡಿಲ್ಲ. ಮಕ್ಕಳ ಹಾಜರಾತಿಯನ್ನು ಪುಸ್ತಕದಲ್ಲಿ ಮೂರು ದಿನಗಳಿಂದ ನಮೂದು ಮಾಡಿಲ್ಲ. ಸರಿಯಾದ ಆಹಾರ ತರಣೆಯಾಗಿಲ್ಲ. ಆಹಾರ ತರಣೆ ಆಗದಿರುವ ಬಗ್ಗೆ ತಾಪಂ ಸಭೆಯಲ್ಲಿ ಏಕೆ ಅಧ್ಯಕ್ಷರು ಮತ್ತು ಇಒ ಅವರ ಗಮನಕ್ಕೆ ತಂದಿಲ್ಲ ಎಂದು ಅಕ್ಕಮಹಾದೇವಿಯವರನ್ನು ತರಾಟೆ ತೆಗೆದು ಕೊಂಡರು.

ನಂತರ ಭೇರ್ಯ ಗ್ರಾಪಂಗೆ ಭೇಟಿ ನೀಡಿದ ಅಧ್ಯಕ್ಷ ಯೋಗೇಶ್‌, ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆದಿಲ್ಲ. ಪಿಡಿಒ ಪಂಚಾಯಿತಿಗೆ ಪಿಡಿಒ ಸರಿಯಾಗಿ ಬರುತ್ತಿಲ್ಲ. ಇಲ್ಲಿನ ಸ್ವತ್ಛತೆ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಗ್ರಾಪಂ ಪಕ್ಕದಲ್ಲಿಯೇ ಕಸದ ರಾಶಿಯಿದೆ ಎಂದು ಅಸಮಧಾನ ವ್ಯಕ್ತಿಪಡಿಸಿ, ಈ ಎಲ್ಲ ಸಮಸ್ಯೆಗಳ ಬಗ್ಗೆ ಇಒ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹೊಸಅಗ್ರಹಾರ ಗ್ರಾಪಂಗೆ ಭೇಟಿ ನೀಡಿ, ನೂತನವಾಗಿ ನಿರ್ಮಾಣ ಮಾಡಿರುವ ಗ್ರಾಪಂ ಕಚೇರಿ ಕಟ್ಟಡ ಕಾಮಗಾರಿ ಪರಿಶೀಲಿಸಿ, ಉತ್ತಮ ಗುಣಮಟ್ಟದಲ್ಲಿ ಕಟ್ಟಡ ಕಾಮಗಾರಿ ನಡೆದಿದೆ ಎಂದು ತಿಳಿಸಿದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರದೀಪ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಅಕ್ಕಮಹಾದೇವಿ, ಶೋಭಾ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next