ರಾಂಪುರ: ಈಗಾಗಲೇ ಚಾಲ್ತಿಯಲ್ಲಿ ಇರುವ ಹಾಗೂ ಕೈಗೆತ್ತಿಕೊಳ್ಳಲಾಗುವ ಕಾಮಗಾರಿಗಳನ್ನು ಪಾರದರ್ಶಕತೆಯಿಂದ ನಿರ್ವಹಿಸುವದರ ಮೂಲಕ ದೂರುಗಳಿಗೆ ಆಸ್ಪದ ನೀಡದಂತೆ ನಿಗಾವಹಿಸಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಅವರು ಜಿ.ಪಂ. ಇಂಜನಿಯರ್ ವಿಭಾಗ ಹಾಗೂ ಪ್ರಸಕ್ತ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿನ ಬೊಮ್ಮಣಗಿ-ಎನ್‌ಎಚ್50 (90 ಲಕ್ಷ ರೂ), ಬೇವೂರ-ಗಂಜಿಹಾಳ(160 ಲಕ್ಷ ರೂ.), ಚವಡಾಪುರ- ಸುರಳಿಕಲ್ಲ (100 ಲಕ್ಷ ರೂ.), ಹಳ್ಳೂರ-ಕಡ್ಲಿಮಟ್ಟಿ ರೇಲ್ವೆ ನಿಲ್ದಾಣಕ್ಕೆ ಕೂಡುವ (140 ಲಕ್ಷ ರೂ.), ಬೆನಕಟ್ಟಿ -ಕಮತಗಿ (145 ಲಕ್ಷ ರೂ.) ಕಿರಸೂರ-ಮುಗಳೊಳ್ಳಿ ಆರ್.ಸಿ. (170 ಲಕ್ಷ ರೂ.) ಬೇವಿನಮಟ್ಟ ಕ್ರಾಸ್‌ದಿಂದ ಎನ್.ಎಚ್.367 ಕೂಡು ರಸ್ತೆ (75 ಲಕ್ಷ ರೂ.) ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ಕಾರಣಕ್ಕೂ ಈ ಯೋಜನೆಯಡಿ ಕೈಗೊಳ್ಳಲಾಗುವ ಕಾಮಗಾರಿ ವಿಳಂಬವಾಗದಂತೆ ನಿಗಾ ವಹಿಸಿ. ಪ್ರಸಕ್ತ ಆರ್ಥಿಕ ಸಾಲಿನಲ್ಲಿಯೇ ಕಾಮ ಗಾರಿ ಪೂರ್ಣಗೊಳ್ಳುವಂತೆ ನಿಗಾ ವಹಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಕೃಷಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಕೃಷಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಅ ಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಮಗಾರಿಗಳ ನಿರ್ವಹಣೆಯನ್ನು ಮಾರ್ಗಸೂಚಿ ಅನ್ವಯ ಕೈಗೊಳ್ಳಬೇಕೆಂದು ಹೇಳಿದರು. ಜಿಪಂ ಮುಖ್ಯ ಇಂಜನಿಯರ್ ವ್ಹಿ.ಎಸ್. ಕೊಟಗಿ ಮಾತನಾಡಿ, ಕಾಮಗಾರಿ ನಡೆಯುವ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಆರಂಭಿಸುವ ಮುನ್ನ ರೈತರು ನೀರಿನ ಪೈಪ್‌ಲೈನ್‌ಗಳನ್ನು ಹಾಕಿಕೊಳ್ಳಬೇಕು. ರಸ್ತೆ ನಿರ್ಮಿಸಿದ ಬಳಿಕೆ ರಸ್ತೆ ಅಗೆಯುವುದನ್ನು ಮಾಡಬಾರದು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶಾಸಕರು ಹಲವು ಯೋಜನೆಗಳನ್ನು ಅನುಷ್ಠಾನ ಗೊಳಿಸಿದ್ದಾರೆ. ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಜಿಪಂ ಸಹಾಯಕ ಇಂಜನೀಯರ ಈಶ್ವರ ಕುರುಬಗಟ್ಟಿ, ಸೆಕ್ಷನ್ ಆಫೀಸರ್ ಬಲವಂತ ನಾಯ್ಕರ್, ಜೆ.ಇ. ಗಳಾದ ಗಜಾನನ ಪಾಟೀಲ, ರಕ್ಷಾ ಕಳ್ಳಿಗುಡ್ಡ, ಗುತ್ತಿಗೆದಾರರಾದ ವ್ಹಿ.ಎಸ್. ಬೊಮ್ಮಣಗಿ, ವಿ.ಎನ್. ದ್ಯಾಮನಗೌಡರ, ಟಿ.ಎಸ್. ಅಬ್ದುಲ್‌ಪೂರ, ವ್ಹಿ.ಎಸ್. ಸುಣಗ, ಗ್ರಾಮೀಣ ಅಧ್ಯಕ್ಷ ಸುರೇಶ ಕೊಣ್ಣೂರ, ರಾಜು ಮುದೇನೂರ, ಉಮೇಶ ಜುಮನಾಳ, ತುಕಾರಾಮ ಮಾಗಿ, ತಾಪಂ ಇಒ ಶಿವಾನಂದ ಕಲ್ಲಾಪೂರ, ನಿಂಗಪ್ಪ ಮುಗನೂರ, ಪರಪ್ಪ ಗುನ್ನಿ, ಶೇಖಣ್ಣ ಹೆರಕಲ್, ಯಂಕಪ್ಪಗೌಡ ಮಾಗನೂರ, ರವಿ ಗಡೇದ, ಬಸವರಾಜ ಅಮರಗೋಳ, ಮಹಾಂತೇಶ ಹರಗಬಲ್ಲ, ಪಿಡಿಒ ವ್ಹಿ.ಎಸ್. ಮಳೆನ್ನವರ, ಎಸ್.ಎಚ್. ಕಾಳಗಿ, ಸುನೀತಾ ಅಂಕೋಲೆ ಇದ್ದರು.